ವೈರಮುತ್ತು ಹಾಗೂ ರಾಧಾ ರವಿ 
ಸಿನಿಮಾ ಸುದ್ದಿ

#MeToo: ತಮಿಳಿನ ಪ್ರಸಿದ್ದ ಗೀತರಚನೆಕಾರ ವೈರಮುತ್ತು, ನಟ ರಾಧಾ ರವಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ!

ಭಾರತದಲ್ಲಿ ದಿನ ದಿನಕ್ಕೆ ಕಾವು ಪಡೆದುಕೊಳ್ಳುತ್ತಿರುವ "ಮೀ ಟೂ" ಅಭಿಯಾನಕ್ಕೆ ಇದೀಗ ತಮಿಳು ಚಿತ್ರರಂಗವೂ ಹೊರತಾಗಿಲ್ಲ. ತಮಿಳಿನ ಖ್ಯಾತ ಗೀತ ರಚನೆಗಾರ ವೈರಮುತ್ತು ತಮಗೆ....

ಚೆನ್ನೈ: ಭಾರತದಲ್ಲಿ ದಿನ ದಿನಕ್ಕೆ ಕಾವು ಪಡೆದುಕೊಳ್ಳುತ್ತಿರುವ "ಮೀ ಟೂ" ಅಭಿಯಾನಕ್ಕೆ ಇದೀಗ ತಮಿಳು ಚಿತ್ರರಂಗವೂ ಹೊರತಾಗಿಲ್ಲ. ತಮಿಳಿನ ಖ್ಯಾತ ಗೀತ ರಚನೆಗಾರ ವೈರಮುತ್ತು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಮೂವರು ಅನಾಮಧೇಯ ಮಹಿಳೆಯರು ಆರೋಪಿಸಿದರೆ ತಮಿಳು ಚಿತ್ರರಂಗದ ಹಿರಿಯ ನಟ ರಾಧಾ ರವಿ ವಿರುದ್ಧ ಸಹ ಓರ್ವ ಮಹಿಳೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.
ಅದೊಮ್ಮೆ ವೈರಮುತ್ತು 18ರ ಹರೆಯದ ಇಬ್ಬರು ಗಾಯಕಿಯರನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಕಛೇರಿ ಹಾಗೂ ಮನೆ ಎರಡು ಆಗಿದ್ದ ವೈರಮುತ್ತು ಅವರ ನಿವಾಸಕ್ಕೆ ಆಗಮಿಸಿದ ಓರ್ವ ಗಾಯಕಿಯನ್ನು ವೈರಮುತ್ತು ತಬ್ಬಿ ಮುತ್ತಿಕ್ಕಿದ್ದಾಗಿ ಆಕೆ ಹೇಳಿಕೊಂಡಿದ್ದಾರೆ. ಇನ್ನೋರ್ವ ಗಾಯಕಿ ತಾವು ಅವರ ನಿವಾಸದಲ್ಲಿದ್ದಾಗ ಅವರು ಬಾಗಿಲು ಭದ್ರಪಡಿಸಿ ತಮ್ಮನ್ನು ಸ್ಪರ್ಷಿಸಿದ್ದರು ಎಂದು ಆರೋಪಿಸಿದ್ದಾರೆ.
ಪತ್ರಕರ್ತರಾದ ಸಂಧ್ಯಾ ಮೆನನ್ ಸಂತ್ರಸ್ಥೆಯರ ಪರ ಟ್ವೀಟ್ ಮಾಡಿದ್ದಾರೆ.
ಇದರಲ್ಲಿ ಓರ್ವ ಗಾಯಕಿಯು ತನ್ನ ವೃತ್ತಿಜೀವನ ನಾಶವಾಗುವ ಭಯದಿಂದ ಈ ವಿಚಾರವನ್ನು ತಮ್ಮ ಪತಿಯ ಬಳಿ ಸಹ ಹೇಳಿಕೊಂಡಿರಲಿಲ್ಲ ಎಂದು ವಿವರಿಸಿದ್ದಾರೆ.
ಮೂರನೇ ಸಂತ್ರಸ್ಥೆಯ ಪರವಾಗಿ ಗಾಯಕಿ ಚಿನ್ಮಯಿ ಟ್ವೀಟ್ ಮಾಡಿದ್ದು ವೈರಮುತ್ತು ಹಾಸ್ಟೆಲ್ ಬಗೆಗೆ, ಅಲ್ಲಿನ ಹುಡುಗಿಯರೊಡನೆ ವೈರಮುತ್ತು ವಿವಿಧ ರೀತಿಯಲ್ಲಿ ವರ್ತಿಸುತ್ತಿದ್ದದ್ದರ ಬಗೆಗೆ ಅಲ್ಲಿ ವಿವರಗಳಿದೆ.
ಇನ್ನೊಂದೆಡೆ ಬಿಹೈಂಡ್ ವುಡ್ಸ್ ನ ಉದ್ಯೋಗಿಯಾಗಿಯೊಬ್ಬರು ಅನಾಮಧೇಯ ಮಹಿಳೆಯ ಪರವಾಗಿ ಟ್ವೀಟ್ ಮಾಡಿದ್ದು ನಟ ರಾಧಾ ರವಿ ಆಕೆಯನ್ನು ಅಪ್ಪಿಕೊಂಡಿದ್ದು ಚುಂಬಿಸಿದ್ದಾರೆ. ಹಾಗೆಯೇ ಆಕೆ ತನ್ನ ಕೆಲಸ ಮುಗಿದ ಬಳಿಕ ಏಕಾಂತವಾಗಿ ತನ್ನನ್ನು ಭೇಟಿಯಾಗುವಂತೆ ನಟ ಅವಳಿಗೆ ಸೂಚಿಸಿದ್ದರು ಎಂದು ಬರೆಯಲಾಗಿದೆ.
ಸಂಸ್ತ್ರಸ್ಥೆಯರು ಸೂಚಿಸಿರುವ ಇಬ್ಬರೂ ವ್ಯಕ್ತಿಗಳು ರಾಜಕೀಯ ವಲಯದ ಸಂಪರ್ಕ ಹೊಂದಿದ್ದಾರೆ.
ಭಾರತದಲ್ಲಿ ಕಳೆದೊಂದು ವಾರದಿಂದ "ಮೀ ಟೂ" ಅಭಿಯಾನ ನಡೆಯುತ್ತಿದೆ. ಕಾಮೆಡಿಯನ್ ಉತ್ಸವ್ ಚಕ್ರವರ್ತಿ ಇದನ್ನು ಪ್ರಾರಂಭಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!