ಸಿನಿಮಾ ಸುದ್ದಿ

ಕಾರ್ಕಿ ಚಿತ್ರಕ್ಕೆ 3 ನಾಯಕಿಯರು!

Vishwanath S
ಯೂ ಟರ್ನ್ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದ ರೋಜರ್ ನಾಯರಾಣ್ ಅವರು ಇದೀಗ ಕಾರ್ಕಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಂದಿನಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.
ಚಿತ್ರವನ್ನು ಲೋಕೇಶ್ ಪ್ರಭು ಎಂಬುವರು ನಿರ್ದೇಶನ ಮಾಡುತ್ತಿದ್ದು ಚಿತ್ರಕ್ಕಾಗಿ ಪಾವನ, ಐಶ್ವರ್ಯ ಗೌಡ ಮತ್ತು ರಿಹಾನ್ಶಿ ಗೌಡ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಜಟ್ಟ ಚಿತ್ರದ ಮೂಲಕ ಪಾವನ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಇನ್ನು ಐಶ್ವರ್ಯ ಗೌಡ ಕನ್ನಡ ಮತ್ತು ತಮಿಳಿನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವೊಂದರಲ್ಲಿ ನಟಿಸಿದ್ದು ಈ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಇನ್ನು ರಿಹಾನ್ಸಿ ಕಟ್ಟುಕತೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 
SCROLL FOR NEXT