ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಕೊನೆಗೂ ಬಾಡಿಗೆ ಮನೆ ಖಾಲಿ ಮಾಡಿದ ರಾಕಿಂಗ್​ ಸ್ಟಾರ್​ ಯಶ್

ರಾಕಿಂಗ್ ಸ್ಟಾರ್ ಯಶ್ ಕುಟುಂಬದ ಬಾಡಿಗೆ ಮನೆ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಬೆಂಗಳೂರಿನ ಬನಶಂಕರಿಯಲ್ಲಿ ತಾವು ವಾಸಿಸುತ್ತಿದ್ದ...

ಯಶ್, ಬಾಡಿಗೆ ಮನೆ
Lingaraj Badiger
Updated On : 7 Jun 2019, 5:37 am
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಕುಟುಂಬದ ಬಾಡಿಗೆ ಮನೆ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಬೆಂಗಳೂರಿನ ಬನಶಂಕರಿಯಲ್ಲಿ ತಾವು ವಾಸಿಸುತ್ತಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿ ಮಾಲೀಕರಿಗೆ ಒಪ್ಪಿಸಿದ್ದಾರೆ.
ನಟ ಯಶ್ ಅವರು ಕೋರ್ಟ್ ಆದೇಶದಂತೆ ಮೇ 31ರೊಳಗೆ ಅದೃಷ್ಟದ ಮನೆ ಎಂದೇ ಕರೆಯಲಾಗಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಬೇಕಾಗಿತ್ತು. ಆದರೆ ಕೋರ್ಟ್ ಆದೇಶ ಉಲ್ಲಂಘಿಸಿ ಇನ್ನೂ ಮನೆ ಖಾಲಿ ಮಾಡದ ಬಗ್ಗೆ ನಿನ್ನೆ ಮಾಧ್ಯಮಗಳು ವರದಿ ಮಾಡಿದ ನಂತರ ಎಚ್ಚೆತ್ತುಕೊಂಡ ಯಶ್ ಕೋರ್ಟ್ ಆದೇಶದ ಪ್ರಕಾರ ಎರಡು ತಿಂಗಳು ಬಾಡಿಗೆ 80 ಸಾವಿರ ರೂ.ಗಳ ಡಿಡಿಯನ್ನು ಮಾಲೀಕರಿಗೆ ಹಸ್ತಾಂತರ ಮಾಡಿ, ಮನೆ ಖಾಲಿ ಮಾಡಿದ್ದಾರೆ ಎನ್ನಲಾಗಿದೆ.
ಮೇ 31 ಮುಗಿದರೂ ಯಶ್ ಕುಟುಂಬ ಮನೆ ಖಾಲಿ ಮಾಡಿಲ್ಲ ಎಂದು ಮನೆ ಮಾಲೀಕರು ಮತ್ತೆ ಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದ್ದರು ಎನ್ನಲಾಗಿದೆ. ಅಷ್ಟರಲ್ಲಿ, ಇಂದು ಯಶ್ ಕುಟುಂಬ ಮನೆ ಖಾಲಿ ಮಾಡಿ ಕೀಯನ್ನು ಮನೆ ಮಾಲೀಕರಾದ ಡಾ. ಮುನಿಪ್ರಸಾದ್ ಅವರಿಗೆ ಹಸ್ತಾಂತರಿಸಿದೆ. ಅಲ್ಲದೆ ಬಾಕಿ ಉಳಿದಿದ್ದ 23 ಲಕ್ಷ ರೂ. ಹಣವನ್ನು ನೀಡಿ ವಿವಾದಕ್ಕೆ ತೆರೆ ಎಳೆದಿದ್ದಾರೆ ಎನ್ನಲಾಗಿದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement