ಜಾಗ್ವಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ಯ್ರಾಂಡ್ ಆಗಿ ಎಂಟ್ರಿ ಕೊಟ್ಟಿದ್ದ ನಿಖಿಲ್ ಕುಮಾರ್ ಇದೀಗ ಸೀತಾರಾಮ ಕಲ್ಯಾಣ ಚಿತ್ರದ ಮೂಲಕ ಮತ್ತೊಮ್ಮೆ ಕನ್ನಡಿಗರನ್ನು ರಂಜಿಸಲು ಬರುತ್ತಿದ್ದಾರೆ.
ಸೀತಾರಾಮ ಕಲ್ಯಾಣ ಚಿತ್ರ ಜನವರಿ 25ರಂದ ರಾಜ್ಯಾದ್ಯಂತ ಅದ್ಧೂರಿ ತೆರೆ ಕಾಣಲಿದೆ. ಇನ್ನು ತಮ್ಮ ವೃತ್ತಿ ಜೀವನದ ಕುರಿತಂತೆ ಮಾತನಾಡಿರುವ ನಿಖಿಲ್ ಕುಮಾರ್, ಇವತ್ತು ನನ್ನನ್ನು ಯಾರಾದರೂ ಸಿನಿಮಾ ಅಂದರೆ ಏನು ಎಂದು ಕೇಳಿದರೆ ಅದು ನನ್ನ ಪ್ರಪಂಚ ಎಂದು ಹೇಳುತ್ತೇನೆ. ಅಷ್ಟರ ಮಟ್ಟಿಗೆ ನಾನು ನನ್ನ ವೃತ್ತಿ ಜೀವನದಲ್ಲಿ ಮುಳುಗಿಹೋಗಿದ್ದೇನೆ ಎಂದರು.
ಸೀತಾರಾಮ ಕಲ್ಯಾಣ ಚಿತ್ರಕ್ಕೆ ಬಂದರೆ ನಿರ್ಮಾಪಕರು ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಕೆಲ ದಿನಗಳ ಹಿಂದೆ ನಾನು ಚಿತ್ರವನ್ನು ವೀಕ್ಷಿಸಿದ್ದೆ ನಿಜಕ್ಕೂ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಇನ್ನು ಪ್ರೇಕ್ಷಕ ಮಹಾಪ್ರಭುಗಳು ಏನು ತೀರ್ಪು ನೀಡುತ್ತಾರೋ ನೋಡಬೇಕು ಎಂದರು.
ನಾನು ರಾಜಕೀಯ ಹಿನ್ನಲೆಯಿಂದ ಬಂದವನು. ಅದರಿಂದಾಗಿ ನನ್ನನ್ನು ಬೆಂಬಲಿಸುತ್ತಿದ್ದಾರೆ. ಆದರೆ ಸಿನಿಮಾದ ಎಲ್ಲ ವಿಷಯಗಳಲ್ಲೂ ರಾಜಕೀವಾಗುವುದಿಲ್ಲ. ಇನ್ನು ವ್ಯತಿರಿಕ್ತ ಕಾಮೆಂಟ್ ಗಳು ಬರುತ್ತವೆ. ಅದನ್ನು ಮಾಡುವವರು ಚಿತ್ರವನ್ನು ನೋಡದೆ ಮಾಡಿದರೆ ಅವರನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ರಾಜಕೀಯ ಚರ್ಚೆ ನಡೆಯುವ ಪ್ರತಿ ಬಾರಿ ನನ್ನ ಹೆಸರು ಮತ್ತು ಚಿತ್ರಗಳನ್ನು ಬೆಳೆಸಲಾಗುತ್ತದೆ. ಕಾಲಾಂತರದಲ್ಲಿ ಬದಲಾವಣೆಗಳನ್ನು ನಾನು ಆಶಿಸುತ್ತಿದ್ದೇನೆ. ನನ್ನ ಪ್ರತಿಭೆ ಮೂಲಕ ನನ್ನನ್ನು ಗುರುತಿಸಿಕೊಳ್ಳಲು ಬಯಸುತ್ತೇನೆ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos