ನಿಖಿಲ್ ಕುಮಾರಸ್ವಾಮಿ 
ಸಿನಿಮಾ ಸುದ್ದಿ

ಇಟ್ಸ್ ಕನ್ ಫರ್ಮ್: ನಿಖಿಲ್ ಮುಂದಿನ ಚಿತ್ರ ತೆಲುಗಿನ ಸೂಪರ್ ಹಿಟ್ ನಿರ್ದೇಶಕನ ಜೊತೆಗೆ!

2020ನೇ ವರ್ಷದಲ್ಲಿ ನಟ ಹಾಗೂ ರಾಜಕಾರಣಿ ನಿಖಿಲ್ ಸಂಪೂರ್ಣವಾಗಿ ಸಿನಿಮಾ ಕಡೆ ತಮ್ಮ ಗಮನ ಫೋಕಸ್ ಮಾಡಲಿದ್ದಾರೆ.

2020ನೇ ವರ್ಷದಲ್ಲಿ ನಟ ಹಾಗೂ ರಾಜಕಾರಣಿ ನಿಖಿಲ್ ಸಂಪೂರ್ಣವಾಗಿ ಸಿನಿಮಾ ಕಡೆ ತಮ್ಮ ಗಮನ ಫೋಕಸ್ ಮಾಡಲಿದ್ದಾರೆ.

ಪೈಲ್ವಾನ್‌ ನಿರ್ದೇಶಕ ಕೃಷ್ಣ ಜೊತೆ ಅವರೊಂದು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು, ಆದರೆ  ಅದಕ್ಕೂ ಮೊದಲೇ ಮತ್ತೊಂದು ಸಿನಿಮಾಕ್ಕೆ ನಿಖಿಲ್ ಚಾಲನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ತೆಲುಗಿನ ಸೂಪರ್ ಹಿಟ್ ಸಿನಿಮಾ 'ಗುಂಡೇ ಜಾರಿ ಗಲ್ಲಂತಾಯಿಂದಿ'ಗೆ ನಿರ್ದೇಶನ ಮಾಡಿದ್ದ ವಿಜಯ್‌ ಕುಮಾರ್ ಕೊಂಡ, ಈಗ ನಿಖಿಲ್‌ಗೆ ಸಿನಿಮಾ ಮಾಡಲಿದ್ದಾರಂತೆ. 

'ಒಕ ಲೈಲಾ ಕೋಸಂ' ಸಿನಿಮಾ ಮಾಡಿದ್ದರು ವಿಜಯ್‌. ಆದಾದ ಮೇಲೆ ಅವರು ಯಾವುದೇ ಸಿನಿಮಾ ನಿರ್ದೇಶಿಸಿಲ್ಲ. ಐದು ವರ್ಷಗಳ ಬಳಿಕ ಈಗ ನಿಖಿಲ್‌ ಸಿನಿಮಾ ಮಾಡುವ ಮೂಲಕ ಕನ್ನಡಕ್ಕೆ ಎಂಟ್ರಿ ನೀಡಿದ್ದಲ್ಲದೆ, ನಿರ್ದೇಶನಕ್ಕೂ ಮರಳಿದ್ದಾರೆ.

ನಿಖಿಲ್ ನಟನೆಯ ಈ ಸಿನಿಮಾಗೆ ಕನ್ನಡದವರೇ ಆದ ಅರ್ಜುನ್‌ ಜನ್ಯ ಸಂಗೀತ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಹಾಗಾಗಿ, ನಿಖಿಲ್‌-ಅರ್ಜುನ್‌ ಜನ್ಯ ಕಾಂಬಿನೇಷನ್‌ ಮೇಲೆ ನಿರೀಕ್ಷೆ ಹೆಚ್ಚಲಿದೆ.

ಸಿನಿಮಾಗೆ ಭಾರತದ ಖ್ಯಾತ ಆಡಿಯೋ ಸಂಸ್ಥೆ ಲಹರಿ ಬಂಡವಾಳ ಹೂಡಲಿದೆಯಂತೆ. ಆಡಿಷನ್‌ಗೆ ನೀಡಿರುವ ಜಾಹೀರಾತಿನಲ್ಲೂ ಲಹರಿ ಮ್ಯೂಸಿಕ್‌ ಅರ್ಪಿಸುವ ಎಂದೇ ಮುದ್ರಿಸಲಾಗಿದೆ. 

ಸಂಕ್ರಾಂತಿ ಹಬ್ಬದ ನಂತರ ಸಿನಿಮಾದ ಶೂಟಿಂಗ್ ಆರಂಭಗೊಳ್ಳಲಿದ್ದು, ಕನ್ನಡದಲ್ಲಿ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಸಿನಿಮಾ ಬರಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!