ಮಂಡ್ಯದ ಗಂಡು ಅಂಬಿ ಪುತ್ರನ ‘ಅಮರ್’ ಟೀಸರ್ ರಿಲೀಸ್ 
ಸಿನಿಮಾ ಸುದ್ದಿ

ಮಂಡ್ಯದ ಗಂಡು ಅಂಬಿ ಪುತ್ರನ ‘ಅಮರ್’ ಟೀಸರ್ ರಿಲೀಸ್

ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ "ಅಮರ್" ಚಿತ್ರದ ಟೀಸರ್ ಇಂದು (ಗುರುವಾರ) ಬಿಡುಗಡೆಯಾಗಿದೆ.

ಬೆಂಗಳೂರು: ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ "ಅಮರ್" ಚಿತ್ರದ ಟೀಸರ್ ಇಂದು (ಗುರುವಾರ) ಬಿಡುಗಡೆಯಾಗಿದೆ. ಇಂದು ‘ಯೂ ಟ್ಯೂಬ್‌ನಲ್ಲಿ ಬಿಡುಗಡೆ ಕಂಡಿರುವ ಟೀಸರ್ ನಲ್ಲಿ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅವರ ಪಂಚಿಂಗ್ ಡೈಲಾಗ್ ಗಳಿದೆ.
ಅಭಿಷೇಕ್ ಅವರ ಮೊದಲ ಚಿತ್ರ ಇದಾಗಿದ್ದು ಅಂಬರೀಶ್ ಪುತ್ರನ ಮೊದಲಚಿತ್ರವನ್ನು ನೋಡಲು ಕಾಯುತ್ತಿರುವ ಅಭಿಮಾನಿಗಳಿಗೆ ಈ ಟೀಸರ್ ಇನ್ನಷ್ಟು ಕುತೂಹಲ ಕೆರಳಿಸಿದೆ.
"ಅಮರ್" ಟೀಸರ್ ಗಾಗಿ ಇದಾಗಲೇ ಕಿಚ್ಚ ಸುದೀಪ್, ದರ್ಶನ್ ಸೇರಿ ಹಲವರು ಶುಭ ಹಾರೈಸಿದ್ದಾರೆ. ಇನ್ನು ಇದೀಗ ಮಲೇಷಿಯಾದಲ್ಲಿರುವ ಸುಮಲತಾ ತಮ್ಮ ಅಗಲಿದ ಪತಿಯನ್ನು ನೆನೆದಿದ್ದಾರೆ. ಅಲ್ಲದೆ "ಅವರು (ಅಂಬರೀಶ್) ಮೇಲಿನಿಂದಲೇ  ನಿನ್ನನ್ನು ನೋಡಿ ‘ಮಗ್ನೇ, ಆಲ್ ದಿ ಬೆಸ್ಟ್..’ ಎಂದಿರುತ್ತಾರೆ” ಎಂದೂ ಹೇಳಿದ್ದಾರೆ. ಅಲ್ಲದೆ ಮಗನ ಚಿತ್ರಕ್ಕೆ ಆಲ್ ದಿ ಬೆಸ್ಟ್ ಹೇಳಿ ಅವರು ಟ್ವೀಟ್ ಮಾಡಿದ್ದಾರೆ. 
ಅಂಬಿ ತೀರಿಕೊಳ್ಳುವ ಕೆಲ ದಿನಗಳಿಗೆ ಮುನ್ನ ತಮ್ಮ ಪುತ್ರ ಅಭಿಷೇಕ್ ನ ಮೊದಲ ಚಿತ್ರ "ಅಮರ್"ಕೆಲ ದೃಶ್ಯಗಳನ್ನು ತರಿಸಿ ನೋಡಿ ಸಂತಸಪಟ್ಟಿದ್ದರು. 
ಇನ್ನು ಅಭಿಷೇಕ್ ಅವರ ಅಣ್ಣನ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ನಟಿಸಿದ್ದು ಚಿತ್ರದಲ್ಲಿ ಅವರು ಶ್ರೀಮಂತ ಉದ್ಯಮಿ ಪಾತ್ರದಲ್ಲಿ ಮಿಂಚಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ