ಕವಲುದಾರಿ ಚಿತ್ರದ ಒಂದು ದೃಶ್ಯ 
ಸಿನಿಮಾ ಸುದ್ದಿ

ಪ್ರತಿ ನಿರ್ದೇಶಕನೂ ಅವರದೇ ಸ್ವಂತ ಛಾಪು ಮೂಡಿಸುವಂತಿರಬೇಕು: ಹೇಮಂತ್ ಎಂ.ರಾವ್

ರ್ದೇಶಕ ಹೇಮಂತ್ ಎಂ. ರಾವ್ ತಾನೊಬ್ಬ ಸ್ವತಂತ್ರ ನಿರ್ದೇಶಕನಾಗಿ ಗುರುತಿಸಿಕೊಳ್ಲಲು ಬರೋಬ್ಬರಿ 14 ವರ್ಷಗಳು ಹಿಡಿದಿತ್ತು. ಅವರ "ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಮೂಲಕ ನಿರ್ದೇಶಕ ಹೇಮಂತ್....

ಬೆಂಗಳೂರು: ನಿರ್ದೇಶಕ ಹೇಮಂತ್ ಎಂ. ರಾವ್ ತಾನೊಬ್ಬ ಸ್ವತಂತ್ರ ನಿರ್ದೇಶಕನಾಗಿ ಗುರುತಿಸಿಕೊಳ್ಲಲು ಬರೋಬ್ಬರಿ 14  ವರ್ಷಗಳು ಹಿಡಿದಿತ್ತು. ಅವರ "ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಮೂಲಕ ನಿರ್ದೇಶಕ ಹೇಮಂತ್ ಜಗತ್ತಿನಾದ್ಯಂತ ಹೆಸರಾದರು. ಆದರೆ ಇಷ್ಟು ಮಾತ್ರಕ್ಕೆ ಅವರು ತಮ್ಮ ಎರಡನೇ ಚಿತ್ರಕ್ಕಾಗಿ ಅವಸರ ಮಾಡಲಿಲ್ಲ. ಅದಕ್ಕಾಗಿ ಅವರು ನಾಲ್ಕು ವರ್ಷಗಳ ಕಾಲ ಸಮಯ ತೆಗೆದುಕೊಂಡಿದ್ದಾರೆ. ಈ ವಾರ ಅವರ ನಿರ್ದೇಶನದ ಎರಡನೇ ಚಿತ್ರ "ಕವಲುದಾರಿ" ತೆರೆ ಕಾಣಲಿದೆ.
"ನಾನು ಉತ್ತಮವಾದ ಚಿತ್ರವೊಂದರ ನಿರ್ಮಾಣ ಮಾಡಬೇಕೆಂದು ಬಯಸಿದೆ, ಇದಕ್ಕಾಗಿ ಯಾವ ಅವಸರ ಮಾಡಲಿಲ್ಲ" ಹೇಮಂತ್ ಹೇಳಿದ್ದಾರೆ.
"ಒಬ್ಬ ನಿರ್ದೇಶಕನಾಗಿ ನಾನು ಸಮಯಕ್ಕೆ ತಕ್ಕಂತೆ ಬದಲಾಗಬೇಕಾಗುತ್ತದೆ. ವರ್ಷದ ಹಿಂದೆ ನಾನು ಬರೆದಿದ್ದ ಸ್ಕ್ರಿಪ್ಟ್ ನನ್ನ ಬಳಿಯೇ ಇತ್ತು. ಆದರೆ ಅದನ್ನು ಮತ್ತೊಮ್ಮೆ ನೊಡಿದಾಗ , ನನ್ನ ದೃಷ್ಟಿಕೋನವು ಬದಲಾಗಿತ್ತು. ಮತ್ತೆ ಹೊಸ ಸ್ಕ್ರಿಪ್ಟ್ ಒಂದನ್ನು ಬರೆದುಕೊಂಡೆ, ನಾನು ಕಾಲಕ್ಕೆ ತಕ್ಕುದಾಗಿ ಕೆಲಸ ಮಾಡಲು ಬಯಸುತ್ತೇನೆ. 
"ಕವಲುದಾರಿ  "ಒಂದು ಚಲನಚಿತ್ರವಾಗಿ, ಇದು ಸಸ್ಪೆನ್ಸ್ ಮತ್ತು ನಿಗೂಢತೆಯ ಪ್ರಬಲ ಅಂಶಗಳನ್ನು ಒಳಗೊಂಡಿದೆ. ಚಿತ್ರ ನಿರ್ದೇಶಕರು ಬೋಧನೆಗೆ ಕೈಹಾಕಬಾರದು, ಪ್ರೇಕ್ಷಕರೇ ಚಿತ್ರ ವೀಕ್ಷಣೆ ಮೂಲಕ ಕಲಿಯಬೇಕು. ಸಮಸ್ಯೆಗೆ ಪರಿಹಾರ ಒದಗಿಸಿಉವುದು ನನ್ನ ಕೆಲಸವಲ್ಲ. ಆದರೆ ಸಮಾಜದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಕನ್ನಡಿಯಂತೆ ಪ್ರತಿಬಿಂಬಿಸುವುದು ಮುಖ್ಯ. ಈ ಚಿತ್ರವು ಪುರುಷ ಹಾಗೂ ಮಹಿಳೆಯರ ಜೀವನವನ್ನು ಸಮಾನ ಅವಕಾಶದಲ್ಲಿ ತೋರಿಸುತ್ತದೆ.
ಹೇಮಂತ್ ಹೇಳುವಂತೆ "ಇಂದಿನ ದಿನಗಳಲ್ಲಿ ಪ್ರತಿನಿತ್ಯ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುತಿದೆ, ಜೀವನಶೈಲಿ ದುಬಾರಿಯಾಗಿದೆ.  ಆದರೆ ಪೋಲೀಸ್ ಅಧಿಕಾರಿಗಳಿಗೆ ಸರಿಯಾದ ಸೌಲಭ್ಯಗಳು ಸಿಗುವುದಿಲ್ಲ. ಸಮಾಜ ಅವರನ್ನು ಲಂಚ ಸ್ವೀಕರಿಸುವವರು, ಮಾಮಾಗಳು, ಕಳ್ಳರು ಎಂಬಂತೆ ಕಾಣುತ್ತದೆ. ನಾನು ಈ ಚಿತ್ರಕ್ಕೆ ಕವಲುದಾರಿ ಎಂಬ ಶಿರ್ಷಿಕೆ ಇಡಲು ಮುಖ್ಯ ಕಾರಣೈದುವೆ, ಪೋಲೀಸ್ ಅಧಿಕಾರಿಯೊಬ್ಬರ ಜೀವನ ಎಂದಿಗೂ ಅಡ್ಡ ರಸ್ತೆಗಳಲ್ಲೇ ಸಾಗುತ್ತದೆ ಎನ್ನುವುದು ನನ್ನ ಅಭಿಮತ. ಅವರು ನಿಜ ಹಾಗೂ ಸುಳ್ಳು, ಜೀವನ ಹಾಗೂ ಮರಣ, ವೈಯುಕ್ತಿಕ ಜೀವನ ಹಾಗೂ ವೃತ್ತಿಪರತೆಗಳ ನಡುವೆ ಹೋರಾಡುತ್ತಿರುತ್ತಾರೆ. ಈ ಚಿತ್ರ ಕೊಲೆ ರಹಸ್ಯದ ಕಥನದೊಳಗೊಂದು ಅಂತಃಕಲಹವನ್ನೂ ಹೊಂದಿದೆ," 
"ನನ್ನ ವೈಯಕ್ತಿಕತೆಗಾಗಿ ಮತ್ತು ಕಥೆ, ಸಂಗೀತಎರಡೂ ಚಿತ್ರಕ್ಕೆ ಬಹಳ ಮುಖ್ಯ. ಅದೃಷ್ಟವಶಾತ್ ನನ್ನ  ಎರಡು ಚಿತ್ರಗಳಿಗೆ ನಾನು ಉತ್ತಮ ಬೆಂಬಲವನ್ನು ಪಡೆದಿದ್ದೇನೆ ನಿರ್ಮಾಪಕರು ನನ್ನ ಮಾತನ್ನು ಕೇಳುವಂತಿರಬೇಕು. "
"ನಾನು ಪ್ರತಿ ಚಿತ್ರವನ್ನು ಪ್ರಾರಂಭಿಸುವಾಗಲೂ ಇದು ನನ್ನ ಮೊದಲ ಚಿತ್ರವೆನ್ನುವ ಭಾವನೆ ತಾಳುತ್ತೇನೆ. ಇದು ಒಂದು ತತ್ವ, ಅದು ನನಗೆ ಒಂದು ಚಿತ್ರದ ಮೇಲೆ ಮನಸ್ಸನ್ನು ಪೂರ್ಣವಾಗಿ ಕೇಂದ್ರೀಕರೈಸಲು ಸಾಧ್ಯಮಡುತದೆ.  "ಎಲ್ಲಕ್ಕೂ ಸಾಕಷ್ಟು ಸಮನ್ವಯ ಅಗತ್ಯವಿದೆ. ಅನಂತ್ ನಾಗ್  ಅವರಂತಹಾ ಹಿರಿಯ ನಟರೊಡನೆ ನಾನು ಯಾವಾಗಲೂ  ಒತ್ತಡ ಹೇರಿ ಮಾತನಾಡುವುದಿಲ್ಲ ಎನ್ನುವುದು ನನ್ನ ಖಚಿತ ಮನಸ್ಥಿತಿ.
"ಇನ್ನು ಈ ಚಿತ್ರ ಪುನೀತ್ ರಾಜ್ ಕುಮಾರ್ ಅವರ ಪಿಆರ್ಕೆ ಪ್ರೊಡಕ್ಷನ್ ಚೊಚ್ಚಲ ಕಾಣಿಕೆಯಾಗಿದೆ ಎನ್ನುವುದು ನನ್ನ ದೊಡ್ಡ ಖುಷಿಗೆ ಕಾರಣ" ಹೇಮಂತ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT