ಶ್ರೀದೇವಿ 
ಸಿನಿಮಾ ಸುದ್ದಿ

ಮೋಹಕ ತಾರೆ ಶ್ರೀದೇವಿ ಸಾವು ಆಕಸ್ಮಿಕವಲ್ಲ, ಕೊಲೆ: ಬಿರುಗಾಳಿ ಎಬ್ಬಿಸಿದ ಕೇರಳ ಡಿಜಿಪಿ, ಮೂರ್ಖರು ಎಂದ ಬೋನಿ!

ಬಹುಭಾಷಾ ನಟಿ, ಮೋಹಕ ತಾರೆ ಶ್ರೀದೇವಿ ಸಾವು ಆಕಸ್ಮಿಕವಲ್ಲ, ಕೊಲೆ ಎಂದು ಕೇರಳ ಡಿಜಿಪಿ ಹೇಳಿದ್ದು ಈ ವಿಚಾರ ಇದೀಗ ದೇಶಾದ್ಯಂತ ಬಿರುಗಾಳಿ ಎಬ್ಬಿಸಿದೆ.

ಬಹುಭಾಷಾ ನಟಿ, ಮೋಹಕ ತಾರೆ ಶ್ರೀದೇವಿ ಸಾವು ಆಕಸ್ಮಿಕವಲ್ಲ, ಕೊಲೆ ಎಂದು ಕೇರಳ ಡಿಜಿಪಿ ಹೇಳಿದ್ದು ಈ ವಿಚಾರ ಇದೀಗ ದೇಶಾದ್ಯಂತ ಬಿರುಗಾಳಿ ಎಬ್ಬಿಸಿದೆ. 
ಕೇರಳದ ಕಾರಾಗೃಹ ಡಿಜಿಪಿ ರಿಷಿರಾಜ್ ಸಿಂಗ್ ಅವರು ತಣ್ಣಗಾಗಿದ್ದ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದ್ದರಿಂದ ಸದ್ಯ ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಧಿವಿಜ್ಞಾನ ತಜ್ಞ ಡಾ. ಉಮಾದಥನ್ ಜೊತೆ ಶ್ರೀದೇವಿ ಸಾವಿನ ಬಗ್ಗೆ ಮಾತನಾಡಿದ್ದರಂತೆ ಆಗ ಅವರು ಶ್ರೀದೇವಿಯದ್ದು ಆಕಸ್ಮಿಕ ಸಾವಲ್ಲ. ಕೊಲೆ ಇರಬಹುದು ಎಂದು ಶಂಕಿಸಿದ್ದರು ಎಂದು ರಿಷಿರಾಜ್ ಸಿಂಗ್ ಹೇಳಿದ್ದಾರೆ. 
ಯಾರಾದರು ಆಗಲಿ ಒಂದೂವರೆ ಅಡಿ ಬಾತ್ ಟಬ್ ನಲ್ಲಿ ಯಾರೂ ಮುಳುಗಿ ಸಾಯುವುದಿಲ್ಲ ಎಂದು ಉಮಾದಥನ್ ನನ್ನ ಬಳಿ ಹೇಳಿದ್ದರು. ಟಬ್ ನಲ್ಲಿ ಕಡಿಮೆ ನೀರಿತ್ತು. ಹಾಗಾಗಿ ಯಾರೋ ಅವರ ಮುಖವನ್ನು ಗಟ್ಟಿಯಾಗಿ ಒತ್ತಿ ನೀರಿನಲ್ಲಿ ಮುಳುಗಿಸಿರಬೇಕು. ಹಾಗಿದ್ದಾಗ ಮಾತ್ರ ಸಾವು ಸಂಭವಿಸುತ್ತದೆ ಎಂದು ಅವರು ಹೇಳಿಕೊಂಡಿದ್ದರು ಎಂದು ರಿಷಿರಾಜ್ ಸಿಂಗ್ ಹೇಳಿದ್ದಾರೆ.
ರಿಷಿರಾಜ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶ್ರೀದೇವಿ ಪತಿ ಬೋನಿ ಕಪೂರ್ ಅವರು ಮೂರ್ಖರು ಇಂಥ ಹೇಳಿಕೆ ನೀಡುತ್ತಿರುತ್ತಾರೆ.

2018ರ ಫೆಬ್ರವರಿ 24ರಂದು ಶ್ರೀದೇವಿ ಅವರು ದುಬೈನ ಹೋಟೆಲ್ ಒಂದರಲ್ಲಿ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

SCROLL FOR NEXT