ಮಹೇಶ್ ಬಾಬು ಶ್ರೀಮುರುಳಿ ಭೇಟಿ
ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಮೂರು ಚಿತ್ರಗಳ ಶೂಟಿಂಗ್ ಆಗುತ್ತಿವೆ.
ಪೈಲ್ವಾನ್ ಚಿತ್ರಕ್ಕಾಗಿ ಸುದೀಪ್, ಭರಾಟೆ ಚಿತ್ರೀಕರಣದಲ್ಲಿ ಶ್ರೀಮುರಳಿ, ಪೊಗರು ಚಿತ್ರೀಕರಣಕ್ಕಾಗಿ ಧ್ರುವ ಸರ್ಜಾ ಬಹುತೇಕ ಅಲ್ಲಿಯೇ ಕಾಲ ಕಳೆಯುತ್ತಿದ್ದಾರೆ.
ಈ ವೇಳೆ ಶ್ರೀಮುರುಳಿ ತೆಲುಗು ಪ್ರಿನ್ಸ್ ಮಹೇಶ್ ಬಾಬು ಹಾಗೂ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. ಸಾಮಾನ್ಯವಾಗಿ ಮಹೇಶ್ ಬಾಬು ಅಪರಿಚಿತರನ್ನು ಭೇಟಿ ಮಾಡುವುದಿಲ್ಲ ಎಂದು ಕೇಳಿದ್ದೆ,. ಆದರೆ ಅವರು ತುಂಬಾ ವಿನಯವಾಗಿ ನನ್ನನ್ನು ಬರ ಮಾಡಿಕೊಂಡರು , ಅವರು ನನ್ನನ್ನು ಸ್ವಾಗತಿಸಿದ ರೀತಿಗೆ ನಾನು ವಿಧೇಯನಾಗಿದ್ದೇನೆ, ಅವರು ತುಂಬಾ ಒಳ್ಳೆಯವರು ಎಂದು ಶ್ರೀಮುರುಳಿ ಹಾಡಿ ಹೊಗಳಿದ್ದಾರೆ.
ತಮ್ಮ ಸಿನಿಮಾಗಳ ಬಗ್ಗೆ ಹಾಗೂ ಮಕ್ಕಳ ಬಗ್ಗೆ ಪರಸ್ಪರ ಮಾತನಾಡಿಕೊಂಡಿದ್ದಾರೆ, ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಆರಂಭಿಸುವ ಮೊದಲು ಅವರ ಸಿನಿಮಾ ಥಿಯೇಟರ್ ಗಳಲ್ಲಿ ನೋಡುತ್ತಿದ್ದೆ, ಸದ್ಯ ಮಹೇಶ್ ಮಹರ್ಷಿ ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದಾರೆ, ಅವರು ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡಿದರು, ಸ್ಯಾಂಡಲ್ ವುಡ್ ನಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿವೆ, ಅವರನ್ನು ಭೇಟಿ ಮಾಡಲು ನೆರವಾದ ಸಾಯಿಕುಮಾರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ,
ಮತ್ತೊಂದು ಸೆಟ್ ಗೆ ಭೇಟಿ ನೀಡಿದ ಶ್ರೀಮುರಳಿ ಪೈಲ್ವಾನ್ ಸಿನಿಮಾ ಶೂಟಿಂಗ್ ನಲ್ಲಿದ್ದ ಸುದೀಪ್ ಅವರನ್ನು ಭೇಟಿ ಮಾಡಿದರು, ಜೊತೆಗೆ ಪೈಲ್ವಾನ್ ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸಿದ್ದ ಸುನೀಲ್ ಶೆಟ್ಟಿ ಅವರನ್ನು ಮೀಟ್ ಮಾಡಿದ್ದಾರೆ,.
ಈಗಾಗಲೇ ಭರಾಟೆ 100 ದಿನಗಳ ಶೂಟಿಂಗ್ ಪೂರ್ಣಗೊಳಿಸಿದೆ, ಎಪ್ರಿಲ್ ತಿಂಗಳೊಳಗೆ ಶೂಟಿಂಗ್ ಮುಗಿಸಲು ಚಿತ್ರತಂಡ ನಿರ್ಧರಿಸಿದೆ, ಭರಾಟೆ ನಂತರ ಶ್ರೀಮುರುಳಿ, ಮಹೇಶ್ ಕುಮಾರ್ ಅವರ ಮದಗಜ ಸಿನಿಮಾದಲ್ಲಿ ನಟಿಸಲಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos