ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶ್ರದ್ಧಾ ಶ್ರೀನಾಥ್ ಮೊದಲ ಶೂಟಿಂಗ್
ನಟಿ ಶ್ರದ್ಧಾ ಶ್ರೀನಾಥ್ ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಗೆ ಭಏಟಿ ನೀಡಿದ್ದರು, ಈ ಮೊದಲು ಶಾಲೆಯಿಂದ ರಾಮೋಜಿ ಫಿಲ್ಮ್ ಸಿಟಿಗೆ ತೆರಳಿದ್ದ ಶ್ರದ್ಧಾ ಒಬ್ಬ ನಟಿಯಾಗಿ ಪ್ರವೇಶಿಸಿದ್ದಾರೆ, ...
ಬೆಂಗಳೂರು: ನಟಿ ಶ್ರದ್ಧಾ ಶ್ರೀನಾಥ್ ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಗೆ ಭಏಟಿ ನೀಡಿದ್ದರು, ಈ ಮೊದಲು ಶಾಲೆಯಿಂದ ರಾಮೋಜಿ ಫಿಲ್ಮ್ ಸಿಟಿಗೆ ತೆರಳಿದ್ದ ಶ್ರದ್ಧಾ ಒಬ್ಬ ನಟಿಯಾಗಿ ಪ್ರವೇಶಿಸಿದ್ದಾರೆ,
ರುಸ್ತುಂ ಸಿನಿಮಾಗಾಗಿ ರಾಮೋಜಿ ಫಿಲಂ ಸಿಟಿಯಲ್ಲಿ ನಡೆದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಈಗ ನನಗೆ ಪ್ರಾಪರ್ ಹಿರೋಯಿನ್ ಎನ್ನಿಸುತ್ತದೆ,. ನನಗೆ ಇಲ್ಲಿ ತುಂಬಾ ವಿಭಿನ್ನ ಅನುಭವವಾಯಿತು, ಎಂದು ಹೇಳಿರುವ ಶ್ರದ್ಧಾ ಕರ್ನಾಟಕದಲ್ಲೂ ಒಂದು ರಾಮೋಜಿ ಸಿಟಿ ಬೇಕು ಎಂದು ತಿಳಿಸಿದ್ದಾರೆ.
ರವಿವರ್ಮ ನಿರ್ದೇಶನದ ರುಸ್ತು ಚಿತ್ರದಲ್ಲಿ ಶ್ರದ್ಧಾ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ನಟಿಸಿದ್ದಾರೆ, ಈ ತಿಂಗಳ ಅಂತ್ಯದಲ್ಲಿ ನನ್ನ ನಟನೆಯ ಭಾಗದ ಶೂಟಿಂಗ್ ಮುಗಿಯಲಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿಯಲಿದೆ ಎಂದು ಹೇಳಿದ್ದಾರೆ.
ಶಿವರಾಜ್ ಕುಮಾರ್ ಮಗುವಿನಂತ ಮನಸ್ಸು. ಯಾವಾಗಲೂ ತಮಾಷೆ ಮಾಡುತ್ತಾ ಸೆಟ್ ನಲ್ಲಿ ಖುಷಿಯಾಗಿರುತ್ತಾರೆ. ಅವರೊಬ್ಬ ಉತ್ತಮ ಕೇಳುಗ ಕೂಡ ಎಂದು ಶ್ರದ್ಧಾ ಹೊಗಳಿದ್ದಾರೆ. ಸದ್ಯ ಶ್ರದ್ದಾ ತಮ್ಮ ಬಾಲಿವುಡ್ ಪ್ರಾಜೆಕ್ಟ್ ಕೂಡ ಪೂರ್ಣಗೊಳಿಸಿದ್ದಾರೆ,
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.