'ರಂಗನಾಯಕಿ' ಚಿತ್ರದಲ್ಲಿ ಲಾಸ್ಯ ನಾಗರಾಜ್ ಗೆ ಟೀಚರ್ ಪಾತ್ರ!
ರಂಗನಾಯಕಿ ವಾಲ್ಯೂಮ್ 1 ವರ್ಜಿನಿಟಿ ಚಿತ್ರದಲ್ಲಿ ಅದಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದರೆ ಇದೀಗ ಲಾಸ್ಯ ನಾಗರಾಜ್ ಎರಡನೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ರಂಗನಾಯಕಿ ವಾಲ್ಯೂಮ್ 1 ವರ್ಜಿನಿಟಿ ಚಿತ್ರದಲ್ಲಿ ಅದಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದರೆ ಇದೀಗ ಲಾಸ್ಯ ನಾಗರಾಜ್ ಎರಡನೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಕಳೆದ ವಾರ ಈ ಯೋಜನೆಯನ್ನು ಲಾಂಚ್ ಮಾಡಲಾಗಿತ್ತು. ಅಲ್ಲದೆ ಚಿತ್ರತಂಡ ಫಸ್ಟ್ ಲುಕ್ ಟೀಸರ್ ಅನ್ನು ಬಿಡುಗಡೆ ಮಾಡಿದ್ದರು. ಚಿತ್ರದಲ್ಲಿ ಲಾಸ್ಯ ಕೂರ್ಗಿ ಹುಡುಗಿಯಾಗಿ, ಶಿಕ್ಷಕಿಯಾಗಿ, ಹಾಗೂ ಅದಿತಿ ಪ್ರಭುದೇವಾಗೆ ಸ್ನೇಹಿತೆಯಾಗಿ ಕಾಣಿಸಿಕೊಳ್ಳುತ್ತಿದ್ದು ಇದು ಮಹಿಳಾ ಪ್ರಧಾನಿ ಚಿತ್ರವಾಗಿದೆ.
ಸಂಕಷ್ಟ ಎದುರಾದಾಗ ಮಹಿಳೆಯರೂ ಯಾವ ವಿಧದಲ್ಲಿ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ ಎಂಬುದು ಚಿತ್ರದ ಕಥಾವಸ್ತು. ಮೇ 5ರಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರದಲ್ಲಿ ತ್ರಿವಿಕ್ರಮ ಮತ್ತು ಎಂಜಿ ಶ್ರೀನಿವಾಸ್ ನಟಿಸುತ್ತಿದ್ದಾರೆ. ಚಿತ್ರವನ್ನು ದಯಾಳ್ ಪದ್ಮನಾಭ್ ನಿರ್ದೇಶಿಸುತ್ತಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.