ಯಶ್, ವಿದ್ಯಾಬಾಲನ್ 
ಸಿನಿಮಾ ಸುದ್ದಿ

ಯಶ್ ನೀವು ಕರೆದರೆ ಖಂಡಿತವಾಗಿಯೂ ಕನ್ನಡ ಚಿತ್ರದಲ್ಲಿ ನಟಿಸುತ್ತೇನೆಂದ ಬಾಲಿವುಡ್ ನಟಿ!

ಕೆಜಿಎಫ್ ಚಿತ್ರದ ಭರ್ಜರಿ ಯಶಸ್ಸು ಭಾರತೀಯ ಚಿತ್ರರಂಗ ಇದೀಗ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದೆ. ಇನ್ನು ಬಾಲಿವುಡ್ ನಟಿ ವಿದ್ಯಾಬಾಲನ್ ಸಹ ಯಶ್ ನೀವು ಅವಕಾಶ ನೀಡಿದರೆ....

ಕೆಜಿಎಫ್ ಚಿತ್ರದ ಭರ್ಜರಿ ಯಶಸ್ಸು ಭಾರತೀಯ ಚಿತ್ರರಂಗ ಇದೀಗ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದೆ. ಇನ್ನು ಬಾಲಿವುಡ್ ನಟಿ ವಿದ್ಯಾಬಾಲನ್ ಸಹ ಯಶ್ ನೀವು ಅವಕಾಶ ನೀಡಿದರೆ ಖಂಡಿತವಾಗಿಯೂ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತೇನೆ ಎಂದು ಹೇಳಿದ್ದಾರೆ. 
ಟಾಲಿವುಡ್ ನಟ ಬಾಲಕೃಷ್ಣ ಅಭಿನಯದ ಎನ್​ಟಿಆರ್ ಕಥಾನಾಯಕುಡು ಚಿತ್ರದಲ್ಲಿ ಎನ್​ಟಿಆರ್ ಪತ್ನಿ ಪಾತ್ರದಲ್ಲಿ ವಿದ್ಯಾಬಾಲನ್ ಅಭಿನಯಿಸಿದ್ದರು. ಇನ್ನು ಚಿತ್ರದ ಪ್ರಮೋಷನ್ ಗಾಗಿ ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಟ ಬಾಲಕೃಷ್ಣ, ವಿದ್ಯಾಬಾಲನ್, ಯಶ್ ಹಾಗೂ ಪುನೀತ್ ರಾಜಕುಮಾರ್ ಭಾಗವಹಿಸಿದ್ದರು.
ಈ ವೇಳೆ ವಿದ್ಯಾಬಾಲನ್ ಕನ್ನಡ ಚಿತ್ರರಂಗಕ್ಕೆ ಕಾಲಿಡುವುಡು ಯಾವಾಗ ಎನ್ನುವ ಪ್ರಶ್ನೆ ಕೇಳಿ ಬಂದಿತ್ತು. ಅದಕ್ಕೆ ವಿದ್ಯಾಬಾಲನ್ ಯಶ್ ನೀವೂ ಅವಕಾಶ ನೀಡಿದರೆ ಖಂಡಿತವಾಗಿಯೂ ಕನ್ನಡಕ್ಕೆ ಕಾಲಿಡುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 
ವಿದ್ಯಾಬಾಲನ್ ದಿ ಡರ್ಟಿ ಪಿಕ್ಚರ್, ಕಹಾನಿ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇಶಿಯರು ಸೇರಿ 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ!

ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪದಿದ್ದರೆ TVK ಸಂಪುಟದಿಂದ ಕಾಂಗ್ರೆಸ್ ಹೊರಬರಲಿದೆ: ಸಚಿವ

ಇಸ್ಲಾಂ ಧರ್ಮವೇ ಶ್ರೇಷ್ಠ: ಸಿಎಂ ಡಿಕೆಶಿಯ 6ನೇ ಗ್ಯಾರಂಟಿ- ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ' ರಾಯರೆಡ್ಡಿ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ!

ಲಾರಕ್ ದ್ವೀಪದ ಮೇಲಿನ ದಾಳಿಗೆ ಪ್ರತೀಕಾರ: ಜೋರ್ಡಾನ್‌ನ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ!

ಹಗ್ಗ 16 ಮೊಳ ಇದ್ದರೂ ಕುಣಿಕೆ ನಮ್ಮ ಹತ್ತಿರ ಇದೆ: ಏನೋ ದಬಾಕಕ್ಕೆ ಹೋಗವನೆ, ದಬಾಕೊಂಡೇ ಬರ್ತಾನೆ ಅಂತ ಗೊತ್ತಿತ್ತು; ಯಶ್ ತಾಯಿ