ಸಿನಿಮಾ ಸುದ್ದಿ

ಕಾಮಿಡಿ ಕಿಲಾಡಿಗಳು ಕ್ಯೂಟ್ ಜೋಡಿ ಗೋವಿಂದೇ ಗೌಡ-ದಿವ್ಯಾಶ್ರೀ ಅದ್ಧೂರಿಯಾಗಿ ನಿಶ್ಚಿತಾರ್ಥ!

Vishwanath S
ಬೆಂಗಳೂರು: ಕಾಮಿಡಿ ಕಿಲಾಡಿಗಳು ಕ್ಯೂಟ್ ಜೋಡಿ ಗೋವಿಂದೇ ಗೌಡ ಮತ್ತು ದಿವ್ಯಾಶ್ರೀ ಅವರು ಭಾನುವಾರ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 
ಬೆಂಗಳೂರಿನ ಮುದ್ದಿನಪಾಳ್ಯದಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗೋವಿಂದೇ ಗೌಡ ಮತ್ತು ದಿವ್ಯಾಶ್ರೀ ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿದ್ದು ಕುಟುಂಬಸ್ಥರು ಹಾಗೂ ಆಪ್ತ ಸಂಬಂಧಿಕರು ಮಾತ್ರ ಆಗಮಿಸಿದ್ದರು. 
ದಿವ್ಯಾಶ್ರೀ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯವರಾಗಿದ್ದು ಮಾರ್ಚ್ 14ರಂದು ಶೃಂಗೇರಿಯಲ್ಲಿ ಇವರ ಮದುವೆ ನಡೆಯಲಿದೆ. ಸದ್ಯ ಇಬ್ಬರು ಚಿತ್ರಗಳಲ್ಲಿ ನಟಿಸುತ್ತಿದ್ದು ಗೋವಿಂದೇ ಗೌಡ ಅವರು ಕೆಜಿಎಫ್ ಚಿತ್ರದಲ್ಲಿ ಹಾಗೂ ದಿವ್ಯಾಶ್ರೀ ಅವರು ಪುಣ್ಯಾತ್ ಗಿತ್ತೀಯರು ಚಿತ್ರದಲ್ಲಿ ನಟಿಸಿದ್ದಾರೆ.
SCROLL FOR NEXT