ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

ಜೀವನದ ಅನುಭವಗಳೇ 'ಇರುವುದೆಲ್ಲವ ಬಿಟ್ಟು'; ನಿರ್ದೇಶಕ ಕಾಂತ ಕನ್ನಳ್ಳಿ

ಜಲ್ಸ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ ಕಾಂತ ಕನ್ನಳ್ಳಿಇದೀಗ 'ಇರುವುದೆಲ್ಲವ ...

ಜಲ್ಸ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ ಕಾಂತ ಕನ್ನಳ್ಳಿ ಇದೀಗ ಇರುವುದೆಲ್ಲವ ಬಿಟ್ಟು ಎಂಬ ಎರಡನೇ ಚಿತ್ರ ತಯಾರಿಸಿದ್ದು ಇದೇ ತಿಂಗಳ 21ರಂದು ಬಿಡುಗಡೆಗೆ ಕಾಯುತ್ತಿದ್ದಾರೆ. ಜೀವನದ ಅನುಭವಗಳನ್ನು ತೆರೆ ಮೇಲೆ ತರಲಾಗಿದೆ ಎನ್ನುತ್ತಾರೆ ನಿರ್ದೇಶಕ ಕಾಂತ.

ಕವಿ ಗೋಪಾಲಕೃಷ್ಣ ಅಡಿಗರ ಕವನ ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ತುಡಿಯುವುದೇ ಜೀವನ ಎಂಬ ಸಾಲುಗಳನ್ನು ತೆಗೆದುಕೊಂಡು ಚಿತ್ರದ ಶೀರ್ಷಿಕೆ ಇಟ್ಟಿದ್ದಾರೆ. ಚಿತ್ರದಲ್ಲಿ ಒಂದು ಟ್ವಿಸ್ಟ್ ನೀಡಿರುವ ಅವರು, ಇಂದಿನ ಪ್ರೇಕ್ಷಕರಿಗೆ ಹತ್ತಿರವಾಗುವ ರೀತಿಯಲ್ಲಿ ಸಿನಿಮಾ ಮಾಡಿದ್ದು ಕೌಟುಂಬಿಕ ಪ್ರಧಾನ ಚಿತ್ರವಾಗಿದೆ ಎನ್ನುತ್ತಾರೆ.

ಮೇಘನಾ ರಾಜ್, ತಿಲಕ್ ಮತ್ತು ಶ್ರೀ ಮಹದೇವ ಪ್ರಮುಖ ಪಾತ್ರದಲ್ಲಿದ್ದು ಚಿತ್ರದಲ್ಲಿ ವಿಲನ್ ಪಾತ್ರ ಇಲ್ಲವಂತೆ. ಜೀವನದಲ್ಲಿ ನಮ್ಮಲ್ಲಿ ಒಳ್ಳೆ ಗುಣಗಳೂ ಇರುತ್ತವೆ, ಅದೇ ರೀತಿ ಕೆಟ್ಟ ಗುಣಗಳು ಕೂಡ ಇರುತ್ತವೆ, ಅದನ್ನೇ ಚಿತ್ರದ ಪಾತ್ರಗಳಲ್ಲಿ ತಂದಿದ್ದೇನೆ, ಇಲ್ಲಿ ಪ್ರತಿ ಪಾತ್ರಗಳು ಕೂಡ ಒಳ್ಳೆಯ ಮತ್ತು ಕೆಟ್ಟ ಮುಖಗಳನ್ನು ಹೊಂದಿವೆ ಎನ್ನುತ್ತಾರೆ.

ತಮಿಳು ನಟ-ನಿರ್ದೇಶಕ ಸಿಲಂಬರಸನ್ ಈ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇರುವುದೆಲ್ಲವ ಬಿಟ್ಟು ಚಿತ್ರಕ್ಕೆ ಶ್ರೀಧರ್ ವಿ ಸಂಗೀತ, ವಿಲನ್ ಡೇವಿಡ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!