ದಾಂಪತ್ಯ ಜೀವನಕ್ಕೆ ನೇಹಾ ಪಾಟೀಲ್, ಪ್ರಣವ್ ಕೈಹಿಡಿದ ಕನ್ನಡ ನಟಿ 
ಸಿನಿಮಾ ಸುದ್ದಿ

ದಾಂಪತ್ಯ ಜೀವನಕ್ಕೆ ನೇಹಾ ಪಾಟೀಲ್, ಪ್ರಣವ್ ಕೈಹಿಡಿದ ಕನ್ನಡ ನಟಿ

: ಸ್ಯಾಂಡಲ್ ವುಡ್ ನಲ್ಲಿ ತಮ್ಮ ವಿಶೇಷ ಅಭಿನಯಗಳಿಂದ ಗುರುತಿಸಿಕೊಂಡಿದ್ದ ನೇಹಾ ಪಾಟೀಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ತಮ್ಮ ವಿಶೇಷ ಅಭಿನಯಗಳಿಂದ ಗುರುತಿಸಿಕೊಂಡಿದ್ದ ನೇಹಾ ಪಾಟೀಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹುಬ್ಬಳ್ಳಿ ಮೂಲದ ನಟಿ ನೇಹಾ ಇಂಜುಇನಿಯರ್ ಹುಡುಗ ಪ್ರಣವ್ ಅವರ ಜತೆ ಸಪ್ತಪದಿ ತುಳಿದಿದ್ದಾರೆ.ನಿನ್ನೆ ಸಂಜೆ ಬೆಂಗಳೂರು ವಿಜಯನಗರದ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ನಡೆದಿದ್ದು ಶುಕ್ರವಾರ ವಿವಾಹ ಮಹೋತ್ಸವ ಸಹ ಅದ್ದೂರಿಯಾಗಿ ನೆರವೇರಿದೆ.
ಆರತಕ್ಷತೆಯಲ್ಲಿ ಕನ್ನಡ ಚಿತ್ರರಂಗದ ಗಣ್ಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿಸಿದ್ದರು. ನಟಿ ದಿಪೀಕಾ ದಾಸ್, ಶರಣ್ಯ, ನಿರ್ದೇಶಕ ಮುರಳಿಕೃಷ್ಣ ಹಾಗೂ ನಿರೂಪಕ ರೆಹಮಾನ್ ಸೇರಿ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನೇಹಾ ಅವರದ್ದು ಹಿರಿಯರು ನೋಡಿದ ಹುಡುಗನೊಡನೆ ನಡೆದ ವಿವಾಹವಾಗಿದ್ದು ಕುಟುಂಬದ ಹಿರಿಯರು, ಆಪ್ತರು ಮದುವೆಯಲ್ಲಿ ಭಾಗವಹಿಸಿದ್ದರು.
2011ರಲ್ಲಿ ಚಿತ್ರರಂಗ ಪ್ರವೇಶಿಸಿದ್ದ ನೇಹಾ ಸಂಕ್ರಾಂತಿ, ಸಂಯುಕ್ತ, ವರ್ಧನ, ಟೈಟ್ಲು ಬೇಕಾ, ತಿಪ್ಪಜ್ಜಿ ಸರ್ಕಲ್, ಸಿತಾರ, ಪಾರು ವೈಫ್ ಆಫ್ ದೇವದಾಸ್ ಸೇರಿ ಅನೇಕ ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!