ಆಮಿ ಜಾಕ್ಸನ್ 
ಸಿನಿಮಾ ಸುದ್ದಿ

ತಾಯಿಯಾಗುತ್ತಿರುವ 'ವಿಲನ್' ನಾಯಕಿ ಆಮಿ ಎಂಗೇಜ್‍ಮೆಂಟ್ ಫಿಕ್ಸ್

"ದಿ ವಿಲನ್" ಬೆಡಗಿ ಆಮಿ ಜಾಕ್ಸನ್ ತಮ್ಮ ಪ್ರಿಯಕರನೊಡನೆ ನಿಶ್ಚಿತಾರ್ಥಕ್ಕೆ ಅಣಿಯಾಗಿದ್ದಾರೆ.

ಬೆಂಗಳುರು: "ದಿ ವಿಲನ್" ಬೆಡಗಿ ಆಮಿ ಜಾಕ್ಸನ್ ತಮ್ಮ ಪ್ರಿಯಕರನೊಡನೆ ನಿಶ್ಚಿತಾರ್ಥಕ್ಕೆ ಅಣಿಯಾಗಿದ್ದಾರೆ. ಆಮಿ ಜಾಕ್ಸನ್ ಮೇ 5ರಂದು ಲಂಡನ್‍ನಲ್ಲಿ  ಪ್ರಿಯಕರ ಜಾರ್ಜ್ ಪನಯೌಟು  ಅವರೊಡನೆ ನಿಶ್ಚಿತಾರ್ಥ ಮಾಡಿಕೊಳ್ಲಲಿದ್ದಾರೆ.
ಇತ್ತೀಚೆಗೆ ತಾವು ಆದಷ್ಟು ಶೀಘ್ರ ತಾಯಿಯಾಗಬೇಕೆಂದು ಹಂಬಲಿಸುತ್ತಿರುವುದಾಗಿ ಹೇಳೊಕೊಂಡ ಆಮಿ ಆಕೆ  "ಗರ್ಭಿಣಿ" ಆಗಿದ್ದಾಳೆಂದು ಬಹಿರಂಗಪಡಿಸಿದ್ದರು.
ಇನ್ನು ಇದೇ 2019 ಜನವರಿ 1ರಂದು ತಮ್ಮ ಗೆಳೆಯ ಪನಯೌಟು  ಅವರೊಡನೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇದರ ಫೋಟೋವನ್ನು ಇಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದರು. ಆದರೆ ಈಗ ಮತ್ತೆ ಮೇ 5ರಂದು ಅಧಿಕೃತವಾಗಿ ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಈ ಜೋಡಿ ಮುಂದಿನ ವರ್ಷ 2020ಕ್ಕೆ ವಿವಾಹ ಬಂಧನಕ್ಕೆ ಒಳಗಾಗಲಿದೆ.
"ನಾವು ನಮ್ಮ ನಿಶ್ಚಿತಾರ್ಥದ ಸಂಭ್ರಮದಲ್ಲಿ ಭಾಗವಹಿಸಲು ಹಾಗೂ ಬೇಸಿಗೆಯನ್ನು ಅಧಿಕೃತವಾಗಿ ಸ್ವಾಗತಿಸಲು ನಿಮ್ಮನ್ನು ಪ್ರೀತಿಯಿಂದ ಆಹ್ವಾನಿಸುತ್ತೇವೆ" ಎಂದು ಆಮಿ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

SCROLL FOR NEXT