ದರ್ಶನ್ 'ಯಜಮಾನ'ದಲ್ಲಿ 'ಬಸಣ್ಣಿ'ಯಾದ ತಾನ್ಯಾ ಹೋಪ್ 
ಸಿನಿಮಾ ಸುದ್ದಿ

ದರ್ಶನ್ 'ಯಜಮಾನ'ದಲ್ಲಿ 'ಬಸಣ್ಣಿ'ಯಾದ ತಾನ್ಯಾ ಹೋಪ್

ದರ್ಶನ್ ಅಭಿನಯದ "ಯಜಮಾನ" ಚಿತ್ರದ ಮೂರನೇ ಹಾಡು ಇಂದು ಡಿಬೀಟ್ಸ್ ಮುಸಿಕ್ ನಲ್ಲಿ ಬಿಡುಗಡೆ ಆಗಲಿದ್ದು ಈ ಹಾಡು ಅದರದೇ ಆದ ವಿಶೇಷತೆ ಹೊಂದಿದೆ.

ಬೆಂಗಳೂರು: ದರ್ಶನ್ ಅಭಿನಯದ "ಯಜಮಾನ" ಚಿತ್ರದ ಮೂರನೇ ಹಾಡು ಇಂದು ಡಿಬೀಟ್ಸ್ ಮುಸಿಕ್ ನಲ್ಲಿ ಬಿಡುಗಡೆ ಆಗಲಿದ್ದು ಈ ಹಾಡು ಅದರದೇ ಆದ ವಿಶೇಷತೆ ಹೊಂದಿದೆ.ಇದು ಯೋಹ್ಗರಾಜ್ ಭಟ್ ಹಾಗೂ ಹರಿಕೃಷ್ಣ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಹಾಡಾಗಿದ್ದು ಯಶಸ್ವಿ ಜೋಡಿಯು ಈ ಚಿತ್ರದ ಐದು ಹಾಡಿನ ಪೈಕಿ ಎರಡು ಹಾಡುಗಳನ್ನು ಸಂಯೋಜನೆ ಮಾಡಿದೆ. 
ಇನ್ನೂ ವಿಶೇಷವೆಂಡರೆ ಈ ಹಾಡಿನಲ್ಲಿ ಚಿತ್ರದ ಇನ್ನೊಬ್ಬ ನಾಯಕಿ ತಾನ್ಯಾ ಹೋಪ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಬಸಣ್ಣಿ ಪಾತ್ರಧಾರಿಯಾಗಿರುವ ತಾನ್ಯಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಶ್ಮಿಕಾ ಮಂದಣ್ಣ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಡಿಸ್ಕೋ ಆಡ್ಬೇಕು.... ಹಾಡನ್ನು ಸಂಗೀತ ಸಂಯೋಜಕ ಹರಿಕೃಷ್ಣ ಅವರೇ ಹಾಡಿದ್ದು ಇವರೊಡನೆ ಹೊಸ ಗಾಯಕಿ ವರ್ಷಾ ಸಹ ದನಿಗೂಡಿಸಿದ್ದಾರೆ.
ಶೈಲಜಾ ನಾಗ್ ಹಾಗು ಬಿ. ಸುರೇಶ್ ನಿರ್ಮಾಣ ಸಂಸ್ಥೆ ಮೀಡಿಯಾಹೌಸ್ ಪ್ರೊಡಕ್ಶ್ಃಅನ್ ಬ್ಯಾನರ್ ನಡಿಯಲ್ಲಿ "ಯಜಮಾನ" ತಯಾರಾಗಿತ್ತಿದೆ.ಇದೀಗ ಚಿತ್ರತಂಡ ಸೆನ್ಸಾರ್ ಮಂಡಲಿಯ ನಿರ್ಧಾರಕ್ಕೆ ಕಾಯುತ್ತಿದ್ದು ಸೆನ್ಸಾರ್ ಮುಗಿದ ಬಳಿಕ ಬಿಡುಗಡೆಯ ದಿನಾಂಕ ಘೋಷಣೆಯಾಗಲಿದೆ.
ಚಿತ್ರ ಮುಂದಿನ ಫೆಬ್ರವರಿಯಲ್ಲಿ ತೆರೆಗೆ ಬರುವ ನಿರೀಕ್ಷೆ ಇದ್ದು ಖಳನಾಯಕನ ಪಾತ್ರದಲ್ಲಿಠಾಕೂರ್ ಅನೂಪ್ ಸಿಂಗ್ ನಟಿಸಿದ್ದಾರೆ. ಜತೆಗೆ ಧನಂಜಯ್ ಸಹ  ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?