A still from Love Mocktail 
ಸಿನಿಮಾ ಸುದ್ದಿ

ಕೃಷ್ಣ ಚೊಚ್ಚಲ ನಿರ್ದೇಶನದ `ಲವ್ ಮಾಕ್‌ ಟೇಲ್' ಚಿತ್ರದಲ್ಲಿ ಅಮೃತಾ ನಾಯಕಿ

ಸೂರಿ ನಿರ್ದೇಶನದ 'ಪಾಪ್ ಕಾರ್ನ್ ಮಂಕಿ ಟೈಗರ್ ' ಚಿತ್ರದ ನಾಯಕಿಯಾಗಿರುವ ಅಮೃತಾ, ಮೊದಲ ಬಾರಿಗೆ ಕೃಷ್ಣ ನಿರ್ದೇಶಿಸುತ್ತಿರುವ ಲವ್ ಮಾಕ್ ಟೇಲ್ ಚಿತ್ರದಲ್ಲೂ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಸೂರಿ ನಿರ್ದೇಶನದ  'ಪಾಪ್ ಕಾರ್ನ್ ಮಂಕಿ ಟೈಗರ್ ' ಚಿತ್ರದ ನಾಯಕಿಯಾಗಿರುವ ಅಮೃತಾ,  ಮೊದಲ ಬಾರಿಗೆ ಕೃಷ್ಣ ನಿರ್ದೇಶಿಸುತ್ತಿರುವ ಲವ್ ಮಾಕ್ ಟೇಲ್ ಚಿತ್ರದಲ್ಲೂ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಕೃಷ್ಣ ಇದಕ್ಕೂ ಮುನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜಾಕಿ, ಹುಡುಗರು ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಮದರಂಗಿ ಚಿತ್ರದ ಮೂಲಕ  ಕನ್ನಡ ಚಿತ್ರರಂಗದಲ್ಲಿ ಬೆಳಕಿಗೆ ಬಂದ ಅಮೃತಾ, ಲವ್ ಮಾಕ್ ಟೇಲ್ ಚಿತ್ರದಲ್ಲಿ  ನಾಯಕಿ ಪಾತ್ರದಲ್ಲಿ ನಟ ಕೃಷ್ಣ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.  ಈ ಚಿತ್ರದಲ್ಲಿ  ಮಿಲನ ನಾಗರಾಜ್ ಕೂಡಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಶೇ. 60 ರಷ್ಟು ಈಗಗಾಲೇ ಚಿತ್ರೀಕರಣ ಮುಗಿದಿದ್ದು, ಈ ವಾರದಿಂದ ಮುಂದಿನ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಮಧ್ಯೆ   ಅನುಷ್ಕಾ ಚಿತ್ರದ ಚಿತ್ರೀಕರಣವನ್ನು ಅಮೃತ ಪೂರ್ಣಗೊಳಿಸಿದ್ದಾರೆ. ಇದು ಆಕೆಯ ಮೊದಲ ಮಹಿಳಾ ಕೇಂದ್ರೀತ ಸಿನಿಮಾವಾಗಿದೆ.

ಲವ್ ಮಾಕ್ ಟೇಲ್ ಚಿತ್ರ ನಿರ್ಮಾಪಕರು ಇನ್ನೂ ಸಂಗೀತ ನಿರ್ದೇಶಕರನ್ನು ಅಂತಿಮಗೊಳಿಸಿಲ್ಲ. ಕ್ಯಾಮರಾ ಕೆಲಸ ಹಾಗೂ ಎಡಿಟಿಂಗ್ ಗಾಗಿ  ಕ್ರೇಜಿ ಮನಸ್ಸುಳ್ಳ ಯುವಕರನ್ನು ಆಯ್ಕೆ ಮಾಡಲು ಚಿತ್ರ ತಂಡ ಹುಡುಕುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ