ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಪುತ್ರನ ಜೀವನದಲ್ಲಿ ಕಷ್ಟ ಎದುರಾಗಿದ್ದು ತಮ್ಮ ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.
ಚಿತ್ರರಂಗದಿಂದ ದೂರವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ವಿನೋದ್ ರಾಜ್. ಆದರೆ ಈಗ ಕೃಷಿಯಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ. ಕೃಷಿ ಚಟುವಟಿಕೆಯಲ್ಲಿ ತುಂಬಲಾಗದ ನಷ್ಟವಾಗಿದ್ದು ಬೆಲೆ ಏರಿಕೆ ವ್ಯಾಪಾರ ವಹಿವಾಟಿನಲ್ಲಿ ಏರುಪೇರಾಗಿದೆ. ಅಲ್ಲದೆ ಇತ್ತೀಚೆಗಷ್ಟೇ ವಿನೋದ್ ರಾಜ್ ಅವರ ಕಾರನಲ್ಲಿದ್ದ 1 ಲಕ್ಷ ರುಪಾಯಿಯನ್ನು ಕಳ್ಳರು ದೋಚಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿರುವ ಆಸ್ತಿ ಮಾರಾಟಕ್ಕೆ ಮುಂದಾಗಿದ್ದಾರೆ.
ಕೂಲಿಯಾಳುಗಳಿಗೆ ಸಂಬಳ ಕೊಡಬೇಕೆಂದು ತಂದಿದ್ದ ಹಣ ಇತ್ತೀಚೆಗೆ ಕಳುವಾಯಿತು. ಇದು ನಮ್ಮ ಬದುಕು ಆರ್ಥಿಕ ಸಂಕಷ್ಟಕ್ಕೆ ಸಿಲುವಂತಾಗಿದೆ. ಇದರಿಂದಾಗಿ ನಾನು ಸ್ವಲ್ಪ ಆಸ್ತಿಯನ್ನು ಮಾರಲು ಮುಂದಾಗಿರುವುದಾಗಿ ವಿನೋದ್ ರಾಜ್ ಹೇಳಿದ್ದಾರೆ.