ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಅಹರಿಪ್ರಿಯಾಗೆ ಇಂದು (ಸೋಮವಾರ) 28ನೇ ಜನ್ಮದಿನದ ಸಂಭ್ರಮ. ಈ ಸಂದರ್ಭದಲ್ಲಿ ಹರಿಪ್ರಿಯಾ ಅಭಿನಯಿಸುತ್ತಿರುವ "ಡಾಟರ್ ಆಫ್ ಪಾರ್ವತಮ್ಮ" ಚಿತ್ರತಂಡವು ಅವರ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸಿ ಹುಟ್ಟುಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಮೆರುಗು ತಂದಿದೆ.
ಇದಾಗಲೇ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು ಅದರಲ್ಲಿ ಹರಿಪ್ರಿಯಾ ಖಡಕ್ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಬಿಡುಗಡೆಯಾಗಿರುವ ಪೋಸ್ಟರ್ ನಲ್ಲಿ ಬೇರೆಯಏ ಗೆಟಪ್ ನಲ್ಲಿದ್ದಾರೆ. ಯಮಹಾ ಬೈಕ್ ಏರಿ ಸುತ್ತಾಡುತ್ತಿರುವ ಹರಿಪ್ರಿಯಾ ಈ ಚಿತ್ರದಲ್ಲಿ ಎರಡು ಶೇಡ್ ಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಒಂದು ಖಡಕ್ ಪೋಲೀಸ್ ಅಧಿಕಾರಿಯದಾದರೆ ಇನ್ನೊಂದು ಟಾಮ್ ಬಾಯ್ ಗೆಟಪ್ ಆಗಿದೆ.
ಇನ್ನು "...ಪಾರ್ವತಮ್ಮ" ಹರಿಪ್ರಿಯಾ ವೃತ್ತಿ ಜೀವನದ 25ನೇ ಚಿತ್ರವಾಗಿದೆ. ಇದರಿಂದ ನಟಿಗೆ ಸಹಜವಾಗಿಯೇ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಹಾಗೂ ಭರವಸೆಗಳಿರುತ್ತದೆ.ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು ಜಿ. ಶಂಕರ್ ನಿರ್ದೇಶನದ ಚಿತ್ರದ ಟೀಸರ್ ಇದಾಗಲೇ ಬಿಡುಗಡೆಯಾಗಿ ಯಶಸ್ವಿಯೂ ಆಗಿದೆ.
ಶಶಿಧರ್ ಕೆಎಂ ನಿರ್ಮಾಣದ ಈ ಚಿತ್ರದಲ್ಲಿ ಹಿರಿಯ ನಟಿ ಸುಮಾತಾ ಹರಿಪ್ರಿಯಾ ಅವರ ತಾಯಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವಿದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರಕ್ಕೆ ಮಿಧುನ್ ಮುಕುಂದನ್ ಸಂಗೀತ, ಅರುಳ್ ಕೆ. ಸೋಮಸುಂದರಂ ಛಾಯಾಗ್ರಹಣ ಮಾಡಿದ್ದ್ರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos