ಅವನೇ ಶ್ರೀಮನ್ನಾರಯಣ' ಚಿತ್ರದ ಒಂದು ದೃಶ್ಯ 
ಸಿನಿಮಾ ಸುದ್ದಿ

ಆಗಸ್ಟ್ ನಲ್ಲಿ 'ಅವನೇ ಶ್ರೀಮನ್ನಾರಯಣ' ಬಿಡುಗಡೆ!

ಈಗ ದೇಶಾದ್ಯಂತ ಚುನಾವಣೆ, ಐಪಿಎಲ್ ಕ್ರಿಕೆಟ್ ನ ಕಾವು ಹೆಚ್ಚುತ್ತಿದ್ದು ಚಲನಚಿತ್ರಗಳತ್ತ ಜನರ ಗಮನ ತುಸು ಕಡಿಮೆ ಎಂಬಂತಾಗಿದೆ. ಇದರ ನಡುವೆಯೇ ರಕ್ಷಿತ್ ಶೆಟ್ತಿ ಮುಂದಿನ ಚಿತ್ರ "ಅವನೇ ಶ್ರೀಮನ್ನಾರಾಯ....

ಬೆಂಗಳೂರು: ಈಗ ದೇಶಾದ್ಯಂತ ಚುನಾವಣೆ, ಐಪಿಎಲ್ ಕ್ರಿಕೆಟ್ ನ ಕಾವು ಹೆಚ್ಚುತ್ತಿದ್ದು ಚಲನಚಿತ್ರಗಳತ್ತ ಜನರ ಗಮನ ತುಸು ಕಡಿಮೆ ಎಂಬಂತಾಗಿದೆ. ಇದರ ನಡುವೆಯೇ ರಕ್ಷಿತ್ ಶೆಟ್ತಿ ಮುಂದಿನ ಚಿತ್ರ "ಅವನೇ ಶ್ರೀಮನ್ನಾರಾಯಣ" ಇದೇ ಬರುವ ಆಗಸ್ಟ್ ಗೆ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಪ್ರಕಟಣೆಯಲ್ಲಿ ಹೇಳಿದೆ. ಸಚಿನ್ ರವಿ ಜಿರ್ದೇಶನದ ಚೊಚ್ಚಲ ಚಿತ್ರವಾಗಿರುವ ಇದನ್ನು ಕನ್ನಡ,  ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ರೊಮ್ಯಾಂತಿಕ್ ಕಾಮಿಡಿ ಚಿತ್ರವಾಗಿರ್ವ "ಅವನೇ ಶ್ರೀಮನ್ನಾರಾಯಣ" ಎಚ್.ಕೆ.ಪ್ರಕಾಶ್ ಹಾಗೂ  ಪುಷ್ಕರ್ ಮಲ್ಲಿಕಾರ್ಜುನಯ್ಯನವರ ನಿರ್ಮಾಣದಲ್ಲಿ ಮೂಡಿಬರಲಿದೆ.
ಶಾನ್ವಿ ಶ್ರೀವಾಸ್ತವ್ ಹಾಗೂ ರಕ್ಷಿತ್ ಶೆಟ್ತಿ ಅಭಿನಯಿಸಿದ ಚಿತ್ರದ ಇತ್ತೀಚಿನ ಸ್ಟಿಲ್ ಗಳನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ದೊಡ್ಡ ಬಜೆಟ್ ನ ಚಿತ್ರವಾದ ಇದು ಸ್ಕ್ರಿಪ್ಟ್ ರಚನೆಯ ದಿನದಿಂದ ಲೆಕ್ಕ ಹಾಕಿದರೆ ಚಿತ್ರ ಸಂಪೂರ್ಣಗೊಳ್ಲಲು 600 ದಿನ ಹಿಡಿಯಲಿದೆ.400  ದಿನಗಳಲ್ಲಿ ಚಿತ್ರಕಥೆ ರಚನೆಯಾಗಿದ್ದು ಇದೀಗ ನಾವು 180 ದಿನಗಳ ಶೂಟಿಂಗ್ ಮುಗಿಸಿದ್ದೇವೆ.ಇನ್ನೂ 22  ದಿನಗಳ ಕಾಲ ಶೂಟಿಂಗ್ ಬಾಕಿ ಇದೆ. ಚಿತ್ರದ ಫೈನಲ್ ಶಾಟ್ ಅನ್ನು ಬೆಂಗಳುರು ಹಾಗೂ ವಿಜಯಪುರದಲ್ಲಿ ಶುತ್ ಮಾಡಲಾಗುತ್ತದೆ ಎಂದು ನಿರ್ಮಾಪಕ ಪುಷ್ಕರ್ ಹೇಳೀದ್ದಾರೆ.
ನಮ್ಮದೇ ಆದ ಪಿನಾಕಾ ಸ್ಟುಡಿಯೋದಲ್ಲಿ ವಿಎಫ್ಎಕ್ಸ್ ಅನ್ನು ಮಾಡಲಾಗಿದ್ದು ಇದರಿಂದ ನಮಗೆ ನೌಕೂಲವಾಗಿದೆ.ಈಗಾಗಲೇ ಶೂಟಿಂಗ್ ನ ತೊಂಭತ್ತು ಭಾಗ ಹಾಗೂ ಪೋಸ್ಟ್ ಪ್ರೊಡಕ್ಷನ್ ನ ಎಪ್ಪತ್ತು ಭಾಗ ಪೂರ್ಣಗೊಂಡಿದ್ದು ಇದೇ ಆಗಸ್ಟ್ ಗೆ ಚಿತ್ರ ತೆರೆ ಮೇಲೆ ಬರುವ ವಿಶ್ವಾಸವಿದೆ
ಒಮ್ಮೆ ಸಂಪೂರ್ಣ ಚಿತ್ರೀಕರಣ ಮುಗಿದ ನಂತರ ವಿತರಕರೊಡನೆ ಮಾತುಕತೆ ಪ್ರಾರಂಭಿಸುತ್ತೇವೆ. ಇದೇ ಮೇ ನಲ್ಲಿ ಚಿತ್ರದ ಶೂತಿಂಗ್ ಮುಕ್ತಾಯವಾದರೂ ನಮಗೆ ಬಹಳವೇ ಸಮಯ ದೊರಕಲಿದೆ.ರಕ್ಷಿತ್ ಶೆಟ್ಟಿ "ಉಳಿದವರು ಕಂಡಂತೆ", "ಕಿರಿಕ್ ಪಾರ್ಟಿ" ಮೂಲಕ ಇದಾಗಲೇ ರಾಷ್ಟ್ರವ್ಯಾಪಿ ಹೆಸರಾಗಿದ್ದಾರೆ. ಈ ಹಿಂದೆ "ಗೋಧಿ ಬಣ್ಣ ಸಾಧಾರಣ ಮೈಕಟ್ಟು" ನಮ್ಮದೇ ಬ್ಯಾನರ್ ನಲ್ಲಿ ಬಂದಿತ್ತು. ಈಗ ಸಹ ಜನರಿಂದ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರಕುವ ವಿಶ್ವಾಸವಿದೆ ಎಂದು ಪುಷ್ಕರ್ ಹೇಳಿದ್ದಾರೆ.
ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಮತ್ತು ಬಾಲಾಜಿ ಮನೋಹರ್ ಕೂಡಾ ಅಭಿನಯಿಸಿದ್ದು ರಣ್ ರಾಜ್ ಮತ್ತು ಅಜನೀಶ್ ಬಿ ಲೋಕನಾಥ್ ಸಂಗೀತ  ಚಿತ್ರಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!