ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಿಮ್ಮಿಕ್ ಚಿತ್ರದ ಪೋಸ್ಟರ್ ರಿಲೀಸ್
2018 ರಲ್ಲಿ ಗಣೇಶ್ ಅಭಿನಯದ ಆರೇಂಜ್ ಸಿನಿಮಾ ತೆರೆ ಕಂಡಿದ್ದು, ಸದ್ಯ ಗಣೇಶ್ ಕೈಯ್ಯಲ್ಲಿ ಮೂರು ಪ್ರಾಜೆಕ್ಟ್ ಗಳಿವೆ...
ಬೆಂಗಳೂರು: 2018 ರಲ್ಲಿ ಗಣೇಶ್ ಅಭಿನಯದ ಆರೇಂಜ್ ಸಿನಿಮಾ ತೆರೆ ಕಂಡಿದ್ದು, ಸದ್ಯ ಗಣೇಶ್ ಕೈಯ್ಯಲ್ಲಿ ಮೂರು ಪ್ರಾಜೆಕ್ಟ್ ಗಳಿವೆ, ಸದ್ಯ ಗಣೇಶ್ ಗಿಮ್ಮಿಕ್ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದೆ.
ನಾಗಣ್ಣ ನಿರ್ದೇಶನದ ಗಿಮ್ಮಿಕ್ ಹಾರರ್ -ಕಾಮಿಡಿ ಸಿನಿಮಾವಾಗಿದ್ದು, 2019ರಲ್ಲಿ ತೆರೆ ಕಾಣುವ ಗಣೇಶ್ ಅಭಿನಯದ ಮೊದಲ ಸಿನಿಮಾ ಇದಾಗಿದೆ, ಶ್ರೀಲಂಕಾದ ಮನೆಯೊಂದರಲ್ಲಿ ಹೆಚ್ಚಿನ ಪ್ರಮಾಣದ ಶೂಟಿಂಗ್ ಮಾಡಲಾಗಿದೆ. ಜೊತೆಗೆ ಮೈಸೂರು ಹಾಗೂ ಬೆಂಗಳೂರಿನಲ್ಲೂ ಕೂಡ ಶೂಟಿಂಗ್ ಮಾಡಲಾಗಿದೆ,
ಗಿಮ್ಮಿಕ್ ನಲ್ಲಿ ರೋನಿಕಾ ಸಿಂಗ್ ರವಿಶಂಕರ್ ಗೌಡ. ಸಾಧು ಕೋಕಿಲಾ, ಶೋಭರಾಜ್, ಸುಂದರ್ ರಾಜ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.