ಬೆಂಗಳೂರು: ಕನ್ನಡದ ಜನಪ್ರಿಯ ನಾಯಕ ನಟಿ ಹರಿಪ್ರಿಯಾಗೆ ಕನ್ನಡ್ ಗೊತ್ತಿಲ್ಲ! ಹೌದು ಹರಿಪ್ರಿಯಾ ಮುಂದಿನ ಚಿತ್ರದ ಟೈಟಲ್ - "ಕನ್ನಡ್ ಗೊತ್ತಿಲ್ಲ" ಆರ್.ಜೆ ಮಯೂರ್ ರಾಘವೇಂದ್ರ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು ಹರಿಪ್ರಿಯಾ ಮುಖ್ಯ ಪಾತ್ರ ವಹಿಸಲಿದ್ದಾರೆ.
ನಿರ್ದೇಶಕ ಮಯೂರ್ ಈ ಹಿಂದೆ "ರಿಷಭ ಪ್ರಿಯ" ಎನ್ನುವ ಕಿರು ಚಿತ್ರ ನಿರ್ದೇಶನ ಮಾಡಿದ್ದಾರೆ. ಇದೀಗ "ಕನ್ನಡ್ ಗೊತ್ತಿಲ" ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ಸಹ ಇವರೇ ಬರೆದಿದ್ದಾರೆ.
ಕುಮಾರ ಕಂಠೀರವ ನಿರ್ಮಾಣದ ಈ ಚಿತ್ರಕ್ಕೆ ಇಂದು ಮಹೂರ್ತ ನೆರವೇರಲಿದ್ದು ಚಿತ್ರದ ಕುರಿತಂತೆ ಹರಿಪ್ರಿಯಾ ಎಕ್ಸ್ ಪ್ರೆಸ್ ಜತೆಗೆ ವಿಶೇಷವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕಿಒಂಡಿದ್ದಾರೆ. "ನಾವು ಪ್ರತಿ ದಿನವೂ ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬಂದವರ ಬಾಯಲ್ಲಿ ಈ ಎರಡು ಪದಗಳನ್ನು ಕೇಳಿಯೇ ಕೇಳುತ್ತೇವೆ, ಅದುವೇ "ಕನ್ನಡ್ ಗೊತ್ತಿಲ್ಲ!" ಇದು ನೈಜ ಘಟನೆ ಆಧಾರಿತ ಚಿತ್ರ.
"ನಾನು ಅಭಿನಯಿಸಿದ ಹೆಚ್ಚಿನ ಚಿತ್ರದಲ್ಲಿ ನನಗೆ ಸಿಕ್ಕುವ ಪಾತ್ರ ಯಾವುದೇ ಒಬ್ಬ ವ್ಯಕ್ತಿಯನ್ನು ಪ್ರತಿನಿಧಿಸುವಂತಹುದಾಗಿರುತ್ತದೆ. ಆದರೆ ಈ ಚಿತ್ರದಲ್ಲಿ ನಾನು ನಟಿಸುತ್ತಿರುವ ಪಾತ್ರ ಕರ್ನಾಟಕ ವಿಶ್ವದಾದ್ಯಂತದ ಜನತೆಯನ್ನು ಪ್ರತಿನಿಧಿಸುವಂತಿದೆ. ಇದು ಕನ್ನಡಕ್ಕೆ ಹೊಸ ವಿಷಯವಾಗಿದ್ದು ಚಿತ್ರದಲ್ಲಿ ಕನ್ನಡ ಭಾಷೆಯೇ ನಾಯಕ ಸ್ಥಾನದಲ್ಲಿದೆ" ನಟಿ ಹೇಳುತ್ತಾರೆ.
ಚಿತ್ರದಲ್ಲಿ ಹರಿಪ್ರಿಯಾ ಶೃತಿ ಚಕ್ರವರ್ತಿಹೆಸರಿನ ಪಾತ್ರ ಮಾಡುತ್ತಿದ್ದಾರೆ."ಕನ್ನಡ್ ಗೊತ್ತಿಲ್ಲ ಎನ್ನುವ ಹೊರ ರಾಜ್ಯದ, ವಿದೇಶದ ಜನರನ್ನು ಹೇಗೆ ಕಾಣಬೇಕು, ಅವರೊಡನೆ ಹೇಗೆ ವ್ಯವಹರಿಸಬೇಕು ಎನ್ನುವುದನ್ನು ಚಿತ್ರದಲ್ಲಿ ಹೇಳುತ್ತಾರೆ. ಪರಭಾಷಿಗರು ಯಾರೇ ಇರಲಿ ಕನ್ನಡ ಕಲಿಯಲು ಬಯಸಿದರೆ ಭಾಷೆಯನ್ನು ಕಲಿಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದಾದಲ್ಲಿ ಅವರಿಗೆ ನಾವು ಸಹಾಯ ಮಾಡಬೇಕು.
"ಇದೊಂದು ಉತ್ತಮ ಮನರಂಜನಾ ಚಿತ್ರವಾಗಿದ್ದು ಇಲ್ಲಿ ಯಾವ ಕಾರಣಕ್ಕೂ ಕನ್ನಡ ಕಲಿಸಿ ಎಂದು ಭಾಷಣ ಮಾಡಿರುವುದನ್ನು ಕಾಣಲು ಸಾಧ್ಯವಿಲ್ಲ.ನಾನೊಬ್ಬ ಕನ್ನಡತಿಯಾಗಿ ಇಂತಹಾ ಚಿತ್ರದಲ್ಲಿ ಅಭಿನಯಿಸಲು ಹೆಮ್ಮೆ ಇದೆ."
ಹರಿಪ್ರಿಯಾ ಅವರು ತಮ್ಮ ವೃತ್ತಿಜೀವನದ ಈ ಕಾಲಘಟ್ಟದಲ್ಲಿ ಚಿತ್ರಕಥೆ ಉತ್ತಮವಾಗಿದೆಯೆ, ಚಿತ್ರ ಯಾವ ವಿಷಯದ ಕುರಿತು ಮೂಡಿ ಬಂದಿದೆ ಎನ್ನುವುದರ ಕಡೆ ಮೊದಲು ಗಮನ ನೀಡಿ ಆ ಬಳಿಕ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸುತ್ತಾರೆ."ಬೆಲ್ ಬಾಟಮ್", "ಡಾಟರ್ ಆಫ್ ಪಾರ್ವತಮ್ಮ" ಚಿತ್ರಗಳು ಇದಾಗಲೇ ಮುಕ್ತಾಯ ಹಂತಕ್ಕೆ ಬಂದಿದ್ದು ಇದೀಗ "ಕನ್ನಡ್ ಗೊತ್ತಿಲ್ಲ" ಚಿತ್ರ ಇವರ 26ನೇ ಚಿತ್ರವಾಗಿ ಮೂಡಿಬರಲಿದೆ.
ಚಿತ್ರಕ್ಕೆ ಗಿರಿಧರ್ ದಿವಾನ್ ಛಾಯಾಗ್ರಹಣವಿದ್ದರೆ ನಕುಲ್ ಅಭಯಶಾಂಕರ್ ಸಂಗೀತvide.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos