ಕನ್ನಡದ ಬಹು ಬೇಡಿಕೆಯ ನಟಿ ರಚಿತಾರಾಮ್ ಹಲವು ಸ್ಟಾರ್ ನಟರುಗಳ ಜೊತೆ ನಟಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ಜೊತೆ ನಟಸಾರ್ವಭೌಮ ಮತ್ತು ಚಕ್ರವ್ಯೂಹ ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಟ ಪುನೀತ್ ಅಭಿಮಾಮನಿಗಳಿಗಾಗಿ ವಿಡಿಯೋ ವೊಂದನ್ನು ರಚಿತಾ ರಾಮ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಡ್ಯಾನ್ಸ್ ವಿತ್ ಅಪ್ಪು ಹಾಡಿಗೆ ಸ್ಟೆಪ್ ಹಾಕಿರುವ ವಿಡಿಯೋ ಇದಾಗಿದೆ, ಅಪ್ಪು ಜೊತೆಗೆ ಡ್ಯಾನ್ಸ್ ಮಾಡುವ ಅವರ ಅದಮ್ಯ ಆಸೆ ಇನ್ನೂ ಈಡೇರಿಲ್ಲವಂತೆ.
ಅವರೊಬ್ಬ ಉತ್ತಮ ನಟ, ಹಾಗೆಯೇ ಅತ್ಯತ್ತಮ ಡ್ಯಾನ್ಸರ್ ಕೂಡ. ಮುಂದಿನ ವೇಳೆ ನನಗೆ ಪುನೀತ್ ಜೊತೆ ನಟಿಸುವ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಅಪ್ಪು ಜೊತೆಯಲ್ಲಿ ಡ್ಯಾನ್ಸ್ ಮಾಡುತ್ತೇನೆ ಎಂದು ಹೇಳಿದ್ದಾರೆ.
ಚಕ್ರವ್ಯೂಹ ಮತ್ತು ನಟಸಾರ್ವಭೌಮ ಸಿನಿಮಾಗಳಿಗೆ ಸಹಿ ಮಾಡಿಗದ ನಂತರ ನನ್ನ ಪಾತ್ರದ ಬಗ್ಗೆ ತಿಳಿಯಿತು, ಮುಂದಿನ ಸಿನಿಮಾಗೆ ಸಹಿ ಮಾಡುವಾಗ ಪಾತ್ರದ ಬಗ್ಗೆ ವಿಚಾರಿಸಿಕೊಳ್ಳುತ್ತೇನೆ ಎಂದಿದ್ದಾರೆ,. ನಟ ಸಾರ್ವಭೌಮದಲ್ಲಿ ನನ್ನದು ಪ್ರಮುಖ ಪಾತ್ರವಾಗಿದೆ. ನಟ ಸಾರ್ವಭೌಮ ಸಿನಿಮಾ ಕಥೆ ಸಂಪೂರ್ಣ ಅಪ್ಪು ಬಗ್ಗೆ ಇದೆ ಎಂದು ತಿಳಿಸಿದ್ದಾರೆ.