ಪವನ್ ಕುಮಾರ್ 
ಸಿನಿಮಾ ಸುದ್ದಿ

ಬಾಲಿವುಡ್ ಅಂಗಳದಲ್ಲಿ 'ಲೂಸಿಯಾ' ಡೈರೆಕ್ಟರ್, ಹಿಂದಿ ಚಿತ್ರಕ್ಕೆ ಪವನ್ ಕುಮಾರ್ ಆಕ್ಷನ್ ಕಟ್

ದಕ್ಷಿಣ ಭಾರತದ ಅನೇಕ ನಿರ್ದೇಶಕರು, ನಿರ್ಮಾಪಕರು ಬಾಲಿವುಡ್ ಗೆ ಪ್ರವೇಶಿಸಿ ಅಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆಗಿಳಿಯುವುದು ಇತ್ತೀಚೆಗೆ ಸಾಮಾನ್ಯವೆನಿಸಿದೆ. ಇದೀಗ ಇಂತಹಾ ನಿರ್ದೇಶಕರ ಸಾಲಿಗೆ....

ದಕ್ಷಿಣ ಭಾರತದ ಅನೇಕ ನಿರ್ದೇಶಕರು, ನಿರ್ಮಾಪಕರು ಬಾಲಿವುಡ್ ಗೆ ಪ್ರವೇಶಿಸಿ ಅಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆಗಿಳಿಯುವುದು ಇತ್ತೀಚೆಗೆ ಸಾಮಾನ್ಯವೆನಿಸಿದೆ. ಇದೀಗ ಇಂತಹಾ ನಿರ್ದೇಶಕರ ಸಾಲಿಗೆ ಕನ್ನಡ ನಿರ್ದೇಶಕ ಪವನ್ ಕುಮಾರ್. ಸಹ ಸೇರ್ಪಡೆಗೊಂಡಿದ್ದಾರೆ. "ಲೈಫು ಇಷ್ಟೇನೆ" ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದ ನಿರ್ದೇಶಕ "ಲೂಸಿಯಾ" ಮೂಲಕ ಜನಮೆಚ್ಚುಗೆಗೆ ಪಾತ್ರರಾದರು. ಇದೀಗ ಅವರು ಹಿಂದಿ ಚಲನಚಿತ್ರೋದ್ಯಮಕ್ಕೆ ಕಾಲಿಡುತ್ತಿದ್ದಾರೆ.
ಪವನ್ ಅವರ ಕೊನೆಯ ಬಹುಭಾಷಾ ಚಿತ್ರ ಸಮಂತಾ ಅಕ್ಕಿನೇನಿ ಅಭಿನಯದ ತಮಿಳು ಮತ್ತು ತೆಲುಗಿನ "ಯುಟರ್ನ್" ರೀಮೇಕ್ ಆಗಿತ್ತು.  ಚಿತ್ರದ ರಿಮೇಕ್. ಅವತರಣಿಕೆ ಬಳಿಕ ವೆಬ್ ಸರಣಿ ಲೀಲಾ ಮೂಲಕ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ದೇಶನ ಮಾಡಿದ ಅವರು ಈಗ ಹಿಂದಿ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ.ಇದರ ಬಗೆಗೆ ಪವನ್ ಇಲ್ಲಿವರೆಗೂ ಗುಟ್ಟು ಬಿಟ್ಟುಕೊಟ್ಟಿಲ್ಲ.ಆದರೆ, ನಿರ್ದೇಶಕರು ದೊಡ್ಡ ಪ್ರೊಡಕ್ಷನ್ ಹೌಸ್ ಜೊತೆ  ಸಂಪರ್ಕದಲ್ಲಿದ್ದಾರೆ,  ಬಾಲಿವುಡ್ ನ ದೊಡ್ಡ ನಾಯಕನ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪವನ್ ಪ್ರಸ್ತುತ ಚಿತ್ರಕಥೆಯನ್ನು ಸಿದ್ಧಪಡಿಸುತ್ತಿದ್ದು, ಸೆಪ್ಟೆಂಬರ್‌ನಲ್ಲಿ ನಿರ್ದೇಶಕ ಈ ಸಂಬಂಧ ಅಧಿಕೃತ ಘೋಷಣೆ ಮಾಡಲಿದ್ದಾರೆ.
ಇನ್ನು ನಿರ್ದೇಶಕರ ಯೋಜನೆಯ ತಯಾರಿಯನ್ನು ಕಂಡರೆ ಚಿತ್ರವು ವರ್ಷಾಂತ್ಯದಲ್ಲಿ ಅಥವಾ 2020 ರ ಆರಂಭದಲ್ಲಿ ಸೆಟ್ತೇರಲಿದೆ ಎಂದು ನಿರೀಕ್ಷಿಸಲಾಗಿದೆ.
ನಿರ್ದೇಶಕರು C10H14N2. ಎಂಬ ಹೆಸರಿನ ನಿಕೋಟಿನ್ ನ ರಾಸಾಯನಿಕ ಸೂತ್ರದ ಮೇಲೆ ಚಿತ್ರ ಮಾಡಲು ಬಯಸುತ್ತಿದ್ದಾರೆ. ಇದನ್ನು ಈಗ ಹಿಂದಿಯಲ್ಲಿ ಮಾಡಲಾಗುತ್ತದೆಯೇ ಅಥವಾ ಬೇರೆ ಭಾಷೆಯಲ್ಲಿ ತಯಾರಿಸಲಾಗುತ್ತದೆಯೆ ಎನ್ನುವುದು  ಪ್ರೊಡಕ್ಷನ್ ಹೌಸ್ ಅದನ್ನು ಅಧಿಕೃತಗೊಳಿಸಿದ ನಂತರವೇ ಬಹಿರಂಗವಾಗಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT