ಸೆಪ್ಟಂಬರ್ 5 ರಿಂದ ರಾಬರ್ಟ್ ಶೂಟಿಂಗ್ ಮತ್ತೆ ಆರಂಭ
ಉಮಾಪತಿ ನಿರ್ಮಿಸುತ್ತಿರುವ ರಾಬರ್ಟ್ ಸಿನಿಮಾದ ಶೂಟಿಂಗ್ ಮೊದಲ ಹಂತದಲ್ಲಿ ಮುಗಿದಿದ್ದು, 51 ದಿನಗಳ ಶೂಟಿಂಗ್ ನಿಗದಿ ಪಡಿಸಲಾಗಿದೆ, ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿದಿದೆ.
ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಶೂಟಿಂಗ್ ಸೆಪ್ಟಂಬರ್ 5 ರಿಂದ ಮತ್ತೆ ಆರಂಭವಾಗಲಿದೆ.
ಉಮಾಪತಿ ನಿರ್ಮಿಸುತ್ತಿರುವ ರಾಬರ್ಟ್ ಸಿನಿಮಾದ ಶೂಟಿಂಗ್ ಮೊದಲ ಹಂತದಲ್ಲಿ ಮುಗಿದಿದ್ದು, 51 ದಿನಗಳ ಶೂಟಿಂಗ್ ನಿಗದಿ ಪಡಿಸಲಾಗಿದೆ, ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿದಿದೆ.
2ನೇ ಹಂತದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯಲಿದ್ದು,ರಾಮೋಜಿ ಫಿಲ್ಮಿ ಸಿಟಿಯಲ್ಲಿ ಸೆಟ್ ಹಾಕಲಾಗುತ್ತಿದೆ. 15 ದಿನಗಳ ಕಾಲ ಶೂಟಿಂಗ್ ನಡೆಯುತ್ತದೆ.
ರಾಬರ್ಟ್ ಸಿನಿಮಾದಲ್ಲಿ ಜಗಪತಿ ಬಾಬು ಕೂಡ ನಟಿಸುತ್ತಿದ್ದಾರೆ, ತಮಿಳು ಸಿನಮಾದಲ್ಲಿ ನಟಿಸಿದ್ದ ಮೆಹ್ರೀನ್ ಪಿರ್ಜಾಡಾ ದರ್ಶನ್ ಗೆ ನಾಯಕಿಯಾಗಿದ್ದಾರೆ. ಸೆಪ್ಚಂಬರ್ 2ನೇ ವಾರದಿಂದ ಶೂಟಿಂಗ್ ಗೆ ಹಾಜರಾಗಲಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.