ವೈಭವ್ 
ಸಿನಿಮಾ ಸುದ್ದಿ

ಗೌರಿ ಹಬ್ಬಕ್ಕೆ ಆಡಿಯೋ ಬಿಡುಗಡೆ, ಮಾಸಾಂತ್ಯಕ್ಕೆ ಚಿತ್ರಮಂದಿರಗಳಲ್ಲಿ 'ತಾರಕಾಸುರ'!

ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ "ತಾರಕಾಸುರ" ಈ ತಿಂಗಳೂ ಬಿಡುಗಡೆಯಾಗುವ ನಿರೀಕ್ಷೆ ಇದೆ.ಇದರ ನಡುವೆ ಸೋಮವಾರ ಶಿವರಾಜ್ ಕುಮಾರ್ ದನಿಯಲ್ಲಿ ಮೂಡಿ ಬಂದಿರುವ ಒಂದು ಗೀತೆ....

ಬೆಂಗಳೂರು: ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ "ತಾರಕಾಸುರ" ಈ ತಿಂಗಳೂ ಬಿಡುಗಡೆಯಾಗುವ ನಿರೀಕ್ಷೆ ಇದೆ.ಇದರ ನಡುವೆ ಸೋಮವಾರ ಶಿವರಾಜ್ ಕುಮಾರ್ ದನಿಯಲ್ಲಿ ಮೂಡಿ ಬಂದಿರುವ ಒಂದು ಗೀತೆ " ಕನ್ನಡ ಕಲಿಯೋ... ಕನ್ನಡ ಕಲಿಯೋ..." ಅನ್ನು ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಬಿಡುಗಡೆಗೊಳಿಸಿದ್ದಾರೆ.
ಸಧ್ಯ ಚಿತ್ರ ಸೆನ್ಸಾರ್ ಬೋರ್ಡ್ ನಲಿದ್ದು ಚಿತ್ರದ ಆಡಿಯೋ ಸೆಪ್ಟೆಂಬರ್ 13 ಕ್ಕೆ ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ಚಿತ್ರಮಂದಿರದ ಮಾಲೀಕರಾದ ನರಸಿಂಹುಲು ಅವರ ಪುತ್ರ ವೈಭವ್ ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿಕೊಳ್ಳಲಿದ್ದಾರೆ. ಮಾನ್ವಿತಾ ಹರೀಶ್ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದು ಬ್ರಿಟೀಷ್ ಮೂಲದ ಡ್ಯಾನಿ ಸಪನಿ ಅಭಿನಯವೂ ಇದೆ. ಡ್ಯಾನಿ ಚಿತ್ರದಲ್ಲಿ ಪ್ರತಿನಾಯಕ ಅಥವಾ ಖಳನ ಪಾತ್ರ ಮಾಡುತ್ತಿದ್ದಾರೆ.
"ನಾವು ಸೆಪ್ಟೆಂಬರ್ ಅಂತ್ಯದ ವೇಳೆಗೆ ಚಿತ್ರ ಬಿಡುಗಡೆಗೆ ಯೋಜಿಸಿದ್ದೇವೆ. ಸಧ್ಯ ಸೆನ್ಸಾರ್ ಮಂಡಳಿಯವರು ಚಿತ್ರಕ್ಕೆ ಸರ್ಟಿಫಿಕೇಟ್ ನೀಡುವುದನ್ನೇ ಕಾಯುತ್ತಿದ್ದು ಒಮ್ಮೆ ಸೆನ್ಸಾರ್ ಕೆಲ್ಸ ಮುಗಿದರೆ ಚಿತ್ರ ಬಿಡುಗಡೆಯ ಅಧಿಕೃತ ದಿನಾಂಕ ಘೋಷಣೆ ಮಾಡಲಿದ್ದೇವೆ" ನಿರ್ದೇಶಕರು ಹೇಳುತ್ತಾರೆ.
"ತಾರಕಾಸುರ" ಚಿತ್ರಕ್ಕೆ ಧರ್ಮ ಸಂಗೀತ ನೀಡಿದರೆ ಕುಮಾರ್ ಗೌಡ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

ಶ್ವೇತ ಭವನದಲ್ಲಿ ಕ್ಸಿ ಜಿನ್ ಪಿಂಗ್- ಟ್ರಂಪ್ ಮಹತ್ವದ ಸಭೆ: AI ಮಾನವನ ನಿಯಂತ್ರಣದಲ್ಲಿರಬೇಕು; ಅಮೆರಿಕಕ್ಕೆ ಚೀನಾ ಆಗ್ರಹ!

'ಹಿಂದುತ್ವ ಯಾರ ವಿರುದ್ಧವೂ ಅಲ್ಲ; ಅದು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತದೆ': ಉಪರಾಷ್ಟ್ರಪತಿ ರಾಧಾಕೃಷ್ಣನ್

ಲೀವರ್ ಕ್ಯಾನ್ಸರ್ ಗೆ 'ವೆಲ್ ಕಮ್' ಖ್ಯಾತಿಯ ಹಿರಿಯ ಬಾಲಿವುಡ್ ನಟ ಮುಷ್ತಾಕ್ ಖಾನ್ ಬಲಿ!

Toxic ಬೆನ್ನಲ್ಲೇ ಭಾರೀ ಹೈಪ್ ಕ್ರಿಯೆಟ್ ಮಾಡಿದ್ದ Paradiseಗೆ ತೆಲುಗರಿಂದಲೇ ತರಾಟೆ; ಆದರೂ ಮೊದಲ ದಿನ ದಾಖಲೆ ಕಲೆಕ್ಷನ್!