ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಶೇಕ್ ಅಭಿನಯದ ಅಮರ್ ಚಿತ್ರದ ಚಿತ್ರೀಕರಣ ಕರ್ನಾಟಕ ಹಾಗೂ ನೆರೆ ರಾಜ್ಯಗಳಲ್ಲಿ ಭರ್ಜರಿ ನಡೆದಿದ್ದು ಇದೀಗ ಚಿತ್ರ ತಂಡ ಸ್ವಿಜರ್‌ಲ್ಯಾಂಡ್‌ಗೆ ಪ್ರಯಾಣ ಬೆಳೆಸಲಿದೆ.
ಅಮರ್ ಚಿತ್ರವನ್ನು ನಾಗಶೇಕರ್ ನಿರ್ದೇಶನ ಮಾಡುತ್ತಿದ್ದಾರೆ. ಸ್ವಿಜರ್‌ಲ್ಯಾಂಡ್ ನಲ್ಲಿ 20 ದಿನಗಳ ಚಿತ್ರೀಕರಣ ನಡೆಸಲಿದ್ದು ಇದಕ್ಕಾಗಿ ಚಿತ್ರತಂಡ ವೀಸಾಗೆ ಅರ್ಜಿ ಹಾಕಿದೆ. ಚಿತ್ರದ ರೇಸಿಂಗ್ ದೃಶ್ಯಗಳನ್ನು ಸ್ವಿಜರ್‌ಲ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗುತ್ತದೆ.
ಅಮರ್ ಚಿತ್ರ ಸಂದೇಶ್ ಪ್ರೋಡೆಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಅಭಿಶೇಕ್ ಗೆ ಜೋಡಿಯಾಗಿ ತನ್ಯ ಹೋಪ್ ಅಭಿನಯಿಸುತ್ತಿದ್ದು ಇಬ್ಬರು ಚಿತ್ರದಲ್ಲಿ ಬೈಕ್ ರೈಡರ್ಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸದ್ಯ ಕೊಯಂಬತ್ತೂರ್, ಬೆಳಗಾಂ, ಮಣಿಪಾಲ್, ಮಂಗಳೂರು, ಮಡಿಕೇರಿ, ಸೋಮವಾರಪೇಟೆ, ಗೋಣಿಕೋಪ್ಪ ಮತ್ತು ಕೇರಳದ ಕೆಲ ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.