ಐ ಲವ್ ಯೂ ಚಿತ್ರದ ಹಾಡಿನಲ್ಲಿ ರಚಿತಾ ರಾಮ್ ಮತ್ತು ಉಪೇಂದ್ರ 
ಸಿನಿಮಾ ಸುದ್ದಿ

'ಐ ಲವ್ ಯೂ' ಚಿತ್ರದ ಒಂದು ಹಾಡಿನಿಂದ ತೀರ್ಮಾನಕ್ಕೆ ಬರಬೇಡಿ: ರಚಿತಾ ರಾಮ್

ಇಲ್ಲಿಯವರೆಗೆ ಯಶಸ್ವಿ ಕಮರ್ಷಿಯಲ್ ಹೀರೋಯಿನ್ ಎನಿಸಿಕೊಂಡಿರುವ ರಚಿತಾ ರಾಮ್ ತಮ್ಮ ...

ಇಲ್ಲಿಯವರೆಗೆ ಯಶಸ್ವಿ ಕಮರ್ಷಿಯಲ್ ಹೀರೋಯಿನ್ ಎನಿಸಿಕೊಂಡಿರುವ ರಚಿತಾ ರಾಮ್ ತಮ್ಮ ಮುಂಬರುವ ಐ ಲವ್ ಯೂ ಚಿತ್ರದಲ್ಲಿ ಹೊಸ ರೀತಿಯಲ್ಲಿ ಕಾಣಿಸಿಕೊಂಡಿದ್ದು ಈ ಬಗ್ಗೆ ಅಭಿಮಾನಿಗಳ ಚರ್ಚೆ ಮುಂದುವರಿದಿದೆ.  
ಚಿತ್ರದಲ್ಲಿ ರಚಿತಾ ರಾಮ್ ಮಾಡಿರುವ ಕೆಲವು ಬೋಲ್ಡ್ ದೃಶ್ಯಗಳ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು, ಉಪೇಂದ್ರ ಅವರ ಜೊತೆಗಿನ ನಟನೆ ಮತ್ತು ಆರ್ ಚಂದ್ರು ಅವರ ನಿರ್ದೇಶನದ ಬಗ್ಗೆ ಮಾತನಾಡಿದ್ದಾರೆ. 
ಐ ಲವ್ ಯೂ ಚಿತ್ರ ಆಕರ್ಷಣೆ ಅಥವಾ ವ್ಯಾಮೋಹದ ಬಗ್ಗೆ ಸಿನಿಮಾ ಅಲ್ಲ, ಅದರಲ್ಲಿ ಜೀವನದ ಬಗ್ಗೆ ಇದೆ. ಧರ್ಮಿಕಾ ಎಂಬ ಪಾತ್ರ ನನ್ನದಾಗಿದ್ದು ರೊಮ್ಯಾನ್ಸ್, ಸೆಕ್ಸ್ ಮತ್ತು ಜೀವನವನ್ನು ವಿಭಿನ್ನವಾಗಿ ಇಲ್ಲಿ ಪಾತ್ರ ನೋಡುತ್ತದೆ. ಪ್ರೀತಿಯಲ್ಲಿನ ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಪಾತ್ರದ ಮೂಲಕ ತೋರಿಸಲಾಗಿದೆ. ಜೀವನದಲ್ಲಿ ಯಾರೂ ಶೇಕಡಾ 100ರಷ್ಟು ಪ್ರೀತಿಯನ್ನು ಒಬ್ಬ ವ್ಯಕ್ತಿಗೆ ತೋರಿಸಲು ಸಾಧ್ಯವಿಲ್ಲ. ಪ್ರೀತಿ ಪೋಷಕರು, ಸೋದರರು, ಸ್ನೇಹಿತರು ಮತ್ತು ಸಂಗಾತಿ ಮಧ್ಯೆ ಬೇರೆ ಬೇರೆಯಾಗಿರುತ್ತದೆ. ಪ್ರೀತಿಯಲ್ಲಿ ಸ್ವಾಮ್ಯತೆ ಮುಖ್ಯವಾಗುತ್ತದೆ.
ಚಿತ್ರದಲ್ಲಿನ ಬೋಲ್ಡಿಂಗ್ ದೃಶ್ಯಗಳ ಬಗ್ಗೆ ನಾನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ. ಚಿತ್ರೀಕರಣಕ್ಕೆ ಮೊದಲ ದಿನ ಹೋಗುವಾಗ ನನ್ನ ತಲೆಯಲ್ಲಿ ಯಾವುದೇ ಯೋಚನೆಗಳಿರಲಿಲ್ಲ. ಲವ್ವರ್ ಗಳು 5 ವರ್ಷಗಳ ನಂತರ ಭೇಟಿಯಾದರೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ, ಅಂತಹದ್ದೇ ಭಾವನೆಯನ್ನು ಈ ಹಾಡಿನಲ್ಲಿ ನನ್ನ ಮತ್ತು ಉಪೇಂದ್ರ ಅವರ ಪಾತ್ರದ ಮೂಲಕ ನಿರ್ದೇಶಕರು ತೋರಿಸಿದ್ದಾರೆ ಎಂದರು ರಚಿತಾ ರಾಮ್.
ಈ ಹಾಡಿನಲ್ಲಿ ನಟಿಸುವಾಗ ಆರಂಭದಲ್ಲಿ ತೀವ್ರ ಮುಜುಗರಕ್ಕೀಡಾಗಿದ್ದೆ. ಆಗ ಉಪೇಂದ್ರ ಅವರೇ ನನಗೆ ಪಾತ್ರದೊಳಗೆ ಲೀನವಾಗುವಂತೆ ಹೇಳಿ ಸುಲಭವಾಗಿ ನಟಿಸುವಂತೆ ಹೇಳಿದರು. ಈ ಹಾಡಿಗೆ ಅವರೇ ನಿರ್ದೇಶನ ಮಾಡಿದರು ಎಂದು ಹೇಳಬಹುದು. ಬಹುತೇಕ ಮಂದಿಗೆ ನಾನು ಬೋಲ್ಡ್ ಆಗಿ ನಟಿಸಿರುವುದು ಇಷ್ಟವಾಗಲಿಲ್ಲ. ಆದರೆ ಶೇಕಡಾ 20ರಷ್ಟು ಮಂದಿ ಇಷ್ಟಪಟ್ಟವರೂ ಇದ್ದಾರೆ. ನಾನು ಹಿಂದಿನ ಚಿತ್ರಗಳಲ್ಲಿ ಇಂತಹ ಪಾತ್ರಗಳನ್ನು ಮಾಡದಿದ್ದರಿಂದ ನನ್ನ ಅಭಿಮಾನಿಗಳಿಗೆ ಇಷ್ಟವಾಗದಿರಬಹುದು. ಆದರೆ ಇನ್ನು ಮುಂದೆ ಇಂತಹ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದರು ರಚಿತಾ.
ಐ ಲವ್ ಯೂ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವ ಸಿನಿಮಾ. ಕೇವಲ ಒಂದು ಹಾಡಿನಿಂದ ನಾಯಕಿ ಪಾತ್ರವನ್ನು ಅಥವಾ ಚಿತ್ರದ ಬಗ್ಗೆ ತೀರ್ಮಾನಕ್ಕೆ ಬರಬೇಡಿ ಎಂದು ಮನವಿ ಮಾಡಿಕೊಂಡರು ರಚಿತಾ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT