ಉಮಾಶ್ರೀ-ರವಿಚಂದ್ರನ್-ಚೇತನ್ 
ಸಿನಿಮಾ ಸುದ್ದಿ

ಆರು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಲಿರುವ ಉಮಾಶ್ರೀ!

ಕನ್ನಡ ಸೂಪರ್ ಹಿಟ್ ಪುಟ್ನಂಜ ಚಿತ್ರದಲ್ಲಿ ರವಿಚಂದ್ರನ್ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಉಮಾಶ್ರೀ ಇದೀಗ ಬ್ಯಾಟ್ರಾಯ ಚಿತ್ರದಲ್ಲೂ ರವಿಚಂದ್ರನ್ ಗೆ ತಾಯಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಸೂಪರ್ ಹಿಟ್ ಪುಟ್ನಂಜ ಚಿತ್ರದಲ್ಲಿ ರವಿಚಂದ್ರನ್ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಉಮಾಶ್ರೀ ಇದೀಗ ಬ್ಯಾಟ್ರಾಯ ಚಿತ್ರದಲ್ಲೂ ರವಿಚಂದ್ರನ್ ಗೆ ತಾಯಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 
ರಾಜಕೀಯದಲ್ಲಿ ಸಕ್ರಿಯರಾಗಿದ್ದರಿಂದ ಉಮಾಶ್ರೀ ಅವರು ಕಳೆದ ಆರು ವರ್ಷಗಳಿಂದ ಯಾವುದೇ ಚಿತ್ರದಲ್ಲೂ ನಟಿಸಿರಲಿಲ್ಲ. ಇದೀಗ ರವಿಚಂದ್ರನ್ ಮತ್ತು ಚೇತನ್ ಅಭಿನಯದ ಚಿತ್ರದಲ್ಲಿ ನಟಿಸುವ ಮೂಲಕ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಬ್ಯಾಟ್ರಾಯ ಚಿತ್ರವನ್ನು ಮದನ್ ಮೋಹನ್ ರೆಡ್ಡಿ ಎಂಬುವರು ನಿರ್ದೇಶಿಸುತ್ತಿದ್ದು ಚಿತ್ರವನ್ನು ಆರ್ ಎಸ್ ಶ್ರೀನಿವಾಸ್ ಚಿತ್ರವನ್ನು ನಿರ್ಮಾಸುತ್ತಿದ್ದಾರೆ. ಇನ್ನು ಚಿತ್ರದ ಫಸ್ಟ್ ಲುಕ್ ಸಂಕ್ರಾತಿ ಹಬ್ಬಕ್ಕೆ ಬಿಡುಗಡೆಯಾಗಲಿದೆ. 
ಜನವರಿ 12ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಇನ್ನು ನಿರ್ಮಾಪಕರು ಚಿತ್ರದ ನಟಿಯಾಗಿ ರಶ್ಮಿಕಾ ಮಂದಣ್ಣರನ್ನು ಕರೆ ತರುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಚುನಾವಣೆಯಲ್ಲಿ ಅಕ್ರಮ ನಡೆದರೆ ಸ್ಪರ್ಧಿಸಬೇಡಿ, ಚುನಾವಣೆಯನ್ನೇ ಬಹಿಷ್ಕರಿಸಿ:': ಪ್ರತಿಪಕ್ಷಗಳಿಗೆ CJPಯ ಅಭಿಜೀತ್ ದೀಪ್ಕೆ ಆಗ್ರಹ

SIR ಕುರಿತು ಚುನಾವಣಾ ಆಯೋಗ ಏಕಪಕ್ಷೀಯ ನಿರ್ಧಾರ ಆರೋಪ: CEC ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ PIL

'ರಾಸಲೀಲೆ ದೃಶ್ಯ' ಲೀಕ್ ಆದಾಗ ನಾಲ್ಕು ದಿನ ಮನೆಯಿಂದ ಹೊರ ಬಂದಿರಲಿಲ್ಲ; ಕಾರು ಚಾಲಕ, ವಾಚ್'ಮನ್ ಸಹ ಆ ವಿಡಿಯೋ ನೋಡಿದ್ದ: ನಟಿ ರಾಧಿಕಾ

ಮಹಿಳೆ ಫೋಟೋ ಮಾರ್ಫ್ ಮಾಡಿ ಪ್ರಧಾನಿ ಮೋದಿ ಫೋಟೋದೊಂದಿಗೆ ಪ್ರದರ್ಶನ: CJP ವಿರುದ್ಧ FIR ದಾಖಲು

ಆಯೋಗದ ವಿವಾದ: CEC Gyanesh Kumar ಭಾಗಿಯಾಗಬೇಕಿದ್ದ ಯುವಕರೊಂದಿಗಿನ ಕಾರ್ಯಕ್ರಮ ದಿಢೀರ್ ರದ್ದು!