'ಶ್ರೀ ಭರತ ಬಾಹುಬಲಿ'ಯಲ್ಲಿ ಬಿಗ್ ಬಾಸ್ ಸ್ಪರ್ಧಿ ಶೃತಿ ಪ್ರಕಾಶ್
ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿ ಶೃತಿ ಪ್ರಕಾಶ್ ಮಾಂಡವ್ಯ ನಿರ್ದೇಶನದ ಶ್ರೀ ಭರತ ಬಾಹುಬಲಿ ಸಿನಿಮಾದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ....
ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿ ಶೃತಿ ಪ್ರಕಾಶ್ ಮಾಂಡವ್ಯ ನಿರ್ದೇಶನದ ಶ್ರೀ ಭರತ ಬಾಹುಬಲಿ ಸಿನಿಮಾದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ.
ಈ ಸಿನಿಮಾದಲ್ಲಿ ಶೃತಿ ವಿಶೇಷ ಹಾಡೊಂದಕ್ಕೆ ಬಣ್ಣ ಹಚ್ಚಲಿದ್ದಾರೆ, ಸಿನಿಮಾದಲ್ಲಿ ಚಿಕ್ಕಣ್ಣ ಕೂಡ ನಟಿಸಿದ್ದಾರೆ. ಸೋಮವಾರದಿಂದ ಎರಡು ದಿನಗಳ ಕಾಲ ಶೂಟಿಂಗ್ ನಡೆಯಲಿದೆ, ಸಾರಾ ಹರೀಶ್ ಕೂಡ ಮತ್ತೊಬ್ಬ ನಾಯಕಿಯಾಗಿದ್ದಾರೆ.
ಸಿನಿಮಾಗೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ, ಶೃತಿ ಪ್ರಕಾಶ್ ನಟನೆಯ ಲಂಡನ್ ನಲ್ಲಿ ಲಂಬೋದರ ಸಿನಿಮಾ ರಿಲೀಸ್ ಆಗಲು ಸಿದ್ದವಿದೆ.ಫಿದಾ ಸಿನಿಮಾದಲ್ಲೂ ಕೆಲಸ ಮಾಡಲು ಸಿದ್ದವಾಗಿದ್ದು, ಕಿರುತೆರೆಯ ಡ್ಯಾನ್ಸ್ ಶೋ ತಕಧಿಮಿತದಲ್ಲೂ ಭಾಗವಹಿಸಲಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.