ಗಣೇಶ್ 
ಸಿನಿಮಾ ಸುದ್ದಿ

'ಎಷ್ಟು ಸಾಧ್ಯವೋ ಅಷ್ಟು ನೈಜವಾಗಿ ಪಾತ್ರ ಮೂಡಿ ಬರುವಂತೆ ಪ್ರಯತ್ನಿಸಿದ್ದೇನೆ'

ಕಳೆದ ವರ್ಷದ ಡಿಸೆಂಬರ್ ನಲ್ಲಿ ಆರಂಭವಾದ ಪ್ರೀತಂ ಗುಬ್ಬಿ ನಿರ್ದೇಶನದ 99 ಸಿನಿಮಾ ಈಗಾಗಲೇ 35 ದಿನಗಳ ಶೂಟಿಂಗ್ ಪೂರ್ಣಗೊಳಿಸಿದೆ, ಚಿತ್ರತಂಡ ಕರಾವಳಿ ತೀರದಲ್ಲಿ ....

ಕಳೆದ ವರ್ಷದ ಡಿಸೆಂಬರ್ ನಲ್ಲಿ ಆರಂಭವಾದ ಪ್ರೀತಂ ಗುಬ್ಬಿ ನಿರ್ದೇಶನದ 99 ಸಿನಿಮಾ ಈಗಾಗಲೇ 35 ದಿನಗಳ ಶೂಟಿಂಗ್ ಪೂರ್ಣಗೊಳಿಸಿದೆ, ಚಿತ್ರತಂಡ ಕರಾವಳಿ ತೀರದಲ್ಲಿ ಹಗಲು ರಾತ್ರಿ ಸಿನಿಮಾ ಶೂಟಿಂಗ್ ಮಾಡುತ್ತಿದೆ,
ತಮಿಳಿನಲ್ಲಿ ವಿಜಯ್ ಸೇತುಪತಿ ನಟಿಸಿರುವ 96 ಸಿನಿಮಾದಿಂದ ಸ್ಪೂರ್ತಿಗೊಂಡು ಕನ್ನಡದಲ್ಲಿ 99 ಸಿನಿಮಾ ತಯಾರಾಗುತ್ತಿದೆ. ಕನ್ನಡ ವರ್ಸನ್ ನಲ್ಲಿ ಗಣೇಶ್ ಮತ್ತು ಭಾವನಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ, ಸಿನಿಮಾದ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ.
ಚಿತ್ರದಲ್ಲಿ ಗಣೇಶ್ ಲುಕ್ ಇರುವ ಸ್ಟಿಲ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ, ಪಾತ್ರಕ್ಕಾಗಿ ಗಣೇಶ್ ಸಂಪೂರ್ಣ ಬದಲಾಗಿದ್ದಾರೆ, ನನಗೆ ಪಾತ್ರ ಸಂಪೂರ್ಣ ಇಷ್ಟವಾಯಿತು, ನಾನು ಸಂಪೂರ್ಣ ಬದಲಾಗಲು ಸಹಾಯವಾಯಿತು. 
ಗಣೇಶ್ 25 ದಿನಗಳ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು. ನಂತರ ಹೆಚ್ಚುವರಿಯಾಗಿ 20 ದಿನಗಳ ಸಮಯ ನೀಡಿದ್ದಾರೆ.  ಚಿತ್ರದ ಪಾತ್ರದಲ್ಲಿ ನಾನು ನಾನಾಗಿದ್ದೇನೆ, ಸ್ವಾಭಾವಿಕವಾಗಿರುವಂತೆ ನೋಡಿಕೊಂಡಿದ್ದೇವೆ, ಎಷ್ಟು ಸಾಧ್ಯವೋ ಅಷ್ಟು ನೈಜವಾಗಿ ಪಾತ್ರ ಮೂಡಿ ಬರುವಂತೆ ಪ್ರಯತ್ನಿಸಿದ್ದೇನೆ ಎಂದು ಗಣೇಶ್ ಹೇಳಿದ್ದಾರೆ. 
20 ದಿನಗಳಲ್ಲಿ 3 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ, ಜೊತೆಗೆ ಗಡ್ಡ ಕೂಡ ಬೆಳೆಸಬೇಕಿತ್ತು, 99 ಚಿತ್ರದ ಚಿತ್ರೀಕರಣದಲ್ಲಿ ಆರಂಭವಾದ ಕೂಡಲೇ ನಾನು ಎಲ್ಲಾ ವರ್ಕೌಟ್ ಗಳನ್ನು ಬಿಟ್ಟಿದ್ದೇನೆ, ನಾನು ಸೆಟ್ ಗೆ ಹೋದಾಗ 4 ಕೆಜಿ ತೂಕ ಹೆಚ್ಚಾಗಿತ್ತು, ಈಗ ಗೀತಾ ಚಿತ್ರೀಕರಣಕ್ಕಾಗಿ, ಮತ್ತದೆ ಹಳೇಯ ಶೇಪ್ ಗೆ ಬರಲು ಕಠಿಣ ವ್ಯಾಯಾಮ ಮಾಡುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!