ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ರಾಮಾಚಾರಿ ಮೂಲಕ ಸ್ಟಾರ್ ನಟರಾಗಿದ್ದ ರಾಕಿಂಗ್ ಸ್ಟಾರ್ ಯಶ್, ಇದೀಗ ತಮ್ಮ ನೂತನ ಬ್ಲಾಕ್ ಬಸ್ಚರ್ ಚಿತ್ರ ಕೆಜಿಎಫ್ ಮೂಲಕ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಅರೆ ಈ ಮಾತನ್ನು ನಾವು ಹೇಳುತ್ತಿರುವುದಲ್ಲ.. ಸ್ವತಃ ಗೂಗಲ್ ಹೇಳುತ್ತಿದೆ.
ಹೌದು...ನಟ ಯಶ್.. ಕನ್ನಡಿಗರ ಪಾಲಿಗೆ 'ರಾಕಿಂಗ್ ಸ್ಟಾರ್' ಅಂತಲೇ ಚಿರಪರಿಚಿತರಾಗಿರುವ ನಟ. ಆದರೆ ಅದ್ಯಾವಾಗ 'ಕೆಜಿಎಫ್' ತೆರೆಗೆ ಅಪ್ಪಳಿಸಿತೋ ಎಲ್ಲವೂ ಇತಿಹಾಸವಾಗಿ ಬಿಟ್ಟಿದೆ. ಯಶ್ ಇಡುವ ಪ್ರತಿ ಹೆಜ್ಜೆಯೂ ದಾಖಲೆಯಾಗುತ್ತಿದೆ. ಇಲ್ಲಿಯವರೆಗೂ 'ರಾಕಿಂಗ್ ಸ್ಟಾರ್' ಎನಿಸಿಕೊಂಡಿದ್ದ ಯಶ್ ಇದೀಗ ‘ನ್ಯಾಷನಲ್ ಸ್ಟಾರ್’ ಆಗಿಬಿಟ್ಟಿದ್ದಾರೆ.
ನಾವು ಯಾವುದೇ ಮಾಹಿತಿ ಬೇಕಿದ್ರೂ 'ಗೂಗಲ್' ಮೊರೆ ಹೋಗ್ತೀವಿ. ಗೂಗಲ್ ಸರ್ಚ್ನಲ್ಲಿ ನಮಗೆ ಅಗತ್ಯವಾಗಿರೋ ವಿಷಯವನ್ನು ಸರ್ಚ್ ಮಾಡಲು ಬಳಸುತ್ತೇವೆ. ಇದೀಗ ಈ ಗೂಗಲ್ ಸರ್ಚ್ ನಲ್ಲಿ 'ನ್ಯಾಷನಲ್ ಸ್ಟಾರ್' ಎಂದು ಟೈಪಿಸಿದರೆ 'ನ್ಯಾಷನಲ್ ಸ್ಟಾರ್ ಯಶ್' ಎಂಬ ಉತ್ತರ ಸಿಗುತ್ತಿದೆ. ಗೂಗಲ್ ಸರ್ಚ್ ನಲ್ಲಿ ‘ನ್ಯಾಷನಲ್ ಸ್ಟಾರ್ ಯಶ್’ ಎಂಬ ಸರ್ಚ್ ಕೀ ಹೆಚ್ಚಾಗಿದ್ದು, ಈ ಮೂಲಕ ಜಗತ್ತು ‘ರಾಕಿ’ಯನ್ನು ನ್ಯಾಷನಲ್ ಸ್ಟಾರ್ ಅಂತಲೇ ಗುರುತಿಸುತ್ತಿದೆ.
ಪಟ್ಟಿಯಲ್ಲಿ ನಟ ಕಿಚ್ಚಾ ಸುದೀಪ್ ಕೂಡ..
ಇನ್ನು ಕನ್ನಡದ ಮತ್ತೋರ್ವ ಸೂಪರ್ ಸ್ಟಾರ್ ನಟ ಕಿಚ್ಚಾ ಸುದೀಪ್ ಅವರ ಹೆಸರನ್ನೂ ಕೂಡ ನ್ಯಾಷನಲ್ ಸ್ಟಾರ್ ಪಟ್ಟಿಯಲ್ಲಿ ತೋರಿಸಲಾಗುತ್ತಿದ್ದು, ಈ ಹಿಂದೆ ನಟ ಸುದೀಪ್ ಎಸ್ ಎಸ್ ರಾಜಮೌಳಿ ಅವರ ಈಗ ಎಂಬ ಚಿತ್ರದ ಮೂಲಕ ದೇಶಾದ್ಯಂತ ಖ್ಯಾತಿ ಗಳಿಸಿದ್ದರು. ಇದಕ್ಕೂ ಮೊದಲು ಸುದೀಪ್ ಹಿಂದಿಯ ರಣ್, ಪೂಂಕ್, ಪೂಂಕ್ 2 ಚಿತ್ರಗಳಲ್ಲಿ ನಟಿಸಿ ಹಿಂದಿ ಪ್ರೇಕ್ಷಕರ ಅಭಿಮಾನ ಗಳಿಸಿದ್ದರು.
ಈ ಹಿಂದೆ ಇದೇ ರೀತಿ ಅಂದರೆ ಬಾಹುಬಲಿ ಚಿತ್ರ ಬಿಡುಗಡೆಯಾದಾಗ ತೆಲುಗು ನಟರಾದ ಪ್ರಭಾಸ್ ಮತ್ತು ಈಗ ಚಿತ್ರ ರಿಲೀಸ್ ಆದಾಗ ನಾನಿ ಅವರ ಹೆಸರುಗಳು ‘ನ್ಯಾಷನಲ್ ಸ್ಟಾರ್’ ಸರ್ಚ್ ಕೀನಲ್ಲಿ ಕಾಣಿಸಿಕೊಂಡಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos