ಸಿನಿಮಾ ಸುದ್ದಿ

'ಅವನೇ ಶ್ರೀಮನ್ನಾರಾಯಣ'ನಿಗೆ ಕಾಡಿನಲ್ಲಿ ರಕ್ಷಿತ್ ಶೆಟ್ಟಿ ಚಿತ್ರೀಕರಣ

Sumana Upadhyaya

ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ 200 ದಿನಗಳ ಶೂಟಿಂಗ್ ಎಂದು ನಿಗದಿಪಡಿಸಲಾಗಿದೆ. ಕನ್ನಡ ಚಿತ್ರವೊಂದರ ಶೂಟಿಂಗ್ ಗೆ ಈ ರೀತಿ ಸಮಯ ನಿಗದಿಪಡಿಸಿದ್ದು ಇದೇ ಮೊದಲಿರಬೇಕು ಎನ್ನುತ್ತಾರೆ ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ. ಈಗಾಗಲೇ 160 ದಿನಗಳ ಶೂಟಿಂಗ್ ಮುಗಿದಿದ್ದು ಇನ್ನೂ 40 ದಿನಗಳ ಶೂಟಿಂಗ್ ಬಾಕಿ ಉಳಿದಿದೆ.

ಸಚಿನ್ ರವಿ ನಿರ್ದೇಶನದ ಅವನೇ ಶ್ರೀಮನ್ನಾರಾಯಣ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿ ರಕ್ಷಿತ್ ಶೆಟ್ಟಿ ಪೊಲೀಸ್ ಪಾತ್ರ ಮಾಡುತ್ತಿದ್ದು ಅರಣ್ಯ ಪರಿಸರ, ವಾತಾರಣ ಸೃಷ್ಟಿ ಮಾಡಿ ಅಲ್ಲಿ ಹಾಡಿನ ಚಿತ್ರೀಕರಣದಲ್ಲಿ ಅವರು ಈಗ ತೊಡಗಿಸಿಕೊಂಡಿದ್ದಾರೆ. ಪ್ರಕೃತಿ ಹಾಳು ಮಾಡಬಾರದೆಂದು ಮತ್ತು ರಾತ್ರಿ ವೇಳೆ ಚಿತ್ರೀಕರಣಕ್ಕೆ ಅವಕಾಶ ಇಲ್ಲದಿರುವುದರಿಂದ ನಿಜವಾದ ಕಾಡಿಗೆ ಹೋಗಿ ಶೂಟಿಂಗ್ ಮಾಡದೆ ಕಂಠೀರವ ಸ್ಟುಡಿಯೊದೊಳಗೆ ಅರಣ್ಯವನ್ನು ಸೃಷ್ಟಿಸಿ ಅಲ್ಲಿ ಶೂಟಿಂಗ್ ಮಾಡುತ್ತಿದ್ದೇವೆ. ಅರಣ್ಯದ ಸೆಟ್ ನ್ನು ಸೃಷ್ಟಿ ಮಾಡಲು ಸಾಕಷ್ಟು ಖರ್ಚು ಆಯಿತು, ಆದರೆ ಉತ್ತಮ ಫಲಿತಾಂಶ ಸಿಕ್ಕಿದೆ ಎನ್ನುತ್ತಾರೆ ಸಚಿನ್ ರವಿ.

ಪ್ರಸ್ತುತ ಚಿತ್ರತಂಡ ಬೆಂಗಳೂರು ಅರಮನೆಯಲ್ಲಿ ಹಗಲು ಬೆಳಕಿನಲ್ಲಿ ಚಿತ್ರೀಕರಣ ನಡೆಸುತ್ತಿದೆ. ರಾತ್ರಿ ವೇಳೆಯ ಚಿತ್ರೀಕರಣ ಫೆಬ್ರವರಿ 14ರಿಂದ ಆರಂಭವಾಗಲಿದೆ. ಆರಂಭದಲ್ಲಿ ರಾತ್ರಿ ವೇಳೆಯ ಚಿತ್ರೀಕರಣ ಕೂಡ ಬೆಂಗಳೂರು ಅರಮನೆಯಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಿದ್ದೆವು. ಆದರೆ ಸುತ್ತಮುತ್ತ ಅತಿ ಗಣ್ಯ ವ್ಯಕ್ತಿಗಳ ಮನೆಗಳಿರುವುದರಿಂದ ಅನಗತ್ಯ ತೊಂದರೆ, ಕಿರಿಕಿರಿ ಆಗಬಾರದೆಂದು ಆ ಯೋಜನೆ ಕೈ ಬಿಟ್ಟಿದ್ದೇವೆ ಎಂದರು.

ಪುಷ್ಕರ್ ಫಿಲ್ಮ್ಸ್ ಮತ್ತು ಹೆಚ್ ಕೆ ಪ್ರಕಾಶ್ ಜಂಟಿ ನಿರ್ಮಾಣದಲ್ಲಿ ಶ್ರೀ ದೇವಿ ಎಂಟರ್ ಪ್ರೈಸಸ್ ನಿರ್ಮಿಸುತ್ತಿದೆ. ಶಾನ್ವಿ ಶ್ರೀವಾಸ್ತವ್ ಚಿತ್ರದ ನಾಯಕಿ. ಅವನೇ ಶ್ರೀಮನ್ನಾರಾಯಣ ಕನ್ನಡದ ಜೊತೆಗೆ ಇತರ ನಾಲ್ಕು ಭಾಷೆಗಳಲ್ಲಿ ತಯಾರಾಗುತ್ತಿದೆ. ಕನ್ನಡ ಭಾಷೆಯ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ. ಚರಣ್ ರಾಜ್ ಮತ್ತು ಬಿ ಅಜನೀಶ್ ಲೋಕನಾಥ್ ಸಂಗೀತ, ಕರ್ಮ್ ಚಾವ್ಲಾ ಅವರ ಛಾಯಾಗ್ರಹಣವಿದೆ.

SCROLL FOR NEXT