ಶ್ರೀಲೀಲಾ 
ಸಿನಿಮಾ ಸುದ್ದಿ

ಮೊದಲು ಕನ್ನಡ ಸಿನಿಮಾಗಳಿಗೆ ನನ್ನ ಆದ್ಯತೆ: ಶ್ರೀಲೀಲಾ 

ಚಿತ್ರರಂಗಕ್ಕೆ ಈಗಷ್ಟೇ ಪಾದಾರ್ಪಣೆ ಮಾಡಿರುವ ಶ್ರೀಲೀಲಾ ಅವರ ಕಿಸ್ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಕೆಜಿಎಫ್ ನಾಯಕ, ರಾಕಿಂಗ್ ಸ್ಟಾರ್ ಯಶ್ ಚಿತ್ರದ ಬಗ್ಗೆ ಮತ್ತು ತನ್ನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದಾಗ ಈ ನಟಿಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.  

ಚಿತ್ರರಂಗಕ್ಕೆ ಈಗಷ್ಟೇ ಪಾದಾರ್ಪಣೆ ಮಾಡಿರುವ ಶ್ರೀಲೀಲಾ ಅವರ ಕಿಸ್ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಕೆಜಿಎಫ್ ನಾಯಕ, ರಾಕಿಂಗ್ ಸ್ಟಾರ್ ಯಶ್ ಚಿತ್ರದ ಬಗ್ಗೆ ಮತ್ತು ತನ್ನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದಾಗ ಈ ನಟಿಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. 


ಇತ್ತೀಚೆಗೆ ಕಿಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು. ಅದಕ್ಕೆ ಯಶ್ ಬಂದು ಚಿತ್ರತಂಡಕ್ಕೆ ಹಾರೈಸಿದ್ದಾರೆ. ಆಗ ವಿಶೇಷವಾಗಿ ಶ್ರೀಲೀಲಾ ಬಗ್ಗೆ ಪ್ರಸ್ತಾಪಿಸಿದ ಯಶ್ ನಟಿಯಾಗಿ ಆಕೆ ಭಾರತದ ಉದ್ದಗಲಕ್ಕೂ ಬೆಳೆಯುತ್ತಾಳೆ ಎಂದಿದ್ದಾರೆ.


ಇದು ಶ್ರೀಲೀಲಾಗೆ ಸಾಕಷ್ಟು ಹುರುಪು ಮತ್ತು ಉತ್ತೇಜನ ನೀಡಿದೆ. ಎಲ್ಲಾ ಭಾಷೆಗಳ ಚಿತ್ರಗಳಲ್ಲಿ ನಟಿಸಬೇಕು, ಪ್ರತಿಭೆ ತೋರಿಸಬೇಕೆಂದು ನನಗೂ ಆಸೆಯಿದೆ. ಆದರೆ ಯಾವ ಚಿತ್ರರಂಗಕ್ಕೆ ಹೋದರೂ ಕೂಡ ಕನ್ನಡವನ್ನು, ತಾಯ್ನೆಲವನ್ನು ಮರೆಯುವುದಿಲ್ಲ ಎನ್ನುತ್ತಾರೆ.


ಶ್ರೀಲೀಲಾ ಇನ್ನೂ ಅಧ್ಯಯನ ನಡೆಸುತ್ತಿದ್ದಾರೆ. ದಕ್ಷಿಣ ಚಿತ್ರೋದ್ಯಮದವರ ಗಮನ ಸೆಳೆದಿದ್ದು ಕೆಲವು ಉತ್ತಮ ಅವಕಾಶಗಳು ಬರುತ್ತಿವೆಯಂತೆ. ಆದರೆ ಸದ್ಯಕ್ಕೆ ಕನ್ನಡವೇ ನನ್ನ ಆದ್ಯತೆ, ಇಲ್ಲಿಯೇ ನಾನು ಗುರುತಿಸಿ ನೆಲೆನಿಲ್ಲಬೇಕು, ನಂತರ ಬೇರೆ ಚಿತ್ರರಂಗದ ಕಡೆ ಗಮನ ಹರಿಸುತ್ತೇನೆ ಎಂದರು.


ಕಿಸ್ ಚಿತ್ರದ ನಿರ್ದೇಶಕರು ಎ ಪಿ ಅರ್ಜುನ್. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಅಕ್ಟೋಬರ್ ನಲ್ಲಿ ತೆರೆಗೆ ಬರಲಿದೆ. ಚೊಚ್ಚಲ ಚಿತ್ರ ಬಿಡುಗಡೆಯಾದ ನಂತರ ಮೂರನೇ ಸಿನಿಮಾದಲ್ಲಿ ಶ್ರೀಲೀಲಾ ಕೆಲಸ ಮಾಡಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!