ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ 
ಸಿನಿಮಾ ಸುದ್ದಿ

ರಕ್ಷಿತ್-ರಶ್ಮಿಕಾ ಬ್ರೇಕ್ ಅಪ್‌ಗೆ ಸಂಭಾವ್ಯ ಕಾರಣಗಳಿವು!, ಟ್ರೋಲ್‌ಗೆ ರಶ್ಮಿಕಾ ತುತ್ತು!

ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ಕಿರಿಕ್ ಪಾರ್ಟಿ ಚಿತ್ರದ ಬಳಿಕ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಬೇರೆ ಬೇರೆಯಾಗುತ್ತಿದ್ದಾರೆ...

ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ಕಿರಿಕ್ ಪಾರ್ಟಿ ಚಿತ್ರದ ಬಳಿಕ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಬೇರೆ ಬೇರೆಯಾಗುತ್ತಿದ್ದಾರೆ. 
ಇನ್ನು ಈ ಜೋಡಿಯ ಬ್ರೇಕ್ ಅಪ್ ಗೆ ಸಂಭಾವ್ಯ ಕಾರಣಗಳು ಹೀಗಿವೆ?
* ಕಿರಿಕ್ ಪಾರ್ಟಿ ಚಿತ್ರದ ಬಳಿಕ ರಶ್ಮಿಕಾ ಮಂದಣ್ಣ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಪುನೀತ್ ಜತೆ ಬೈಕ್ ಸೀನ್ ನಲ್ಲಿ ರಶ್ಮಿಕಾ ಅಪ್ಪುವನ್ನು ಬಿಗಿಯಾಗಿ ತಬ್ಬಿಕೊಂಡು ಹೋಗಿದ್ದರು. ಇದು ರಕ್ಷಿತ್ ಕೋಪಕ್ಕೆ ಕಾರಣವಾಗಿತ್ತೆ.
* ನಂತರ ರಶ್ಮಿಕಾ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಚಮಕ್ ಮಾಡಿದ್ದರು. ಈ ಚಿತ್ರದಲ್ಲಿ ಮದ್ಯ ಕುಡಿದ ರೀತಿಯಲ್ಲಿ ಮಾಡಿದ ಓವರ್ ಆಕ್ಟಿಂಗ್ ರಕ್ಷಿತ್ ಗೆ ಬೇಸರವನ್ನು ತರಿಸಿತ್ತೆ. 
* ಇದರಿಂದ ಬೇರಸಗೊಂಡಿದ್ದ ರಕ್ಷಿತ್ ಶೆಟ್ಟಿ ರಶ್ಮಿಕಾ ಮಂದಣ್ಣ ಅವರ ಕಾಲ್ ಅನ್ನು ಪದೇ ಪದೇ ಕಟ್ ಮಾಡುತ್ತಿದ್ದರೆ? ಇದೇ ಈ ಬ್ರೇಕ್ ಅಪ್ ಗೆ ಕಾರಣವಾಯಿತೆ.
* ಇನ್ನು ತೆಲುಗಿನ ಗೀತಾ ಗೋವಿಂದಂ ಚಿತ್ರದಲ್ಲಿ ರಶ್ಮಿಕಾ ಬೋಲ್ಡ್ ಆಗಿ ನಟಿಸಿದ್ದರು. ಕಿಸ್ಸಿಂಗ್ ಸೀನ್ ಕಂಡು ಕಸಿವಿಸಿಗೊಂಡಿದ್ದ ರಕ್ಷಿತ್ ಅದರ ಪ್ರಿಮಿಯರ್ ಶೋದಿಂದ ಎದ್ದು ಹೊರನಡೆದಿದ್ದರಂತೆ. ಇನ್ನು ಚಿತ್ರದಲ್ಲಿನ ವಿಜಯ್ ದೇವರಕೊಂಡ ಜತೆಗಿನ ಕೆಲ ದೃಶ್ಯಗಳ ಬಗ್ಗೆ ರಕ್ಷಿತ್ ಅಸಮಾಧಾನ ಉಂಟಾಗಿತ್ತೆ. 
* ಗೀತಾ ಗೋವಿಂದಂ ಬ್ಲಾಕ್ ಬಸ್ಟರ್ ಹಿಟ್ ನಿಂದಾಗಿ ರಕ್ಷಿತ್ ಇಮೇಜ್ ಗಿಂತ ರಶ್ಮಿಕಾ ಇಮೇಜ್ ದೊಡ್ಡದಾಗಿ ಬೆಳೆಯಿತು ಎಂಬ ಕೀಳರಿಮೆ?.
* ಇನ್ನು ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ನಡುವಿನ ವಯಸ್ಸಿನ ಅಂತರ ಹೆಚ್ಚಿದೆ. 35ರ ಹರೆಯದ ರಕ್ಷಿತ್ 22ರ ಹರೆಯದ ರಶ್ಮಿಕಾರನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರಿಬ್ಬರ ನಡುವೆ 13 ವರ್ಷದ ಅಂತರವಿದ್ದು ಇದು ಬ್ರೇಕ್ ಅಪ್ ಗೆ ಕಾರಣವಿರಬಹುದೇ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT