ಕನ್ನಡದ 'ಮಿಲನ' ಚಿತ್ರದ ನಟಿ ಪಾರ್ವತಿಯಿಂದ ಮೀಟೂ ಬಾಂಬ್
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜತೆ ಮಿಲನ ಹಾಗೂ ಪೃಥ್ವಿ ಚಿತ್ರಗಳಲ್ಲಿ ನಟಿಸಿದ್ದ ಪಾರ್ವತಿ ಅವರು ಇದೀಗ ಮೀಟೂ ಆರೋಪ ಮಾಡಿದ್ದಾರೆ...
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜತೆ ಮಿಲನ ಹಾಗೂ ಪೃಥ್ವಿ ಚಿತ್ರಗಳಲ್ಲಿ ನಟಿಸಿದ್ದ ಪಾರ್ವತಿ ಅವರು ಇದೀಗ ಮೀಟೂ ಆರೋಪ ಮಾಡಿದ್ದಾರೆ.
ಮಾಮಿ ಫಿಲ್ಮ್ ಫೆಸ್ಟಿವಲ್ ನಲ್ಲಿ ಮಾತನಾಡಿರುವ ಪಾರ್ವತಿ ಅವರು ಬಾಲ್ಯದಲ್ಲೇ ಲೈಂಗಿಕ ಕಿರುಕುಳ ಎದುರಿಸಿದ್ದೆ. 12 ವರ್ಷಗಳ ಕಾಲ ಈ ಒಂದು ಘಟನೆ ನನ್ನನ್ನು ಕಾಡಿತ್ತು ಎಂದು ಹೇಳಿದ್ದಾರೆ.
ನನ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ನನಗೆ ನಾಲ್ಕು ವರ್ಷವಿರಬಹುದು. 17 ವರ್ಷವಾದ ಮೇಲೆ ನನಗೆ ಅದರ ಅರಿವಾಯಿತು. ಇದರ ಬಗ್ಗೆ ಮಾತನಾಡಲು ಮತ್ತೆ 12 ವರ್ಷ ಹಿಡಿದಿದೆ ಎಂದು ಪಾರ್ವತಿ ಹೇಳಿದ್ದಾರೆ
ಬಹುಭಾಷಾ ನಟಿ ಪಾರ್ವತಿ ಅವರು ಆಗಾಗೇ ಲೈಂಗಿಕ ಕಿರುಕುಳ ವಿರುದ್ಧ ಧನಿ ಎತ್ತುತ್ತಿದ್ದರು. ಇದೀಗ ತಾವು ಮೀಟೂ ಆರೋಪ ಮಾಡಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.