ರಾಧಿಕಾ ಪಂಡಿತ್ 
ಸಿನಿಮಾ ಸುದ್ದಿ

ಮದ್ವೆ ನಂತರ ರಾಧಿಕಾ ಪಂಡಿತ್ ರೀ ಎಂಟ್ರಿ: 'ಆದಿ ಲಕ್ಷ್ಮಿ ಪುರಾಣ' ಟೀಸರ್ ಬಿಡುಗಡೆ

ಸ್ಯಾಂಡಲ್ ವುಡ್ ಸಿಂಡ್ರೆಲಾ ಎಂದು ಖ್ಯಾತವಾಗಿದ್ದ ರಾಧಿಕಾ ಪಂಡಿತ್ ರಾಕಿ ಬಾಯ್ ಯಶ್ ಅವರೊಡನೆ ಮದುವೆಯಾದ ಬಳಿಕ ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಸುಮಾರು ಎರಡು ವರ್ಷ....

ಬೆಂಗಳೂರು: ಸ್ಯಾಂಡಲ್ ವುಡ್ ಸಿಂಡ್ರೆಲಾ ಎಂದು ಖ್ಯಾತವಾಗಿದ್ದ ರಾಧಿಕಾ ಪಂಡಿತ್ ರಾಕಿ ಬಾಯ್ ಯಶ್ ಅವರೊಡನೆ ಮದುವೆಯಾದ ಬಳಿಕ ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಸುಮಾರು ಎರಡು ವರ್ಷದ ನಂತರ "ಆದಿ ಲಕ್ಷ್ಮಿ ಪುರಾಣ" ಮೂಲಕ ಬೆಳ್ಳಿತೆರೆಯಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ.
"ರಂಗಿತರಂಗ" ಖ್ಯಾತಿಯ ನಿರೂಪ್ ಭಂಡಾರಿ ನಾಯಕನಾಗಿರುವ "ಆದಿ ಲಕ್ಷ್ಮಿ ಪುರಾಣ" ಟೀಸರ್ ಇಂದು (ಶುಕ್ರವಾರ) ಬಿಡುಗಡೆಯಾಗಿದೆ.
ಚಿತ್ರದಲ್ಲಿ ನಿರೂಪ್ ಭಂಡಾರಿ ಪೋಲೀಸ್ ಅಧಿಕಾರಿಯಾಗಿ ಕಾಣಿಸ್ಕೊಳ್ಳುತ್ತಿದ್ದಾರೆ. ನಟ ರಮೇಶ್ ಅರವಿಂದ್ ಟೀಸರ್ ಗೆ ಹಿನ್ನೆಲೆ ದನಿ ನೀಡಿದ್ದಾರೆ.
ಇನ್ನು ಟೀಸರ್ ಬಿಡುಗಡೆ ಕುರಿತಂತೆ ರಾಧಿಕಾ ಪಂಡಿತ್ ಸಹ ಇಂದು ಮುಂಜಾನೆಯೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದರು. ಇದು ನನ್ನ ಅಭಿಮಾನಿಗಳಿಗೆ "ವೀಕೆಂಡ್ ಸ್ಪೆಷಲ್" ಎಂದೂ ಆಕೆ ಹೇಳಿದ್ದರು.
ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರ ಪ್ರಿಯಾ ಅವರ ಚಿತ್ರಕಥೆ, ನಿರ್ದೇಶನ ಒಳಗೊಂಡಿದೆ.ಪ್ರಶಾಂತ್ ರಾಜಪ್ಪ ಸಂಬಾಷಣೆ,ಅನೂಪ್ ಭಂಡಾರಿ ಸಂಗೀತ, ಪ್ರೀತಾ ಜಯರಾಮನ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಇದಲ್ಲದೆ ನಟಿ ತಾರಾ ಹಾಗೂ ಸುಚೀಂದ್ರ ಪ್ರಸಾದ್ ಪ್ರಮುಖ ತಾರಾಬಳಗದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!