ಮೂಕಜ್ಜಿಯ ಕನಸುಗಳು ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

ಮೂಕಜ್ಜಿಗೆ ದಬಾಂಗ್-3ನ ಆತಂಕ: ಕುಂದಾಪುರದವರೇ ಕಾರಂತರನ್ನು ಮರೆತರೆ ಹೇಗೆ-ಪಿ.ಶೇಷಾದ್ರಿ

ಪಿ.ಶೇಷಾದ್ರಿ ನಿರ್ದೇಶಿಸಿರುವ 'ಮೂಕಜ್ಜಿಯ ಕನಸು'ಚಿತ್ರಕ್ಕೆ ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಭಿನಯದ ದಬಾಂಗ್-3 ಚಿತ್ರದ ಆತಂಕ ಎದುರಾಗಿದೆ. ಇದೇ ಶುಕ್ರವಾರದಂದು ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಮೂಕಜ್ಜಿಯ ಕನಸನ್ನು ಇದರ ಭರಾಟೆಯಿಂದ ಉಳಿಸುವಕೊಳ್ಳುವ ಆತಂಕ ಶೇಷಾದ್ರಿ ಅವರಿಗೆ ಎದುರಾಗಿದೆ.

ಬೆಂಗಳೂರು: ಪಿ.ಶೇಷಾದ್ರಿ ನಿರ್ದೇಶಿಸಿರುವ 'ಮೂಕಜ್ಜಿಯ ಕನಸು'ಚಿತ್ರಕ್ಕೆ ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಭಿನಯದ ದಬಾಂಗ್-3 ಚಿತ್ರದ ಆತಂಕ ಎದುರಾಗಿದೆ. ಇದೇ ಶುಕ್ರವಾರದಂದು ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಮೂಕಜ್ಜಿಯ ಕನಸನ್ನು ಇದರ ಭರಾಟೆಯಿಂದ ಉಳಿಸುವಕೊಳ್ಳುವ ಆತಂಕ ಶೇಷಾದ್ರಿ ಅವರಿಗೆ ಎದುರಾಗಿದೆ.

ಮೂಕಜ್ಜಿಯ ಕನಸು' ಕಡಲತೀರದ ಭಾರ್ಗವ ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಂತಹ ಕಾದಂಬರಿ. ಈ ಕಾದಂಬರಿಯನ್ನು ನಿರ್ದೇಶಕ ಪಿ.ಶೇಷಾದ್ರಿ ಚಲನಚಿತ್ರ ರೂಪಕ್ಕೆ ಇಳಿಸಿದ್ದು, ರಾಜ್ಯದ ಹಲವೆಡೆ ಪ್ರದರ್ಶನ ಕಾಣುತ್ತಿದೆ. ಚಿತ್ರ ಪ್ರದರ್ಶನ ಆರಂಭದಲ್ಲಿ ಸಿನಿಮಾ ಮಂದಿರಗಳ ಕೊರತೆಯನ್ನು ಅನುಭವಿಸಬೇಕಾಯಿತು. ಈಗ ಬೆಂಗಳೂರು ಸೇರಿದಂತೆ ಕೆಲವೆಡೆ ಪ್ರದರ್ಶನ ಕಾಣುತ್ತಿದೆ. ಆದರೆ ಇದೇ ಶುಕ್ರವಾರ ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳು ದಬಾಂಗ್‌ಗೆ ಮುಂಗಡವಾಗಿ ಕಾಯ್ದಿರಿಸಿವೆ. ಚಿತ್ರಪ್ರದರ್ಶನ ಕಂಡು 22 ದಿನವಾಗಿದೆ. ಈಗ ಪ್ರದರ್ಶನ ಕಾಣುತ್ತಿರುವ ಚಿತ್ರಮಂದಿರಗಳಿಂದಲೂ ಮೂಕಜ್ಜಿ ಎತ್ತಂಗಡಿ ಆಗಬಿಡಬಹುದೆಂಬ ಆತಂಕವನ್ನು ಸ್ವತಃ ನಿರ್ದೇಶಕರೇ ವ್ಯಕ್ತಪಡಿಸಿದರು.
ಕನ್ನಡ ಪತ್ರಕರ್ತೆಯರ ಸಂಘ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ನಗರದ ಚಾಮುಂಡೇಶ್ವರಿ‌ ಸ್ಟುಡಿಯೋದಲ್ಲಿ ಬೆಳ್ಳಿ ಮಾತು ಬೆಳ್ಳಿ ಸಿನಿಮಾ ಹೆಸರಿನಲ್ಲಿ ಪಿ.ಶೇಷಾದ್ರಿ ಅವರೊಂದಿಗೆ ಸಂವಾದ ಹಾಗೂ ಚಿತ್ರಪ್ರದರ್ಶನ ಏರ್ಪಡಿಸಿತ್ತು.
ಸಂವಾದದಲ್ಲಿ ಮಾತನಾಡುತ್ತಾ ಪಿ.ಶೇಷಾದ್ರಿ, ಚಿತ್ರದಲ್ಲಿ ಕುಂದಾಪುರ ಭಾಷೆಯ ಪ್ರಾದೇಶಿಕ ಸೊಬಗಿರುವ ಕಾರಣ ಕುಂದಾಪುರ ಬೈಂದೂರಿನಲ್ಲಿ‌ ಚಿತ್ರ ಬಿಡುಗಡೆ ಮಾಡಲಾಯಿತು.

ಮೊದಲೆರಡು ದಿನ ಬೈಂದೂರು ಕಾರ್ಕಳದಲ್ಲಿ ಜನ ಇಲ್ಲ ಎಂದು ಚಿತ್ರ‌ ಬಿಡುಗಡೆ ಮಾಡಲಿಲ್ಲ. ಕುಂದಾಪರದಲ್ಲಿ 2.5 ಲಕ್ಷ‌ ಜನಸಂಖ್ಯೆ ಇದೆ. ಆದರೆ ಅಲ್ಲಿಯ ಜನರೇ ಕಾರಂತರ ಕಾದಂಬರಿಯ ಚಿತ್ರವನ್ನು ಅಪ್ಪಿಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಹುಶಃ ಕಾರಂತರು ಈಗಿದಿದ್ದರೆ ತಮ್ಮ‌ಕಾದಂಬರಿ ಚಿತ್ರವಾಗಲು ಒಪ್ಪಿಗೆ ಕೊಡುತ್ತಿರಲಿಲ್ಲ. ಕಾರಂತರನ್ನು 1994ರಲ್ಲಿ ಚಿಗುರಿದ ಕನಸು ಚಲನಚಿತ್ರ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಜನಾರ್ದನ‌ ಹೊಟೇಲ್‌ನಲ್ಲಿ ತಂಗಿದ್ದ ಕಾರಂತರಿಗೆ ನಿರ್ದೇಶಕ ಟಿ.ಎಸ್.ನಾಗಾಭರಣ ಒಂದು ಪತ್ರ ಕೊಟ್ಟು ಕಳುಹಿಸಿದ್ದರು. ಅದನ್ನು ಕೊಡಲು ಹೋದಾಗ ಕೇವಲ ಇಪ್ಪತ್ತು ನಿಮಿಷ ಮಾತ್ರ ಕಂಡಿದ್ದು.ಮೊದಲು ಕೈಯಷ್ಟೆ ಬಂತು. ಪತ್ರ ತೆಗೆದುಕೊಂಡರು ಬಾಗಿಲು ಮುಚ್ಚಿದರು.

ಕಾದಂಬರಿ ಓದಿ
ಮೂಕಜ್ಜಿಯ ಮಾತುಗಳಿಂದ ಅನಂತರಾಯನ ಮುಖ ಕಪ್ಪಿಟ್ಟಿತು ಮೂಕದ ಬೆವರಿಳಿಸಿದಳು ಎಂದು ಕಾದಂಬರಿ ಅಂತ್ಯವಾಗುತ್ತದೆ‌. ಅನಂತರಾಯ ಅಂತಹ ತಪ್ಪು ಏನು ಮಾಡಿದ ಎಂದು ಪ್ರಶ್ನಿಸಿ ಪತ್ರ ಬರೆದಿದ್ದೆ. ಆಗ ಕಾರಂತರು ತಮ್ಮ ಪತ್ರಕ್ಕೆ ಉತ್ತರಿಸಿ ಪ್ರಕೃತಿ ವಿರುದ್ಧದ ರತಿಕ್ರೀಡೆ ಅಪರಾಧ. ಹೀಗಾಗಿ ಮೂಕಜ್ಜಿ ಬೈದಳು ಎಂದರು. ಆಗ ಸಲಿಂಗ ಕಾಮಕ್ಕೆ ಒಪ್ಪಿಗೆ ಇರಲಿಲ್ಲ. ಈಗ ಸಲಿಂಗ ಕಾಮಕ್ಕೆ ನ್ಯಾಯಾಲಯ ಒಪ್ಪಿಗೆ ಕೊಟ್ಟಿದೆ ಎಂದರು.

ಮೂಕಜ್ಜಿಯ ಭಾವ ಭಾಷೆಯನ್ನು ಪೂರ್ತಿಯಾಗಿ ಅರಿತುಕೊಳ್ಳಲು ಸಾಧ್ಯವೇ ಇಲ್ಲ. ಬಹಳಷ್ಟು ರಿಸ್ಕ್‌ ತೆಗೆದುಕೊಂಡು ಕುಂದಾಪ್ರ ಕನ್ನಡದ ಸಂಭಾಷಣೆಯನ್ನು ಬರೆಯಲಾಯಿತಾದರೂ ಕುಂದಾಪುರ ಜನರಿಗೆ ಚಿತ್ರ ಮುಟ್ಟಿಸಲಾಗಲಿಲ್ಲ ಎಂಬ ಬೇಸರ ಇದೆ.ಮೂಕಜ್ಜಿ ಪಾತ್ರಕ್ಕಾಗಿ ಸತತ ಎರಡು ವರ್ಷ ಹುಡುಕಾಟ ನಡೆಸಿದ್ದಾರೆ. ಕಾಂಡದಲ್ಲಿರುವ ಸುಕ್ಕಗಳಷ್ಟು ಆಕೆಯಲ್ಲಿರಬೇಕೆಂದು ಹುಡುಕಾಡಿದೆ. ಕೊನೆಗೆ ಜಯಶ್ರೀ ಸಿಕ್ಕರು ಎಂದರು.

ಚಿತ್ರವನ್ನು ಶಾಲಾ ಮಕ್ಕಳಿಗೂ ತಲುಪಿಸಬೇಕು. ಅನಿವಾರ್ಯವಾಗಿ ಚಿತ್ರದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕಿತ್ತು.ಕಾದಂಬರಿ ಎನ್ನುವುದು ಜೇನುಗೂಡಿದ್ದಂತೆ‌.ನಮಗೆ ಕಚ್ಚುವ ಸಾಧ್ಯತೆಇದೆ.ಹೀಗಾಗಿ ಈಗಿನ ಪರಿಸ್ಥಿತಿಯನ್ನೂ ಅವಲೋಕಿಸಿ ಚಿತ್ರ ಮಾಡಿದೆವು.

ಸ್ನೇಹಿತರಿಗೆ ಚತ್ರಮಂದಿರಕ್ಕೆ ಕಳಿಸಿ ಚಿತ್ರ ತೋರಿಸಿ
ನೂರು ಜನ ನೋಡುವ ಕಡೆ ನಾ ಚಿತ್ರ ತೋರಿಸುತ್ತೇನೆ ಎಂದು‌ ಶೇಷಾದ್ರಿ ಸ್ಪಷ್ಟಪಡಿಸಿದರು.

ವಾರ್ತಾ ಇಲಾಖೆ ನಿರ್ದೇಶಕ ಭೃಂಗೇಶ್, ದಿನೇಶ್ , ನಟ ಅರವಿಂದ್, ಪತ್ರಕರ್ತೆ ಶಾಂತಲಾ‌ ಧರ್ಮರಾಜ್, ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT