ಧನಂಜಯ್ 
ಸಿನಿಮಾ ಸುದ್ದಿ

ಪ್ರಭು ಶ್ರೀನಿವಾಸ್ ನಿರ್ದೇಶನದ 'ಡಾಲಿ' ಚಿತ್ರದಲ್ಲಿ ಧನಂಜಯ್!

ಟಗರು ಖ್ಯಾತಿಯ ಡಾಲಿ ಪಾತ್ರದಿಂದಾಗಿ ಹೆಚ್ಚು ಪ್ರಸಿದ್ಧಿಗೆ ಬಂದ ನಟ ಧನಂಜಯ್ ಮುಂದಿನ ಚಿತ್ರಕ್ಕೂ ಅದೇ ಶೀರ್ಷಿಕೆ ಇಡಲಾಗಿದೆ. ಇದರಲ್ಲಿ ಮತ್ತೆ ಬ್ಯಾಡ್ ಮ್ಯಾನ್ಸ್ ವರ್ಲ್ಡ್ ಆಗಿ ಧನಂಜಯ್ ಕಾಣಿಸಿಕೊಳ್ಳಲಿದ್ದಾರೆ.

ಟಗರು ಖ್ಯಾತಿಯ ಡಾಲಿ ಪಾತ್ರದಿಂದಾಗಿ ಹೆಚ್ಚು ಪ್ರಸಿದ್ಧಿಗೆ ಬಂದ ನಟ ಧನಂಜಯ್ ಮುಂದಿನ ಚಿತ್ರಕ್ಕೂ ಅದೇ ಶೀರ್ಷಿಕೆ ಇಡಲಾಗಿದೆ. ಇದರಲ್ಲಿ  ಮತ್ತೆ ಬ್ಯಾಡ್ ಮ್ಯಾನ್ಸ್  ವರ್ಲ್ಡ್ ಆಗಿ ಧನಂಜಯ್ ಕಾಣಿಸಿಕೊಳ್ಳಲಿದ್ದಾರೆ.

ಟಗರು ಚಿತ್ರದಲ್ಲಿನ  ಡಾಲಿ ಪಾತ್ರದ ಮೂಲಕ ಕನ್ನಡಿಗರ ಮನೆ, ಮನಗಳಲ್ಲಿ ನೆಲೆ ಕಂಡುಕೊಂಡಿರುವ ಧನಂಜಯ್ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.

ಟಗರು ಚಿತ್ರದ ನಾಯಕ  ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಜೊತೆಗೆ ವಿಲನ್ ಆಗಿ ನಟಿಸಿದ ಧನಂಜಯ್ ಡಾಲಿ ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದರು.  ಹಿರೋ ರೀತಿಯಲ್ಲಿ ವಿಲನ್ ಗೂ ಪ್ರಾಮುಖ್ಯ ನೀಡುವ ಪಾತ್ರ ಡಾಲಿಯದ್ದಾಗಿತ್ತು.

ಈಗ ಇದೇ  ಶೀರ್ಷಿಕೆಯಲ್ಲಿ ಧನಂಜಯ್ ಗಾಗಿ ಬಿಗ್ ಬಜೆಟ್ ಚಿತ್ರ ತಯಾರಾಗುತ್ತಿದೆ. ಗಣಪ ಎಂದೇ ಖ್ಯಾತರಾಗಿರುವ ಪ್ರಭು ಶ್ರೀನಿವಾಸ್  ನಿರ್ದೇಶನದ ಚಿತ್ರವನ್ನು ಯೋಗೇಶ್ ನಾರಾಯಣ್ ನಿರ್ಮಿಸುತ್ತಿದ್ದಾರೆ. ಎರಡನೇ ಸಲ ಚಿತ್ರದ ನಂತರ ಇದು ಅವರು ನಿರ್ಮಿಸುತ್ತಿರುವ ಎರಡನೇ ಚಿತ್ರವಾಗಿದೆ.

ಫೆಬ್ರವರಿ 12 ರಂದು ಡಾಲಿ ಶೀರ್ಷಿಕೆಯನ್ನು ಅಧಿಕೃತವಾಗಿ ಬಿಡುಗಡೆಯಾಗಿದೆ. ನಂತರ  ಪ್ರಿ- ಪ್ರೊಡಕ್ಷನ್ ಕೆಲಸ ಆರಂಭವಾಗಲಿದೆ.ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ಪೂರ್ಣಗೊಂಡ ಬಳಿಕ ಈ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲು ಧನಂಜಯ್ ಯೋಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಿರಿಯ ನಟ ಅನಂತ್ ನಾಗ್ ಗೆ ಪ್ರತಿಷ್ಠಿತ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪ್ರಕಟ! ಪ್ರಧಾನಿ ಮೋದಿ, ಸಿಎಂ ಡಿಕೆಶಿ ಅಭಿನಂದನೆ

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ, ಟಿ20 ಸರಣಿಗೆ ಭಾರತ ತಂಡ ಪ್ರಕಟ: ಹಾರ್ದಿಕ್, ಪಂತ್'ಗೆ ಬಿಗ್ ಶಾಕ್; ವಿರಾಟ್, ರೋಹಿತ್​ ಶರ್ಮಾಗೆ ಚಾನ್ಸ್

‘ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದ್ರೂ ನಂಬದ ಅನಂತ್ ನಾಗ್; ‘ಸುಳ್ಳು ಸುದ್ದಿ’ ಎಂದು ನಕ್ಕಿ ಮಲಗಿದ್ರು’

CBFC ಪುನಾರಚನೆ: ಸುನಿಲ್ ಶೆಟ್ಟಿ, ಪ್ರೀತಿ ಜಿಂಟಾ, ರಿಕಿ ಕೇಜ್ ಸೇರಿದಂತೆ 18 ಸದಸ್ಯರ ಆಯ್ಕೆ!

ಬಿಸಿಸಿಐನಿಂದ WPL 2027ರ ವೇಳಾಪಟ್ಟಿ ಪ್ರಕಟ: ಇದೇ ಅಕ್ಟೋಬರ್‌ನಲ್ಲಿ ಹರಾಜು ಪ್ರಕ್ರಿಯೆ