ಮೇಘನಾ ರಾಜ್ 
ಸಿನಿಮಾ ಸುದ್ದಿ

ನಾನು ನಟಿ, ಗಾಯಕಿ ಮತ್ತು ಈಗ ನಿರ್ಮಾಪಕಿ: ಮೇಘನರಾಜ್

ಮದುವೆಯಾದ ನಂತರ ಕೆಲವು ನಾಯಕಿಯರು ತಮ್ಮ ವೃತ್ತಿ ಜೀವನಕ್ಕೆ ಸ್ಟಾಪ್ ಹಾಕುತ್ತಾರೆ, ಆದರೆ ಮೇಘನರಾಜ್ ನಾಯಕಿ ನಟಿಯಾಗಿ, ಗಾಯಕಿ ಮತ್ತು ಸದ್ಯ ನಿರ್ಮಾಪಕಿಯಾಗುವ ...

ಮದುವೆಯಾದ ನಂತರ ಕೆಲವು ನಾಯಕಿಯರು ತಮ್ಮ ವೃತ್ತಿ ಜೀವನಕ್ಕೆ ಸ್ಟಾಪ್ ಹಾಕುತ್ತಾರೆ, ಆದರೆ ಮೇಘನರಾಜ್ ನಾಯಕಿ ನಟಿಯಾಗಿ, ಗಾಯಕಿ ಮತ್ತು ಸದ್ಯ ನಿರ್ಮಾಪಕಿಯಾಗುವ ನಿಟ್ಟಿನಲ್ಲಿ ಯೋಚಿಸುತ್ತಿದ್ದಾರೆ.
ಪವನ್ ನಿರ್ದೇಶನದ ಪುಟಾಣಿ ಪಂಟರ್ಸ್ ಸಿನಿಮಾಗೆ ನಿರ್ಮಾಪಕಿಯಾಗಲಿದ್ದಾರೆ, ಮಜಾ ಟಾಕೀಸ್ ಮೂಲಕ ಗುರುತಿಸಿಕೊಂಡಿರುವ ಪವನ್ ಚೊಚ್ಚಲ ನಿರ್ದೇಶನ ಮಾಡುತ್ತಿದ್ದಾರೆ, ಇಂದು ಸಿನಿಮಾ ಮುಹೂರ್ತ ಇಂದು ನಡೆಯಲಿದೆ, ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಮತ್ತು ದ್ರುವ ಸರ್ಜಾ ಹಾಜರಿದ್ದರು.
ನಾನು ನಿರ್ಮಾಪಕಿಯಾಗಬೇಕೆಂದು ಕೇವಲ ಒಂದು ರಾತ್ರಿಯಲ್ಲ ನಿರ್ಧಾರವಾಗಿದ್ದಲ್ಲ, ನಾನು ಮದುವೆಯಾದೆ ಎಂಬ ಕಾರಣಕ್ಕೆ ನಾನು ನಿರ್ಮಾಪಕಿಯಾಗುತ್ತಿಲ್ಲ, ನಾನು ಈಗಾಗಲೇ ನಾಯಕಿ ಮತ್ತು ಗಾಯಕಿಯಾಗಿ ಅನುಭವ ಪಡೆದಿದ್ದೇನೆ, ನಿರ್ಮಾಪಕಿಯಾಗಬೇಕೆಂದು ಮುಂದಿನ ಹೆಜ್ಜೆ ಇಡುತ್ತೇನೆ,  ಹೊಸ ಪ್ರತಿಭೆಗಾಗಿ ಹುಡುಕಾಟ ನಡೆಸುತ್ತಿರುವಾಗ ಪವನ್ ಪ್ರಾಜೆಕ್ಟ್ ನನದೆ ಇಷ್ಟವಾಯಿತು, ಇದು ಪೂರ್ತಿ ಮನೋರಂಜನಾತ್ಮಕ ಸಿನಿಮಾವಾಗಿದೆ.
ತಮ್ಮ ಷರತ್ತು ಹಾಗೂ ನಿಬಂಧನೆಗಳ ಬಗ್ಗೆ ಸ್ಪಷ್ಟವಾಗಿದ್ದಾರೆ, ಮಕ್ಕಳ ಸಿನಿಮಾಗೆ ಮಹಿಳೆ ನಿರ್ಮಾಪಕಿಯಾಗಿದ್ದು, ಸಮನಾಂತರ ಸಿನಿಮಾವಾಗುವುದು ಮೇಘನಾಗೆ ಇಷ್ಟವಿಲ್ಲ, ಮೂವರು ಸ್ಲಮ್  ಮಕ್ಕಳ ಕುರಿತ ಕಥೆಯಾಗಿದೆ, 
ಏಪ್ರಿಲ್ 26 ರಿಂದ ಮೇಘನಾ ಸೆಟ್ ಗೆ ಜಾಯಿನ್ ಆಗಲಿದ್ದಾರೆ, ಮೇಘನಾ ಸೃಜನ್ ಲೊಕೇಶ್ ಜೊತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, 
ಮದುವೆಯಾಗಿದ್ದರೂ ಕೂಡ ಮೇಘನಾ ತಮ್ಮ ಅಭಿರುಚಿಗಳಿಂದ ಹಿಂದೆ ಸರಿದಿಲ್ಲ,  ತಮ್ಮ ತಾಯಿ ಮದುವೆಯಾದ ನಂತರ ಚಿತ್ರದಲ್ಲಿ ನಟಿಸುವುದನ್ನು ಬಿಟ್ಟಿಲ್ಲ. ಈಗಲೂ ಕೂಡ ಅವರು ನಟಿಸುತ್ತಿದ್ದಾರೆ, ಹಿರಿಯ ನಟಿಯರಾದ ಭಾರತಿ ಅಮ್ಮ, ಮತ್ತು ಸುಮಲತಾ ಅಮ್ಮ ಕೂಡ ಇಂದಿಗೂ ಸಿನಿಮಾಗಳಲ್ಲಿ ನಟಿಸುವುದನ್ನು ಬಿಟ್ಟಿಲ್ಲ,
ನನ್ನ ಹಿಂದಿನ ಎಲ್ಲಾ ಕಮಿಂಟ್ ಮೆಂಟ್ ಗಳನ್ನು ಪೂರ್ಣಗೊಳಿಸಿದ್ದೇನೆ,ಹೀಗಾಗಿ ನಾನು ಮುಂದಿನ ಪ್ರಾಜೆಕ್ಟ್ ಬಗ್ಗೆ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಬ್ರೇಕ್ ಫಾಸ್ಟ್ ಮೀಟಿಂಗ್: ಮುಂದಿನ CM ಡಿ.ಕೆ ಶಿವಕುಮಾರ್; ಸಿದ್ದರಾಮಯ್ಯ ಮಾಹಿತಿ; ಮಧ್ಯಾಹ್ನ 2.30ಕ್ಕೆ ರಾಜೀನಾಮೆ

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್‌ಗೆ ಮತ್ತೊಂದು ಟ್ವಿಸ್ಟ್: ರಾಜ್ಯಪಾಲರ ಭೇಟಿಗೆ ಸಿದ್ದರಾಮಯ್ಯ ಸಮಯ ಕೇಳಿಲ್ಲ; ರಾಜೀನಾಮೆ ಊಹಾಪೋಹಕ್ಕೆ ಲೋಕಭವನ ಸ್ಪಷ್ಟನೆ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

SCROLL FOR NEXT