ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

#MeToo:ಅರ್ಜನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಮಿ ಟೂ ಅಭಿಯಾನ ಹಲವು ರಾಜಕೀಯ ಗಣ್ಯರ ಹಾಗೂ ನಟರ ನಿದ್ದೆಗೆಡಿಸಿದ್ದು, ಈಗ...

ಅರ್ಜನ್ ಸರ್ಜಾ, ಶೃತಿ ಹರಿಹರನ್
Lingaraj Badiger
Updated On : 20 Oct 2018, 11:32 am
ಬೆಂಗಳೂರು: ಮಿ ಟೂ ಅಭಿಯಾನ ಹಲವು ರಾಜಕೀಯ ಗಣ್ಯರ ಹಾಗೂ ನಟರ ನಿದ್ದೆಗೆಡಿಸಿದ್ದು, ಈಗ ಖ್ಯಾತ ಬಹುಭಾಷಾ ನಟ ಅರ್ಜನ್ ಸರ್ಜಾ ಅವರಿಗೂ #MeToo ಬಿಸಿ ತಟ್ಟಿದೆ.
'ಗಂಡ ಹೆಂಡತಿ' ಚಿತ್ರದ ಖ್ಯಾತಿಯ ನಟಿ ಸಂಜನಾ ಗುಲ್ರಾಣಿ ನಂತರ ಸ್ಯಾಂಡಲ್ ವುಡ್ ಖ್ಯಾತ ನಟಿ ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆ ತನ್ನ ಮೇಲಾದ ಲೈಂಗಿಕ ಕಿರುಕುಳದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ನನಗೆ ಪದೇ ಪದೇ ಡಿನ್ನರ್ ಗೆ ಹೋಗೋಣ ಎಂದು ನಟ ಅರ್ಜುನ್ ಸರ್ಜಾ  ಪೀಡಿಸುತ್ತಿದ್ದರು ಎಂದು ಮ್ಯಾಗಜೀನ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶ್ರುತಿ ಹರಿಹರನ್ ಹೇಳಿದ್ದಾರೆ. 

Advertisement

Advertisement

ಡಿನ್ನರ್ ಗೆ ಬರುವುದಿಲ್ಲ ಎಂದರೂ ಕೂಡ ಪದೇ ಪದೇ ಪೀಡಿಸುತ್ತಿದ್ದರು. ಅಲ್ಲದೆ ವಿಸ್ಮಯ ಚಿತ್ರದ ಚಿತ್ರೀಕರಣ ವೇಳೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪಿಸಿದ್ದಾರೆ.
ಪತಿ - ಪತ್ನಿ ಪಾತ್ರದಲ್ಲಿ ಅಭಿನಯಿಸಿದರೂ ಅದಕ್ಕೆ ಒಂದು ಗಡಿರೇಖೆ ಇರುತ್ತದೆ. ಆದರೆ ಅರ್ಜುನ್ ಸರ್ಜಾ ಆ ಗಡಿ ರೇಖೆಯನ್ನು ಮೀರಿದ್ದರು ಎಂದು ಶ್ರುತಿ ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments