ಧ್ರುವಸರ್ಜಾ 
ಸಿನಿಮಾ ಸುದ್ದಿ

ಪೊಗರು ಸಿನಿಮಾದಲ್ಲಿ ಗಡ್ಡಧಾರಿ ಧ್ರುವ ಸರ್ಜಾ ಲುಕ್ ಹೇಗಿದೆ ನೋಡಿ

ನಟ ಧ್ರುವ ಸರ್ಜಾ ಸಾಕಷ್ಟು ದಿನಗಳಿಂದ ಪೊಗರು' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇದೀಗ ಈ ಚಿತ್ರದ ಅವರ ಹೊಸ ಲುಕ್ ಜೊತೆ ಪ್ರಯೋಗ ನಡೆಸುತ್ತಿದ್ದಾರೆ...

ಬೆಂಗಳೂರು: ನಟ ಧ್ರುವ ಸರ್ಜಾ ಸಾಕಷ್ಟು ದಿನಗಳಿಂದ ಪೊಗರು' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇದೀಗ ಈ ಚಿತ್ರದ ಅವರ ಹೊಸ ಲುಕ್ ಜೊತೆ ಪ್ರಯೋಗ ನಡೆಸುತ್ತಿದ್ದಾರೆ, ಶಾಲಾ ದಿನಗಳ ಭಾಗಹದ ಶೂಟಿಂಗ್ ಮುಗಿದಿದ್ದು, ಎರಡನೇ ಶೆಡ್ಯೂಲ್ ಗಾಗಿ ಅಕ್ಟೋಬರ್ 1 ರಿಂದ ಶೂಟಿಂಗ್ ಆರಂಭವಾಗಲಿದೆ.
ಪೊಗರು ಸಿನಿಮಾದಲ್ಲಿ ಧ್ರುವಸರ್ಜಾ  ಮೂರು ವಿಭಿನ್ನ ಪಾತ್ರಗಳಲ್ಲಿ ನಟಿಸಲಿದ್ದಾರೆ,  ಶಾಲಾ ಬಾಲಕ, ರೆಬೆಲ್ ಮತ್ತು ರೆಗ್ಯೂಲರ್ ಪರ್ಸನ್ ಆಗಿ ಕಾಣಿಸಿಕೊಂಡಿದ್ದಾರೆ, ಕೆಲವು ದಿನ ಶೂಟಿಂಗ್ ನಿಲ್ಲಿಸಲಾಗಿತ್ತು,  ಶಾಲಾ ಬಾಲಕನ ಪಾತ್ರಕ್ಕಾಗಿ 30 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದರು, ಮತ್ತೆ ತೂಕ ಹೆಚ್ಚಿಸಿಕೊಳ್ಳಲು ಶೂಟಿಂಗ್ ನಿಲ್ಲಿಸಲಾಗಿತ್ತು. ಈ  ಸಮಯದಲ್ಲಿ, ಉದ್ದ ಕೂದಲು ಮತ್ತು ಗಡ್ಡ ಬಿಟ್ಟು ಧ್ರುವ ಸರ್ಜಾ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. 
ಮುಂದಿನ ವಾರ ಸೆಟ್ ಗೆ ಧ್ರುವಸರ್ಜಾ  ಆಗಮಿಸಲಿದ್ದಾರೆ, ಶೂಟಿಂಗ್ ವಿಳಂಬವಾಗುತ್ತಿರುವುದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಉತ್ತರಿಸಿರುವ ಧ್ರುವ ಸರ್ಜಾ ಹೊಸತನ್ನು ತರಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ,
ನಂದ ಕಿಶೋರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಗಂಗಾಧರ್ ನಿರ್ಮಾಣ ಚಿತ್ರಕ್ಕಿದೆ. 'ಪೋಗರು' ಸಿನಿಮಾಗೆ ಇನ್ನೂ ನಾಯಕಿ ಆಯ್ಕೆಯಾಗಿಲ್ಲ, ಅರ್ಜುನ್ ಜನ್ಯ ಸಿನಿಮಾಗೆ ಸಂಗಿತ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

ಅಜಿತ್ ಪವಾರ್ ವಿಮಾನ ಪತನ ವಿಧ್ವಂಸಕ ಕೃತ್ಯವೋ ಅಥವಾ ನಿರ್ಲಕ್ಷ್ಯವೋ? ಸಿಐಡಿ ಹೇಳಿದ್ದೇನು?

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

SCROLL FOR NEXT