ಪಾರುಲ್ ಯಾದವ್ 
ಸಿನಿಮಾ ಸುದ್ದಿ

ಅ.19ಕ್ಕೆ ಕ್ವೀನ್ ರಿಮೇಕ್ ನ ಫಸ್ಟ್ ಪೋಸ್ಟರ್ ಬಿಡುಗಡೆ

ಬಾಲಿವುಡ್ ನ ಸೂಪರ್ ಹಿಟ್ ಚಿತ್ರ ಕ್ವೀನ್ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ...

ಬಾಲಿವುಡ್ ನ ಸೂಪರ್ ಹಿಟ್ ಚಿತ್ರ ಕ್ವೀನ್ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ಚಿತ್ರ ನಿರ್ಮಾಪಕರು ನಾಲ್ಕು ಭಾಷೆಗಳಲ್ಲಿ ಕೂಡ ಚಿತ್ರದ ಮೊದಲ ಪೋಸ್ಟರ್ ನ್ನು ಅಕ್ಟೋಬರ್ 19ರಂದು ಬಿಡುಗಡೆ ಮಾಡಲು ಯೋಜಿಸುತ್ತಿದೆ. 
ಬಟರ್ ಫ್ಲೈ ಎಂದು ಕನ್ನಡದಲ್ಲಿ ತಯಾರಾಗುತ್ತಿದ್ದ ಚಿತ್ರದಲ್ಲಿ ಪಾರುಲ್ ಯಾದವ್, ತಮಿಳಿನಲ್ಲಿ ಪ್ಯಾರಿಸ್ ಪ್ಯಾರಿಸ್ ನಲ್ಲಿ ಕಾಜಲ್ ಅಗರ್ ವಾಲ್ ಎಂದು ತಯಾರಾಗುತ್ತಿದೆ. ಈ ಎರಡೂ ಭಾಷೆಗಳನ್ನು ರಮೇಶ್ ಅರವಿಂದ್ ನಿರ್ದೇಶಿಸಿದ್ದಾರೆ. ತೆಲುಗಿನಲ್ಲಿ ಮಹಾಲಕ್ಷ್ಮಿ ಎಂಬ ಹೆಸರಿನಲ್ಲಿ ತಯಾರಾಗುತ್ತಿದ್ದು ಪ್ರಶಾಂತ್ ವರ್ಮ ನಿರ್ದೇಶಿಸುತ್ತಿದ್ದಾರೆ. ತಮನ್ನಾ ಭಾಟಿಯಾ ನಾಯಕಿ. ಇನ್ನು ಮಲಯಾಳಂನಲ್ಲಿ ಝಮ್ ಝಮ್ ಚಿತ್ರವನ್ನು ನೀಲಕಂಠ ನಿರ್ದೇಶಿಸುತ್ತಿದ್ದು ಮಂಜಿಮಾ ಮೋಹನ್  ನಾಯಕಿಯಾಗಿದ್ದಾರೆ.
ಇದೀಗ ಎಲ್ಲಾ ನಾಲ್ಕು ಭಾಷೆಗಳಲ್ಲಿನ ಚಿತ್ರದ ಮೊದಲ ಪೋಸ್ಟರ್ ನ್ನು ಒಟ್ಟಿಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿವೆ,
ಹಿಂದಿಯ ಸಂಜು, ಗೋಲ್ಡ್, ರೇಸ್ 3 ಚಿತ್ರಗಳಿಗೆ ಮತ್ತು ಕ್ವೀನ್ ಮೂಲ ಚಿತ್ರದ ಪೋಸ್ಟರ್ ನ್ನು ವಿನ್ಯಾಸಗೊಳಿಸಿದ್ದ ಮುಂಬೈ ಮೂಲದ ಟ್ರಿಗ್ಗರ್ ಹ್ಯಾಪಿ ಸಂಸ್ಥೆಯ ಬಳಿ ದುಬಾರಿ ಪೋಸ್ಟರ್ ಮಾಡಿಸಲು ಚಿತ್ರತಂಡ ಯೋಜನೆ ಮಾಡಿದೆ. ಚಿತ್ರವನ್ನು ದಕ್ಷಿಣ ಭಾರತದ ಹಲವು ಕಡೆ ಮತ್ತು ವಿದೇಶಗಳಾದ ಪ್ಯಾರಿಸ್, ಫ್ರೆಜುಸ್ ಮತ್ತು ಅಥೆನ್ಸ್ ನಲ್ಲಿ ಶೂಟಿಂಗ್ ನಡೆದಿದ್ದು ಅದ್ದೂರಿ ತಾರಾಗಣವಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!

'ನ್ಯಾಯಾಂಗ ತನಿಖೆಗೆ ಒಪ್ಪಿಸಿ, ₹1 ಕೋಟಿ ಪರಿಹಾರ ನೀಡಿ': ಹನೂರು ಶೂಟೌಟ್ ಪ್ರಕರಣದ ಮಹಿಮಾ ದಾಸ್ ಸೇರಿ ಸಂತ್ರಸ್ತರ ಆಗ್ರಹ