ಸಿನಿಮಾ ಸುದ್ದಿ

ಬಿಡುಗಡೆಗೆ ಮುನ್ನವೇ ಹೊಸ ದಾಖಲೆ ಬರೆದ ಪೈಲ್ವಾನ್: ಅತಿ ಹೆಚ್ಚು ಸ್ಕ್ರೀನ್ ಗಳಲ್ಲಿ ಕಿಚ್ಚನ ಕುಸ್ತಿ!

Shilpa D
ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಸಿನಿಮಾ  ಆಗಸ್ಟ್ ತಿಂಗಳಲ್ಲಿ ಕನ್ನಡ, ತೆಲುಗು, ತಮಿಳು ಸೇರಿದಂತೆ ಈ ಚಿತ್ರ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಪೈಲ್ವಾನ್ ಚಿತ್ರ ವಿಶ್ವದಾದ್ಯಂತ 2500 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ಆಗಸ್ಟ್ 8, 2019ರಂದು ಥೀಯಟರ್‌ನಲ್ಲಿ ಬಿಡುಗಡೆ ಕಾಣಲಿರುವ ಪೈಲ್ವಾನ್, ಭಾರೀ ನಿರೀಕ್ಷೆ ಮೂಡಿಸಿದೆ. 
ಬಿಗ್ ಬಜೆಟ್ ಹಾಗೂ ರಿಚ್ ಮೇಕಿಂಗ್ ಮೂಲಕ ಈಗಾಗಲೇ ಸಾಕಷ್ಟು ಗಮನಸೆಳೆದಿರುವ ಪೈಲ್ವಾನ್ ಚಿತ್ರವು ಇದೀಗ 2500 ತೆರೆಗಳಲ್ಲಿ ಮಿಂಚಲು ಸಜ್ಜಾಗಿದೆ. 
ಕಿಚ್ಚ ಸುದೀಪ್ ನಾಯಕತ್ವದ ಪೈಲ್ವಾನ್ ಚಿತ್ರವನ್ನು ಕೃಷ್ಣ ಅವರು ನಿರ್ಮಿಸಿ ನಿರ್ದೇಶನವನ್ನು ಸಹ ಮಾಡುತ್ತಿದ್ದಾರೆ. 
ಪೈಲ್ವಾನ್ ಚಿತ್ರದ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದೆ. ಸದ್ಯಕ್ಕೆ ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರದ ತಮಿಳು, ತೆಲುಗು ಮತ್ತು ಹಿಂದಿ ಡಿಸ್ಟ್ರಿಬ್ಯೂಷನ್ ರೈಟ್ಸ್ ಗಳ ಮಾತುಕತೆ ಫೈನಲ್ ಆಗುತ್ತಿದೆ.
ಸುದೀಪ್ ಗೆ ನಾಯಕಿಯಾಗಿ ಆಕಾಂಕ್ಷಾ ಸಿಂಗ್ ನಟಿಸಿದ್ದಾರೆ, ಬಾಲಿವುಡ್ ನಟ ಸುನೀಲ್ ಶೆಟ್ಟಿ ಪ್ರಪ್ರಥಮ ಬಾರಿಗೆ ಕನ್ನಡದಲ್ಲಿ ನಟಿಸುತ್ತಿದ್ದಾರೆ, ಸುಶಾಂತ್ ಸಿಂಗ್, ಕಬೀರ್ ಸಿಂಗ್ ಮುಂತಾದವರು ಅಭಿನಯಿಸಿದ್ದಾರೆ.
SCROLL FOR NEXT