ಶಿವಣ್ಣ ಮತ್ತು ಬಾಲಕೃಷ್ಣ 
ಸಿನಿಮಾ ಸುದ್ದಿ

ಶಿವಣ್ಣನ 125ನೇ ಚಿತ್ರ 'ಭೈರತಿ ರಣಗಲ್'ನಲ್ಲಿ ಬಾಲಯ್ಯ ನಟನೆ!

ಮುಪ್ತಿ ನಿರ್ದೇಶಕ ನರ್ತನ್ ನಿರ್ದೇಶನದ ಭೈರತಿ ರಣಗಲ್ ನಲ್ಲಿ ತೆಲುಗು ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ....

ಬೆಂಗಳೂರು: ನಟ ಶಿವರಾಜ್ ಕುಮಾರ್ ಅವರ 125 ಚಿತ್ರ ಭೈರತಿ ರಣಗಲ್ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಮುಪ್ತಿ ನಿರ್ದೇಶಕ ನರ್ತನ್ ನಿರ್ದೇಶನದ ಭೈರತಿ ರಣಗಲ್ ನಲ್ಲಿ ತೆಲುಗು  ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ  ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮಫ್ತಿ ಶಿವಣ್ಣ ನಟನೆಯ ಸೂಪರ್- ಡೂಪರ್ ಹಿಟ್​ ಸಿನಿಮಾ. ಶಿವಣ್ಣನ ‘ಭೈರತಿ ರಣಗಲ್​’ ಪಾತ್ರ ಎಂಥವರನ್ನು ಕಾಡುವಂತಿತ್ತು. ಶಿವಣ್ಣನ ಗೆಟಪ್​… ಕಣ್ಣಲ್ಲೆ ಭಯ ಬೀಳಿಸೋ ನಟನೆ ಮಾಸ್​- ಕ್ಲಾಸ್​ ವ್ಯಕ್ತಿತ್ವ ಜನರನ್ನು ಸೆಳೆದಿತ್ತು. ಇದೀಗ ಶಿವಣ್ಣ ಮತ್ತೆ ‘ಭೈರತಿ ರಣಗಲ್​’ ಆಗೋಕೆ ಹೊರಟಿದ್ದಾರೆ. ‘ಮಫ್ತಿ’ ಕಥೆಯ ಪ್ರೀಕ್ವೆಲ್​ನಲ್ಲಿ ಶಿವಣ್ಣ ನಟಿಸ್ತಿದ್ದು, ಏಪ್ರಿಲ್​ನಲ್ಲಿ ‘ಭೈರತಿ ರಣಗಲ್​’ ಸೆಟ್ಟೇರಲಿದೆ.
ಕನ್ನಡ ಚಿತ್ರರಂಗ ಬಿಟ್ಟು ಶಿವಣ್ಣ ಬೇರೆ ಭಾಷೆಯಲ್ಲಿ ನಟಿಸಿದ್ದು ಇತಿಹಾಸದಲ್ಲೆ ಇಲ್ಲ. ಆದರೆ ನಟ ಬಾಲಕೃಷ್ಣ ಒತ್ತಾಯದ ಮೇರೆಗೆ ಶಿವಣ್ಣ ತೆಲುಗಿನ ‘ಗೌತಮಿಪುತ್ರ ಸಾತಕರ್ಣಿ’ ಸಿನಿಮಾದಲ್ಲಿ ನಟಿಸಿದ್ದರು. ಶಿವಣ್ಣ ಕಾಳಹಶ್ತೇಶ್ವರ ಎಂಬ ಪಾತ್ರದಲ್ಲಿ ನಟಿಸಿದ್ದರು. 
ಇದೀಗ ಶಿವಣ್ಣಗಾಗಿ ಬಾಲಯ್ಯ ಕೂಡ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸೋಕೆ ಬರ್ತಿದ್ದಾರೆ. ಇದೊಂದು ಪ್ರೀಕ್ವೆಲ್​ ಸಿನಿಮಾವಾಗಿದ್ದು, ಮಫ್ತಿ ಸಿನಿಮಾದ ಹಿನ್ನೆಲೆಯನ್ನು ಬಿಚ್ಚಿಡಲಿದೆ.
 ಶ್ರೀ ಮುರಳಿಯ ಎಂಟ್ರಿಗೂ ಮುನ್ನ ಭೈರತಿ ರಣಗಲ್ ಏನಾಗಿದ್ದ..? ಆತನ ವೃತ್ತಾಂತ ಏನು..? ಎಂಬಂತಹ ಪ್ರಶ್ನೆಗಳಿಗೆ ಉತ್ತರ ನೀಡಲಿದೆ. ಈ ಥ್ರಿಲ್ಲಿಂಗ್​ ಕಥೆಯಲ್ಲಿ ಬಾಲಯ್ಯ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಬಾಲಯ್ಯ ಜೊತೆಗೆ ಮಾತುಕತೆ ನಡೆಸಿದ್ದಾರೆ, ಶ್ರೀ ಮುತ್ತು ಪ್ರೊಡಕ್ಷನ್ ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನ್ಯಾಯಯುತವಾಗಿ ನಡೆಸಿಕೊಳ್ಳಿ': ಪಾಕ್ ಮಾಜಿ ಪ್ರಧಾನಿ ಪರ ಕಪಿಲ್ ದೇವ್, ಸುನೀಲ್ ಗವಾಸ್ಕರ್ ಸೇರಿ 14 ಮಾಜಿ ನಾಯಕರು ಬ್ಯಾಟಿಂಗ್!

ಕರ್ನಾಟಕದ ಯಾವ ಶಾಸಕನಿಗೂ ಕ್ಷೇತ್ರದ ಅಭಿವೃದ್ಧಿಯನ್ನು ಸೋಮಣ್ಣನ ತರ ಮಾಡೋಕೆ ಸಾಧ್ಯವಿಲ್ಲ: ಸಚಿವ ಜಮೀರ್ ಪ್ರಶಂಸೆ

ಮಹಾರಾಷ್ಟ್ರ: ಲೋಕಭವನದಲ್ಲಿ ಪ್ರಧಾನಿ ಮೋದಿ, ಮ್ಯಾಕ್ರನ್ ಭೇಟಿ! ಏನೆಲ್ಲಾ ಮಾತುಕತೆ ಆಯ್ತು?

ಸೆಕ್ಸ್ ನಿರಾಕರಿಸಿದ ಗರ್ಲ್ ಫ್ರೆಂಡ್: ಚಾಕು ಮುರಿಯುವವರೆಗೂ ಇರಿದು ಹತ್ಯೆ; ಶವದ ಜೊತೆ ಲೈಂಗಿಕ ಕ್ರಿಯೆ; ಆತ್ಮದ ಜೊತೆ ಮಾತನಾಡಲು ಪೂಜೆ!

ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪದಗ್ರಹಣ!

SCROLL FOR NEXT