ರಿಷಬ್ ಶೆಟ್ಟಿ ಅಭಿನಯದ "ಬೆಲ್ ಬಾತಮ್" ಈ ವರ್ಷದ ಸೂಪರ್ ಹಿಟ್ ಚಿತ್ರದಲ್ಲಿ ಒಂದಾಗಿರುವುದು ತಿಳಿದ ವಿಚಾರ. ಈಗ ರಿಷಬ್ ಶೆಟ್ಟಿ ಮುಂದಿನ ಚಿತ್ರಕ್ಕೆ ಜಯಣ್ಣ ಫಿಲ್ಮ್ಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.ಇದೀಗ ಚಿತ್ರತಂಡ ಅಧಿಕೃತ ಶೀರ್ಷಿಕೆ ಹಾಗೂ ಪೋಸ್ಟರ್ ಪ್ರಕಟಿಸಿದ್ದು ಇದೊಂದು ಥ್ರಿಲ್ಲರ್ ಚಿತ್ರವಾಗಿರಲಿದೆ.
ಚಿತ್ರಕ್ಕೆ "ರುದ್ರಪ್ರಯಾಗ" ಎಂದು ಹೆಸರಿಟ್ಟಿರುವ ರಿಷಬ್ ಶೆಟ್ಟಿ ಕಥಾಹಂದರ ಅಥವಾ ಪಾತ್ರಗಳ ಬಗ್ಗೆ ಹೆಚ್ಚಿನ ಸುಳಿವು ನೀಡಿಲ್ಲ. ಚಿತ್ರ ಮುಖ್ಯವಾಗಿ ಬೆಳಗಾವಿ, ರುದ್ರಪ್ರಯಾಗದಲ್ಲಿ ಶೂಟ್ ಆಗಿರಲಿದೆ.“ಪ್ರಯಾಗ್ ಎಂದರೆ ಹಿಂದಿಯಲ್ಲಿ ಸಂಗಮ, ಮತ್ತು ಈ ವಿಷಯವು ರುದ್ರಪ್ರಯಾಗಕ್ಕೆ ಸಂಬಂಧಿಸುತ್ತದೆ. ನೀವು ಪೋಸ್ಟರ್ ಅನ್ನು ತಲೆಕೆಳಗು ಂಆಡಿ ನೋಡಿದರೆ ನಿಮಗದರ ಅರಿವಾಗಲಿದೆ"
ಅಲಕ್ ನಂದಾ, ಮಂದಾಕಿನಿ ನದಿಗಳ ಸಂಗಮ ಸ್ಥಳ ರುದ್ರಪ್ರಯಾಗ. ಚಿತ್ರದಲ್ಲಿ ಎರಡು ವಿಭಿನ್ನ ಪಾತ್ರವಿರಲಿದೆ.ಅದರಲ್ಲಿ ಒಂದು ಬಹಳ ಶಾಂತತೆಯಿಂದದ್ದ್ರೆ ಇನ್ನೊಂದು ಅಷ್ಟೇ ರೋಚಕವಾಗಿರಲಿದೆ.ಮುಂದೆ ಆ ಎರಡೂ ನದಿಗಳು ಗಂಗೆಯನ್ನು ಸೇರುತ್ತದೆ. ಹಾಗೆಯೇ ಚಿತ್ರದಲ್ಲಿ ಸಹ ಆ ಎರಡೂ ಪಾತ್ರಗಳು ಒಂದು ಕಡೆ ಸಂಗಮಿಸುತ್ತದೆ. ಪೋಸ್ಟರ್‌ನ ಭಾಗವೊಂದರಲ್ಲಿ ಭಾರತದ ಧ್ವಜ, ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಹಾಗೂ ಸರೋವರವನ್ನು ತೋರಿಸಿದೆ.ಈ ಎರಡು ಸ್ಥಳಗಳು ನನ್ನ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ”ರಿಷಬ್ ಪ್ರಕಾರ, ರುದ್ರಪ್ರಯಾಗದಲ್ಲಿ ಚಿರತೆಯನ್ನು ಸೇರಿಸುವುದು ಪ್ರೇಕ್ಷಕರಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ, ಮತ್ತು ಈ ಕುತೂಹಲ ತಣಿಯಲು ಚಿತ್ರ ಬಿಡುಗಡೆಯವರೆಗೆ ಕಾಯಬೇಕಿದೆ.