ಸಿನಿಮಾ ಸುದ್ದಿ

ನಿರ್ದೇಶಕರು ನನ್ನ ಪ್ರತಿಭೆಯನ್ನು ಚೆನ್ನಾಗಿ ಬಳಸಿಕೊಳ್ಳಲಿ ಎಂಬುದೇ ನನ್ನ ಆಸೆ: ಶ್ರುತಿ ಪ್ರಕಾಶ್

Raghavendra Adiga
ಬೆಂಗಳೂರು: ಕನ್ನಡದ ಬಹುಮುಖಿ ಪ್ರತಿಭೆ ಗಾಯಕಿ, ನಟಿ, ನೃತ್ಯಗಾರ್ತಿಯಾದ ಶ್ರುತಿ ಪ್ರಕಾಶ್ ಇದೀಗ ಮೂರು ಚಿತ್ರಗಳಲ್ಲಿ ಏಕಕಾಲಕ್ಕೆ ಕೆಲಸ ಮಾಡುತ್ತಿದ್ದಾರೆ. "ಲಂಡನ್ ನಲ್ಲಿ ಲಂಬೋದರ" ಇವರ ಚೊಚ್ಚಲ ಕನ್ನಡ ಚಿತ್ರವಾಗಿದ್ದು ಇದರಲ್ಲಿ ಆಕೆ ಒಂದು ಹಾಡನ್ನು ಹಾಡಿದ್ದಾರೆ. ಚಿತ್ರದ ಹಾಡುಗಳ ಆಡಿಯೋ ಸಿಡಿ ಶುಕ್ರವಾರ ಬಿಡುಗಡೆಯಾಗಿದೆ."ಆಲ್ಬಮ್ ನಲ್ಲಿ ಐದು ಹಾಡುಗಳಿದ್ದು ಇದರಲ್ಲಿ ಒಂದು ಹಾಡಿಗಾಗಿ ನನಗೆ ಕ್ರೆಡಿಟ್ ನಿಡಲಾಗಿದೆ" ಶ್ರುತಿ ಹೇಳಿದ್ದಾರೆ.
ಗಾಯನ, ನೃತ್ಯ, ನಟನೆ ಮೂರನ್ನೂ ಏಕಕಾಲಕ್ಕೆ ಹೇಗೆ ಮ್ಯಾನೇಜ್ ಮಾಡುವಿರಿ ಎಂದು ಕೇಳಿದಾಗ ಶ್ರುತಿ "ನನಗೆ ಚಿಕ್ಕವಯಸ್ಸಿನಿಂದ ಇದು ಅಭ್ಯಾಸವಾಗಿದೆ" ಎನ್ನುತ್ತಾರೆ. ನಾನು ಮಗುವಾಗಿದ್ದಾಗಲೂ ಯಾವಾಗಲೂ  ವಾಕ್ ಮನ್ ಇಟ್ಟುಕೊಳ್ಳುತ್ತಿದ್ದೆ. ನಾನು ಬಸ್, ಟ್ರೈನ್ ಗಳಲ್ಲಿ ಪ್ರವಾಸ ತೆರಳುವಾಗ ವಾಕ್ ಮನ್ ಬಳಸಿ ಹಾಡುಗಳನ್ನು ಕೇಳುತ್ತಿದ್ದೆ. ಆಗ ನಾನು ದೃಶ್ಯಗಳನ್ನು ಮನದಲ್ಲೇ ಕಲ್ಪಿಸಿಕೊಂಡು ಅಭಿನಯಿಸುವುದು ಇತ್ತು. ಈ ಕಾರಣದಿಂದ ನಟನೆ ನನಗೆ ಬಾಲ್ಯದಿಂದಲೇ ಇಷ್ಟವಾದ ಕ್ಷೇತ್ರ. ಅಂತಿಮವಾಗಿ ವಿ ಚಾನಲ್ ನ ಶೋ ಒಂದರಲ್ಲಿ ನನಗೆ ಕ್ಯಾಮರಾ ಎದುರಿಸುವ ಅವಕಾಶ ಸಿಕ್ಕಿತು"
ಶ್ರುತಿ ನಟಿಸಿರುವ ಎಲ್ಲಾ ಚಿತ್ರಗಳಲ್ಲಿ ಅವರಿಗೆ ಹಾಡುವುದಕ್ಕೆ ಸಹ ಅವಕಾಶ ಲಭಿಸಿದೆ ಎನ್ನುವುದು ವಿಶೇಷ.
ಕನ್ನಡದ ಪ್ರಸಿದ್ದ ಡ್ಯಾನ್ಸ್ ರಿಯಾಲಿಟಿ ಶೋ "ತಕಧಿಮಿತ" ದಲ್ಲಿ ಶ್ರುತಿ ಭಾಗವಹಿಸಿದ್ದೇ ಅವರಿಗೆ ಒಂದರ ಹಿಂದೊಂದು ಚಿತ್ರಗಳಲ್ಲಿ ಕಾಣಿಸಿಕೊಳ್ಲುವ ಅವಕಾಶ ಸಿಕ್ಕಿದೆ.ಇದಾಗಲೇ ಆಕೆ "ರಂಗಮಂದಿರ" ಚಿತ್ರದ ಶೂಟಿಂಗ್ ಮುಗಿಸಿದ್ದು ಇದೀಗ "ಫಿದಾ" ಎಂಬ ಚಿತ್ರಕ್ಕಾಗಿ ನಟನೆಗಿಳಿಯಲಿದ್ದಾರೆ. ಈ ಚಿತ್ರ ಇನ್ನೇನು ಕೆಲ ದಿನಗಳಲ್ಲಿ ಸೆಟ್ಟೇರಲಿದೆ."ನಾನು ಇದಾಗಲೇ "ಗಲ್ಲಿ" ಹೆಸರಿನ ಇನ್ನೊಂದು ಚಿತ್ರದಲ್ಲಿ ನಟಿಸಲು ತಯಾರಾಗಿದ್ದೇನೆ. ಇದು ಗಲ್ಲಿ ಕ್ರಿಕೆಟ್ ವಿಷಯಾಧಾರಿತ ಚಿತ್ರವಾಗಿದೆ. ಪ್ರಶಾಂತ್ ರಂಗನಾಥ್ ಅವರ ಸಾರಥ್ಯದ ಈ ಚಿತ್ರ ಏಪ್ರಿಲ್ ನಲ್ಲಿ ಸೆಟ್ತೇರಲಿದೆ" ಅವರು ಹೇಳಿದ್ದಾರೆ.
"ನಿರ್ದೇಶಕರು ನನ್ನ ಪ್ರತಿಭೆಯನ್ನು ಚೆನ್ನಾಗಿ ಬಳಸಿಕೊಳ್ಳಲಿ ಎಂಬುದೇ ನನ್ನ ಆಸೆ" ಶ್ರುತಿ ಹೇಳಿದರು.
SCROLL FOR NEXT