ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಗೀತಾ' ಸಿನಿಮಾಗೆ ಪಾರ್ವತಿ ಅರುಣ್ ನಾಯಕಿ!
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾದಲ್ಲಿ ಮೂವರು ನಾಯಕಿಯರಿದ್ದು, ಪಾರ್ವತಿ ಅರುಣ್ ಮೊದಲ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ...
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾದಲ್ಲಿ ಮೂವರು ನಾಯಕಿಯರಿದ್ದು, ಪಾರ್ವತಿ ಅರುಣ್ ಮೊದಲ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ಪಾರ್ವತಿ ಹೊಸಮುಖವಾಗಿದ್ದು, ಗೀತಾ ಸಿನಿಮಾಗೆ ಸಹಿ ಮಾಡಿದ್ದಾರೆ. ವಿಜಯ್ ನಾಗೇಂದ್ರ ಗೀತಾ ಸಿನಿಮಾ ನಿರ್ದೇಶಿಸುತ್ತಿದ್ದಾರೆ.
ಪಾರ್ವತಿ ಈ ಮೊದಲು ಮಲಯಾಳಂ ನಲ್ಲಿ ಈಕೆ ನಟಿಸಿದ್ದಾರೆ, ಕನ್ನಡದಲ್ಲಿ ಇದು ಮೊದಲ ಸಿನಿಮಾವಾಗಿದೆ, ಗಣೇಶ್ ಜೊತೆ ಪರದೆ ಹಂಚಿಕೊಳ್ಳುತ್ತಿರುವ ಪಾರ್ವತಿ ಜೊತೆ ಇನ್ನೂ ಇಬ್ಬರು ನಾಯಕಿಯರಿದ್ದಾರೆ, ಗಣೇಶ್ ಸದ್ಯ ಗಿಮ್ಮಿಕ್ ಶೂಟಿಂಗ್ ಗಾಗಿ ಶ್ರೀಲಂಕಾದಲ್ಲಿದ್ದಾರೆ, ಇದಾದ ನಂತರ ಗೀತಾ ಶೂಟಿಂಗ್ ಡಿಸೆಂಬರ್ ನಲ್ಲಿ ಆರಂಭವಾಗಲಿದೆ.
ವಿ. ಹರಿಕೃಷ್ಣ ಸಂಗೀತ ನೀಡಿದ್ದು, ಸೈಯ್ಯದ್ ಸಲಾಮ್ ಮತ್ತು ಗಣೇಶ್ ಹೋಮ್ ಬ್ಯಾನರ್ ನಲ್ಲಿ ಸಿನಿಮಾ ತಯಾರಾಗುತ್ತಿದೆ. 1981 ರಲ್ಲಿ ಶಂಕರ್ ನಾಗ್ ನಟಿಸಿದ್ದ ಗೀತಾ ಸಿನಿಮಾ ಟೈಟಲ್ ಗಣೇಶ್ ಸಿನಿಮಾಗೆ ಇಡಲಾಗಿದೆ, ಉಳಿದ ಕಲಾವಿದರನ್ನು ಶೀಘ್ರವೇ ಆಯ್ಕೆ ಮಾಡಲಾಗುವುದು. ಕೊಲ್ಕತಾ ಮೈಸೂರು ಮತ್ತು ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.