ಅರ್ಜುನ್ ಸರ್ಜಾ ಮತ್ತು ಶೃತಿ ಹರಿಹರನ್
ಬೆಂಗಳೂರು: ನಟ ಅರ್ಜುನ್ ಸರ್ಜಾ 5 ಕೋಟಿ ರು ಮಾನನಷ್ಟ ಮೊಕದ್ದಮೆ ನೀಡುವಂತೆ ಕೇಸು ದಾಖಲಿಸಿರುವ ಬೆನ್ನಲ್ಲೆ ನಟಿ ಶೃತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ದ ದೂರು ದಾಖಲಿಸಿ ತಮಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ.
ಅರ್ಜುನ್ ಸರ್ದಾ ಆಪ್ತ ಪ್ರಶಾಂತ್ ಸಂಬರಗಿ ವಿರುದ್ಧ ಶ್ರುತಿ ಹರಿಹರನ್ ಬೆಂಗಳೂರು ಹೈಗ್ರೌಂಡ್ಸ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೀವ ಬೆದರಿಕೆ ಹಾಗೂ ಖಾಸಗಿತನಕ್ಕೆ ಧಕ್ಕೆ ಆರೋಪದಡಿ ಪ್ರಕರಣದಡಿ ದೂರು ದಾಖಲಾಗಿದೆ.
ಫಿಲ್ಮ್ ಚೇಂಬರ್ ಗೆ ಕವಿತಾ ಲಂಕೇಶ್ ಜೊತೆ ತೆರಳಲು ಸಿದ್ದವಾಗುತ್ತಿದ್ದೆ, ಗುರುವಾರ ಸಂಜೆ 4 ಗಂಟೆ ಸಮಯದಲ್ಲಿ ಪ್ರಶಾಂತ್ ಮತ್ತು ಆತನ ಜೊತೆಗಿದ್ದ ಕೆಲವರು, ನನಗೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ದೂರಿನಲ್ಲಿ ದಾಖಲಿಸಲಾಗಿದೆ,
ಫಿಲ್ಮ್ ಚೇಂಬರ್ ನಲ್ಲಿ ನಡೆದ ಸಭೆಯಲ್ಲಿ ಏನೇನು ನಡೆದಿತ್ತು ಹಾಗೂ ಅರ್ಜನ್ ಸರ್ಜಾ ಅವರಿಂದ ಉಂಟಾದ ಲೈಂಗಿಕ ಕಿರುಕುಳದ ಬಗ್ಗೆ ವಿವರಿಸಿದ್ದೇನೆ, ಯಾವುದೇ ಕಾರಣಕ್ಕೂ ದೂರು ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾಗಿ ಶೃತಿ ತಿಳಿಸಿದ್ದಾರೆ.ಇನ್ನೂ ಮೀಟಿಂಗ ಮುಗಿದ ನಂತರ ಪೊಲೀಸರಿಗೆ ದೂರು ದಾಖಲಿಸಿರುವ ನಟಿ, ನಿನ್ನನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ಒಂಬ್ಬ ಹಿಂದೂ ಮಹಿಳೆಯಾಗಿ ಹೆಣ್ತನಕ್ಕೆ ಗೌರವ ನೀಡಲು ಗೊತ್ತಿಲ್ಲವೇ, ನಿನ್ನ ಫೇಸ್ ಬುಕ್ ಅಕೌಂಟ್ ನ ಎಲ್ಲಾ ಮಾಹಿತಿ ನನ್ನ ಬಳಿಯಿದೆ, ಏನು ಮಾಡಬೆಕೆಂದು ನನಗೆ ತಿಳಿದಿದೆ ಎಂದು ಪ್ರಶಾಂತ್ ಬೆದರಿಕೆ ಹಾಕಿದ್ದಾರೆ ಎಂದು ಶೃತಿ ಹರಿಹರನ್ ದೂರಿನಲ್ಲಿ ದಾಖಲಿಸಿದ್ದಾರೆ.
ಕೇವಲ ಮಾನಹಾನಿ ಮಾತ್ರವಲ್ಲ,ನನ್ನ ಇಮೇಜ್ ಗೂ ಧಕ್ಕೆ ತರುವಂತೆ ಮಾತನಾಡಿದ್ದಾರೆ, ಅರ್ಜುನ್ ಸರ್ಜಾ ಅವರಿಗೆ ತುಂಬಾ ಆಪ್ತರಾಗಿರುವ ಪ್ರಶಾಂತ್, ಸಾರ್ವಜನಿಕರು ಮತ್ತು ಸರ್ಜಾ ಅವರ ಅಭಿಮಾನಿಗಳನ್ನು ನನ್ನ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅರ್ಜುನ್ ಸರ್ಜಾ ಅವರು ಹಿರಿಯ ನಟರಾಗಿದ್ದು, ಅವರ ಅಭಿಮಾನಿಗಳು ನನ್ನ ಮೇಲೆ ದಾಳಿ ಮಾಡುವ ಸಾಧ್ಯತೆಯಿದೆ ಹೀಗಾಗಿ ತಮಗೆ ರಕ್ಷಣೆ ನೀಡಬೇಕೆಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos